3:36 AM Saturday6 - December 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ: ಆಕಸ್ಮಿಕ ಗುಂಡಿನ ಚೂರು ತಗುಲಿ ಇಬ್ಬರು ಯುವಕರಿಗೆ ಗಾಯ ರಾಷ್ಟ್ರವ್ಯಾಪಿ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಸಚಿವ ಡಾ. ಶರಣಪ್ರಕಾಶ್‌ ಒತ್ತಾಯ ಸೌರಶಕ್ತಿಗೆ 3ನೇ ಅತಿದೊಡ್ಡ ಕೊಡುಗೆದಾರ ಭಾರತ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ Shivamogga | ಬಸ್ ಚಾಲಕನ ಅತೀ ವೇಗ, ಅಜಾಗರೂಕತೆ: ಬೈಕ್ ಸವಾರ ಗಂಭೀರ ತೋಟಕ್ಕೆ ತೆರಳಿದ್ದ ಸಂದರ್ಭ ಏಕಾಏಕಿ ಹೆಜ್ಜೇನು ದಾಳಿ: ಮಹಿಳೆ ಸಹಿತ 3 ಮಂದಿಗೆ… ವಿರಾಜಪೇಟೆ | ಕ್ಷುಲ್ಲಕ ಕಾರಣ: ಕುಡಿದ ಮತ್ತಿನಲ್ಲಿ ನಡುರಸ್ತೆಯಲ್ಲಿ ಯುವಕರ ಮಾರಮಾರಿ..!! “ಸ್ವಸ್ಥ ಮೈಸೂರು” ಅಭಿಯಾನ ಒಪ್ಪಂದಕ್ಕೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಹಿ New Delhi | ಬೆಳ್ಳಿ ವಸ್ತು, ಆಭರಣಗಳಿಗಿನ್ನು BIS ಹಾಲ್‌ಮಾರ್ಕ್‌, HUID ಕಡ್ಡಾಯ ರಾಜ್ಯ ಸರಕಾರ ಅನ್ನದಾತ ರೈತನ ಬಗ್ಗೆ ಕಾಳಜಿ ವಹಿಸುತ್ತಿಲ್ಲ: ಮಾಜಿ ಗೃಹ ಸಚಿವ… ವಿಶೇಷ ಚೇತನರು ಇನ್ನು ವಿಮಾನವೇರುವುದು ಸುಲಭ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ಮೊಬಿಲಿಟಿ…

ಇತ್ತೀಚಿನ ಸುದ್ದಿ

ಒಂದೆಡೆ ಪಾದಯಾತ್ರೆಗೆ ಸಿದ್ದತೆ; ಇನ್ನೊಂದೆಡೆ ಭಿನ್ನಮತದ ಹೊಗೆ; ರಾಜ್ಯ ಬಿಜೆಪಿಯಲ್ಲಿ ನಡೆಯುತ್ತದೆಯೇ ಅಂತರ್ಯುದ್ಧ?

02/08/2024, 00:21

ಬೆಂಗಳೂರು(reporterkarnataka.com): ಒಂದು ಕಡೆ ಮುಡಾ ಹಗರಣದ ವಿರುದ್ದ ಪಾದಯಾತ್ರೆಗೆ ಸಿದ್ದವಾಗಿರುವ ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಹೊಗೆ ಏಳಲಾರಂಭಿಸಿದೆ. ಪಕ್ಷದ ಕೆಲವು ಹಿರಿಯ ನಾಯಕರು ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಶುಕ್ರವಾರ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ದ ಸದಾ ಗುಟುರ್ ಹಾಕುತ್ತಿರುವ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಈ ಸಭೆಯ ಮುಂದಾಳತ್ವ ವಹಿಸಿಕೊಂಡಿದ್ದಾರೆ. ಉಳಿದಂತೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹಾಗೂ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸೇರಿಕೊಂಡಿದ್ದಾರೆ‌.
ಯತ್ನಾಳ್ ಅವರು ಆರಂಭದಿಂದಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಾಯಕತ್ವಕ್ಕೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರನ್ನು ಕೂಡ ವಿರೋಧಿಸುತ್ತಲೇ ಬಂದಿದ್ದಾರೆ. ಇದೀಗ ಯತ್ನಾಳ್ ಪಾಳಯಕ್ಕೆ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಹಾಗೂ ಪ್ರತಾಪ್ ಸಿಂಹ ಸೇರಿಕೊಂಡಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ನಾಯಕರು ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಇಲ್ಲಿ ಚರ್ಚೆ ನಡೆಸಲಾಗಿದೆ. ಮತ್ತೊಂದಿಷ್ಟು ಅತೃಪ್ತ ನಾಯಕರನ್ನು ಸೇರಿಸಿಕೊಂಡು ಇನ್ನೊಂದು ಸಭೆ ನಡೆಸಿ ವಿಜಯೇಂದ್ರ ಬಣದ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಇನ್ನು ಮೈಸೂರು ಪಾದಯಾತ್ರೆಯಲ್ಲಿ ಭಾಗವಹಿಸದಿರಲು ನಾಯಕರು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ನಾಳೆ ಇನ್ನಷ್ಟು ನಾಯಕರುಗಳು ಸೇರಿಕೊಂಡು ಮತ್ತೊಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು