3:10 PM Sunday16 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಭಾರೀ ಗಾಳಿ ಮಳೆ: ಮನೆಯ ಮೇಲ್ಛಾವಣಿ ಕುಸಿತ; ಅದೃಷ್ಟವಶಾತ್ ಮನೆ ಮಂದಿ ಪಾರು

16/07/2024, 21:54

ಶಶಿ ಬೆತ್ತದಕೊಳಲು ಕೊಪ್ಪ

info.reporterkarnataka@gmail.com

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅವ್ಯಾಹತ ಮಳೆಯಿಂದ ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲೆಹೊಂಡ ಗ್ರಾಮದ ಮನೆಯೊಂದರ ಮೇಲ್ಛಾವಣಿ ಕುಸಿದಿದೆ.
ಗಾಳಿ ಮಳೆ ಅಬ್ಬರದಿಂದ ರಾತ್ರಿ 2.30 ಸುಮಾರಿಗೆ ಸೀತು ಎಂಬವರ ಮೇಲ್ಫಾವಣಿ ಕುಸಿದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.


ರಾತ್ರಿ ಮಲಗಿದ ವೇಳೆ ಕುಸಿದಿದ್ದರಿಂದ ಎದ್ದು ಹೊರ ಓಡಿ ಹೋಗಿದ್ದಾರೆ. ನಂತರ ನೋಡಿದಾಗ ಮನೆ ಮೇಲ್ಛಾವಣಿ ಸಂಪೂರ್ಣ ಬಿದ್ದಿದ್ದು ಗೋಡೆ ಕೂಡ ಬಿರುಕುಗೊಂಡಿದೆ.
ಸೀತು ಹಾಗೂ ಸೀತು ಅವರ ಗಂಡ ಬೆಳ್ಳಯ್ಯ, ಹೇಮಾವತಿ(ಸೊಸೆ) ಮಕ್ಕಳು ಮಲಗಿದ್ದ ವೇಳೆಯೆ ಘಟನೆ ನಡೆದಿದೆ.
ಹೆಂಚು ಹಾಗೂ ಕೆಲ ಸಾಮಾಗ್ರಿಗಳು ಹಾನಿಯಾಗಿದೆ.
ಘಟನೆ ನಡೆದ ಮೇಲೆ ಪಕ್ಕದ ಮನೆಗೆ ಹೋಗಿ ಉಳಿದಿದ್ದಾರೆ.
ಸ್ಥಳಕ್ಕೆ ಗುಡ್ಡೆತೋಟ ಗ್ರಾಮ ಪಂಚಾಯಿತಿ ಪಿಡಿಓ ಶೋಭಾ, ಗ್ರಾಮ ಪಂಚಾಯತಿ ಸದಸ್ಯರಾದ ಕೀರ್ತಿರಾಜ್, ಶೈಲಾ, ರವಿ, ರೇಖಾ ಹಾಗೂ ಗ್ರಾಮಸ್ಥರು ಭೇಟಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು