4:13 AM Monday27 - July 2026
ಬ್ರೇಕಿಂಗ್ ನ್ಯೂಸ್
Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ… ನೀಟ್ ಪ್ರತಿಭಟನೆ | ಹೋರಾಟಗಾರರಿಗೆ ಉಚಿತ ಆಹಾರ ಹಂಚಿದವನ ಬಂಧನ; ನನ್ನನ್ನು ಅಪಹರಿಸಿದ್ದರು:… *ಲಗೇಜ್​ ರೂಮ್​ನಲ್ಲಿ ಹೊಗೆ: ರಾಜ್‌ಕೋಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ 194 ಮಂದಿ ಹೊತ್ತೊಯ್ಯುತ್ತಿದ್ದ… ಕುಶಾಲನಗರ: ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಯಶಸ್ವಿ ಕಾರ್ಯಾಚರಣೆ ಮುಸ್ಲಿಮರು ಮಾತನಾಡಿದ್ರೆ ಟೆರರಿಸ್ಟ್, ಚಿಂತಕರು ಮಾತನಾಡಿದ್ರೆ ನಕ್ಸಲ್, ಹಾಗಾದ್ರೆ ದೇಶ ಭಕ್ತರು ಯಾರು?:… ಮೂಡಿಗೆರೆಯಲ್ಲಿ ಖೋಟಾ ನೋಟು ಚಲಾವಣೆ ಜಾಲ ಭೇದಿಸಿದ ಪೋಲಿಸರು: ಇಬ್ಬರ ಬಂಧನ, ₹18,000… ಕಡೂರು | ತೆಂಗಿನಕಾಯಿ ಕದ್ದ ಆರೋಪ: ಮಹಿಳೆಯ ಬಟ್ಟೆ ಹರಿದು ಮೂವರು ಪುರುಷರಿಂದ… ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಖಂಡಿಸಿ ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ: 3… ಶಾಸಕ ಪೊನ್ನಣ್ಣ ಕೋರಿಕೆ‌: ಭಾಗಮಂಡಲ ಮೇಲ್ಸೇತುವೆ ಸುತ್ತಲಿನ ಕಾಮಗಾರಿಗೆ 3 ಕೋಟಿ ಅನುದಾನ…

ಇತ್ತೀಚಿನ ಸುದ್ದಿ

ಬಿಜೆಪಿ ಅಲ್ಪಸಂಖ್ಯಾತ ಮೊರ್ಚಾದಿಂದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಪುಣ್ಯ ಸ್ಮರಣೆ: ರಕ್ತದಾನ ಶಿಬಿರ

02/07/2024, 21:15

ಮಂಗಳೂರು(reporterkarnataka.com): ಡಾ| ಶ್ಯಾಮ ಪ್ರಸಾದ್ ಮುಖರ್ಜಿಯ ಪುಣ್ಯ ಸ್ಮರಣೆಯ ಅಂಗವಾಗಿ ರಕ್ತದಾನ ಶಿಬಿರ ಜೂನ್ 30ರಂದು ಬೆಳಿಗ್ಗೆ 9.30ಕ್ಕೆ ಬಿಜೆಪಿ ಮಂಗಳೂರು ದಕ್ಷಿಣ ಮಂಡಳ ಇದರ ಅಲ್ಪ ಸಂಖ್ಯಾತ ಮೊರ್ಚಾದ ವತಿಯಿಂದ ಹಾಗೂ ಕೆಎಂಸಿ ಆಸ್ಪತ್ರೆ ಅತ್ತಾವರ ಇದರ ಸಹಕಾರದೊಂದಿಗೆ ನೆರವೇರಿತು.
30 ಜನರು ರಕ್ತದಾನ ಮಾಡಿದರು. ರಕ್ತದಾನ ಶಿಬಿರವು ಸಂತ ಜೋಸೆಫ್ ಸೆಮಿನರಿ ಇದರ ಆವರಣದಲ್ಲಿರುವ ಸಿ ಎಮ್ ಹಾಲ್‌ನಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ ಕಂಡೆಟ್ಟು, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ, ಮಂಡಲದ ಪ್ರಧಾನ ಕಾರ‍್ಯದರ್ಶಿಗಳಾದ ಮಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರವೀಣ್ ನಿಡ್ಡೆಲ್, ಫಳ್ನೀರ್ ವಾರ್ಡ್ ಪ್ರಮುಖ, ರಾಜ್ಯ ಅಲ್ಪ ಸಂಖ್ಯಾ ಮೋರ್ಚಾದ ಪ್ರಧಾನ ಕಾರ‍್ಯದರ್ಶಿಯಾದ ಜೆಸಲ್ ಡಿಸೋಜ, ಗಣೇಶ್ ಎಂ. ಬಿ, ಅತಿಥಿಗಳಾಗಿದ್ದು ಶಾಸಕರಾದ ಡಿ. ವೇದವ್ಯಾಸ್ ಕಾಮತ್, ಕೆಎಂಸಿ ಆಸ್ಪತ್ರೆ ವೈದ್ಯರಾದ ಡಾ. ಊರ್ವಶಿ ಗುನೆವಾಲ್, ಸಂತ ಜೋಸೆಫ್ ಸೆಮಿನರಿ ಜೆಪ್ಪು ಇದರ ರೆಕ್ಟರ್ ವಂದನೀಯ ರೋನಾಲ್ಡ್ ಸೆರಾವೊ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲ್ಪ ಸಂಖ್ಯಾತ ಮೊರ್ಚಾದ ಮಂಗಳೂರು ದಕ್ಷಿಣ ಮಂಡಳದ ಪ್ರಧಾನ ಕಾರ‍್ಯದರ್ಶಿ ಉದಯ್ ಡಿಸೋಜ, ಅಧ್ಯಕ್ಷರಾದ ದೀಪಕ್ ಡಿಸೋಜ ಅತ್ತಾವರ ಹಾಜರಿರದ್ದರು.
ಕಾರ‍್ಯಕ್ರಮವನ್ನು ದೀಪ ಬೆಳಗಿಸಿ ಆರಂಭಿಸಲಾಯಿತು, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಅಲ್ಪ ಸಂಖ್ಯಾತ ಮೊರ್ಚಾದ ಪ್ರಧಾನ ಕಾರ್ಯದರ್ಶಿಯಾದ ಉದಯ ಕುಮಾರ್ ಸ್ವಾಗತಿಸಿದರು. ಅಲ್ಪಸಂಖ್ಯಾತ ಮೊರ್ಚಾದ ಅಧ್ಯಕ್ಷರಾದ ದೀಪಕ್ ಡಿಸೋಜ ಅತ್ತಾವರ ಪ್ರಾಸ್ತಾವಿಕ ಭಾಷಣಗೈದರು. ಶಾಸಕರು ಮಾತನಾಡಿ ಕಾರ್ಯಕ್ರಮಕ್ಕಾಗಿ ಅಭಿನಂದನೆ ಸಲ್ಲಿಸಿದರು. ಸೆಮಿನರಿ ರೆಕ್ಟರ್, ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಆದರ್ಶದಡಿ ಈ ಕಾರ್ಯಕ್ರಮವನ್ನು ನಡೆಸಿಕೊಂಡದಕ್ಕೆ ಮೆಚ್ಚುಗೆ ಸಲ್ಲಿಸಿದರು. ಡಾ. ಊರ್ವಶಿ ರಕ್ತದಾನ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕೆ.ಎಂ.ಸಿ ವತಿಯಿಂದ ಅಲ್ಪಸಂಖ್ಯಾತ ಮೋರ್ಚಾವನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಖಜಾಂಚಿ ಸುಪ್ರಿಯಾ ಕ್ರಿಸ್ತಬೆಲ್ ಧನ್ಯವಾದಾರ್ಪಣೆಗೈದರು. ಟೀನಾ ಪಿರೇರಾ ಕಾರ್ಯಕ್ರಮವನ್ನು ನಿರ್ವಹಿಸಿದರು.
ವೇದಿಕೆಯಲ್ಲಿದ್ದ ಅತಿಥಿಗಳಿಗೆ ಪದಾಧಿಕಾರಿಗಳಾದ ಶಕೀರ್ ಕಣ್ಣೂರು, ಅಬ್ದುಲ್ ರಶೀದ್ ಬೆಳಾರ್, ಟೀನಾ ಪಿರೇರಾ, ನೆಲ್ಸನ್ ಕ್ಯಾಸ್ಟಲಿನೊ, ಉದಯ್ ಡಿಸೋಜಾ, ಸುಪ್ರಿಯಾ ಕ್ರಿಸ್ತಬೆಲ್, ಮತ್ತು ಸುಶೀಲ್ ಪಾಲಣ್ಣ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು