8:57 AM Friday27 - March 2026
ಬ್ರೇಕಿಂಗ್ ನ್ಯೂಸ್
1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ… ಲ್ಯಾಂಬೊರ್ಗಿನಿ ಕಾರು ಗಿರಿಗಿಟ್ಲೆ ಹೊಡೆಸಿದ ಪ್ರಕರಣ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ,… ಮತ್ತೆ ಬಾಬಾ ಬುಡನ್ ಗಿರಿ ದತ್ತಪೀಠ ವಿವಾದ: ಪೂಜಾ-ವಿಧಿ ವಿಧಾನದ ವಿಚಾರದಲ್ಲಿ ಮುಸ್ಲಿಮರ… ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ: ಯಡಿಯೂರಪ್ಪ ನೇತೃತ್ವದಲ್ಲಿ ಬೃಹತ್‌ ರೋಡ್‌…

ಇತ್ತೀಚಿನ ಸುದ್ದಿ

ಎಣ್ಣೆ ಕುಡಿದು ಟೈಟಾಗಿ ಎಟಿಎಂ ನಲ್ಲಿ ಕಾರ್ಡ್ ಬಿಟ್ಟು ಹೋಗುವ ಕುಡುಕರು: ಒಂದೇ ದಿನ 14 ಕಾರ್ಡ್ ಪತ್ತೆ!!

27/01/2024, 11:18

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಮದ್ಯದ ಮತ್ತಲ್ಲಿ ಎಟಿಎಂ ನಲ್ಲಿ ಹಣ ತೆಗೆಯೋ ಜನರು ಕುಡಿಯೋ ಆತುರದಲ್ಲಿ ಎಟಿಎಂ ನಲ್ಲಿ ಕಾರ್ಡ್ ಬಿಟ್ಟು ಹೋಗುವ ಖಯಾಲಿ ಶುರು ಮಾಡಿಕೊಂಡಿದ್ದಾರೆ. ಕೈಗೆ ಹಣ ಬಂದ ತಕ್ಷಣ ಎಣ್ಣೆ ಕುಡಿಯೋ ಆತುರದಲ್ಲಿ ಎಟಿಎಂ ಮೆಷಿನ್ ನಲ್ಲೇ ಕಾರ್ಡ್ ಬಿಟ್ಟು ಹೋಗುತ್ತಿದ್ದಾರೆ‌. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿ ಕೇಂದ್ರದಲ್ಲಿ ನಿನ್ನೆ ಒಂದೇ ದಿನ ಸುಮಾರು 14 ಕಾರ್ಡ್ ಬಿಟ್ಟು ಹೋಗಿದ್ದಾರೆ. ಅದರಲ್ಲಿ ಸಂಜೆ ವೇಳೆಯೇ ಹೆಚ್ಚು. ಬಣಕಲ್ ಗ್ರಾಮದ ಕರ್ನಾಟಕ ಬ್ಯಾಂಕ್ ಎಟಿಎಂ ಮುಂಭಾಗವೇ ಬಾರ್ ಅಂಡ್ ರೆಸ್ಟೋರೆಂಟ್ ಇದೆ. ಬಾರ್ ಗೆ ಬರುವ ಮದ್ಯಪ್ರಿಯರು ಕುಡಿದು ಟೈಟಾದ ಬಳಿಕ ಮತ್ತಷ್ಟು ಎಣ್ಣೆ ಬೇಕು ಅಂತ ಎಟಿಎಂ ಹೋಗಿ ಹಣ ತೆಗೆದುಕೊಂಡು ಕಾರ್ಡ್ ಅಲ್ಲೇ ಬಿಟ್ಟು ಮತ್ತೆ ಬಾರ್ ನತ್ತ ಮುಖ ಮಾಡುತ್ತಿದ್ದಾರೆ. ಎಟಿಎಂ ಗೆ ಹೋಗುವ ಇತರೇ ಜನ ಎಟಿಎಂ ತೆಗೆದು ಅಲ್ಲೇ ಇಟ್ಟು ಅವರು ಹಣ ತೆಗೆದುಕೊಂಡು ಹೋಗುತ್ತಿದ್ದಾರೆ. ಹೀಗೆ ಎಟಿಎಂ ಕೇಂದ್ರದ ರ್ಯಾಲ್ ಮೇಲೆ ಜೋಡಿಸಿದ ಎಟಿಎಂಗಳ ಸಂಖ್ಯೆ 10ಕ್ಕೂ ಹೆಚ್ಚು. ಸ್ಥಳಿಯರು ಬ್ಯಾಂಕಿಗೆ ಹೋದಾಗ ಎಲ್ಲವನ್ನೂ ಕೈನಲ್ಲಿ ಹಿಡಿದು ಫೋಟೋ ತೆಗೆಸಿಕೊಂಡು ಮದ್ಯಪ್ರಿಯರ ಎಣ್ಣೆ ಪ್ರೀತಿಯನ್ನ ವ್ಯಂಗ್ಯವಾಡಿದ್ದಾರೆ. ಹೀಗೆ ಬಿಟ್ಟು ಹೋಗುವವರು ಮರು ದಿನ ಬಂದು ಎಟಿಎಂ ನಲ್ಲಿ ಕಾರ್ಡ್ ಹುಡುಕಾಡಿದ ಪ್ರಸಂಗವೂ ನಡೆದಿದೆ. ಸಿಕ್ಕರೆ ಓಕೆ. ಸಿಗದಿದ್ದರೆ ಮತ್ತೆ ಬ್ಯಾಂಕಿಗೆ ಹೋಗಿ ಎಟಿಎಂ ಲಾಕ್ ಮಾಡಿಸಿ ಬೇರೆ ಎಟಿಎಂ ಬರೋವರೆಗೂ ಕಾಯುತ್ತಾರೆ. ಈ ರೀತಿಯ ಸನ್ನಿವೇಶಗಳು ನಡೆದಿವೆ. ಆದರೆ, ಹೊತ್ತಲ್ಲದ ಹೊತ್ತಲ್ಲಿ ಎಮರ್ಜೆನ್ಸ್ ಹಣ ಬೇಕಾದಾಗ ಖಾತೆಯಲ್ಲಿ ಹಣ ಇದ್ದರೂ ತೆಗೆಲು ಆಗದೆ ಪರದಾಡಿದವರು ಇದ್ದಾರೆ. ಇವತ್ತು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಎಣ್ಣೆ ಕುಡಿಯೋ ಆಸೆಗೆ ಕಾರ್ಡ್ ಬಿಟ್ಟು ಹೋಗೋರ ಕಾರ್ಡ್ ಗಳನ್ನ ಬೇರೆಯವರು ತೆಗೆದುಕೊಂಡು ಖಾತೆಯಲ್ಲಿರುವ ಹಣವನ್ನ ತೆಗೆದುಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತೆ. ಹಾಗಾಗಿ, ಮದ್ಯ ಪ್ರಿಯರು ಮದ್ಯ ಕುಡಿಯಲಿ. ಆದರೆ, ತಮ್ಮ ವಸ್ತುಗಳ ಬಗ್ಗೆ ಎಚ್ಚರವಿರಲಿ ಎಂದು ಸ್ಥಳೀಯರು ಕೂಡ ಎಚ್ಚರಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು