11:26 AM Tuesday3 - March 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು ಪಾದಚಾರಿಗೆ ಸ್ಕೂಟಿ ಡಿಕ್ಕಿ: ಅದೇ ವ್ಯಕ್ತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ಸಾವು ಬ್ಯಾಚುಲರ್ ಲೈಫ್‌ಗೆ ಕೊಡಗಿನ ಬೆಡಗಿ ಗುಡ್‌ಬೈ: ರಶ್ಮಿಕಾ – ದೇವರಕೊಂಡ ದಂಪತಿಗೆ ಅಂಬಾನಿ,… ಮಸ್ಕಿ ಇರಕಲ್ ಶ್ರೀ ಮಠದ ಜಾತ್ರಾ ಮಹೋತ್ಸವ: ಹಸೆಮಣೆ ಏರಿದ 12 ಜೋಡಿಗಳು ಜವಾಹರಲಾಲ್ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂಭ್ರಮ; ವೈಜ್ಞಾನಿಕ ಮನೋಭಾವಕ್ಕೆ ಸಚಿವ…

ಇತ್ತೀಚಿನ ಸುದ್ದಿ

ಮುಳ್ಳಯ್ಯನಗಿರಿಯಲ್ಲಿ ಬೆಟ್ಟ ಹತ್ತಿಸಲು ಇರುವ ಜೀಪ್ ಪಯಣ ನಿಮ್ಮ ಜೀವಕ್ಕೆ ಮುಳ್ಳಾಗಬಹುದು ಹುಷಾರ್.!!

04/08/2021, 23:20

info.reporterkarnataka@gmail.com

ಕಾಫಿ ನಾಡು ಚಿಕ್ಕಮಗಳೂರಿನ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಳ್ಳಯ್ಯನಗಿರಿ ಕೂಡ ಒಂದು. ಇಲ್ಲಿ ಪ್ರವಾಸಿಗರ ವಾಹನಗಳನ್ನು ಕೆಳಗಿನ ದೇವಾಲಯದ ಪಕ್ಕ ಇಟ್ಟ ಬಳಿಕ ಬೆಟ್ಟದ ತುದಿ ಅಂದರೆ ಶ್ರೀ ಗುರು ಮೇಲುಗದ್ದಿಗೆ ಮುಳ್ಳಪ್ಪ ಸ್ವಾಮಿ ಮಠದ ಮೆಟ್ಟಿಲು ಆರಂಭ ಆಗುವಲ್ಲಿಗೆ ತಲುಪಿಸುವ ಶರ ವೇಗದ ಜೀಪಿನ ಪಯಣ ನಿಮ್ಮ ಜೀವನಕ್ಕೇ ಕುತ್ತಾಗಬಹುದು.

ವೀಡಿಯೊ – 👇

ಹೌದು, ಇಲ್ಲಿ ಅನೇಕ ಮಹೇಂದ್ರ ಜೀಪ್‌ಗಳು ಹಾಗೂ ಟಾಟ ಸುಮೊ ಥರದ ಗಾಡಿಗಳು ಬೆಟ್ಟ ಹತ್ತಿಸಲು ತಯಾರಾಗಿ ನಿಂತಿರುತ್ತೆ, ವಾರಾಂತ್ಯದಲ್ಲಿ ಬಹುಸಂಖ್ಯೆಯಲ್ಲಿ ಇಲ್ಲಿಗೆ ಜನರು ಭೇಟಿ ನೀಡುವಾಗ ಚಾತಕ ಪಕ್ಷಿಗಳಂತೆ ಕಾಯುವ ಈ ಜೀಪ್‌ಗಳು ಪ್ರತಿ ಟ್ರಿಪ್‌ಗೆ 300 ರೂಪಾಯಿ ಶುಲ್ಕ ಇಟ್ಟು ಬೆಟ್ಟ ಹತ್ತಿಸುತ್ತವೆ.

ಇದೆಲ್ಲ ಓಕೆ ಆದರೆ ಇಲ್ಲಿರುವ ಬಹುತೇಕ ಜೀಪ್‌ಗಳಿಗೆ ಇನ್ಸುರೆನ್ಸೆ ಇಲ್ಲ..! ಹಾಗೂ ಫಿಟ್‌ನೆಸ್ ಸರ್ಟಿಫಿಕೇಟ್ ಇರದ ಜೀಪ್‌ಗಳು ಕೂಡ ಇಲ್ಲಿ ಬೆಟ್ಟ ಹತ್ತಿಸುವ ಕೆಲಸ ಮಾಡ್ತಿದೆ. ಅತಿ ಚಾಣಕ್ಷ ಡ್ರೈವರ್‌ಗಳ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ಡ್ರೈವಿಂಗ್ ರೋಮಾಂಚನವಾದರೂ ಒಂಚೂರು ಎಡವಿದರು ಪ್ರಾಣ ಹಾನಿಯ ಜತೆಗೆ ಪರಿಹಾರ ಕೂಡ ಸಿಗದ ಹಾಗೆ ಜೀವನಕ್ಕೆ ಕುತ್ತು ತಂದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಬ್ಲ್ಯಾಕ್ ಲಿಸ್ಟ್ ಆದ ಗಾಡಿಗಳೂ ಇಲ್ಲಿ ಕಾರ್ಯಾಚರಣೆ ಮಾಡ್ತ ಇರೋದು ಸಂಚಾರಿ ಪೋಲಿಸರ ಹಾಗೂ ಅಧಿಕಾರಗಳ ಜಾಣ ಕುರುಡಿಗೆ ಸಾಕ್ಷಿಯಾಗಿದೆ.

ಈ ಅಪಾಯಕಾರಿ ಬೆಟ್ಟದ ಹಾವಿನಂತಹ ರಸ್ತೆಗಳಲ್ಲಿ ಈ ರೀತಿಯ ಫಿಟ್‌ನೆಸ್ ಇರದ ಜೀಪ್‌ಗಳನ್ನು ಹಾಗೂ ಇನ್ಸುರೆನ್ಸ್ ಇರದ ಗಾಡಿಗಳನ್ನು ಓಡಿಸಲು ಅನುಮತಿ ಕೊಟ್ಟ ಚಿಕ್ಕಮಗಳೂರು ಪ್ರವಾಸೋದ್ಯಮ ಇಲಾಖೆಯ ಕುರುಡು ಕಣ್ಣಿಗೆ ಏನನ್ನಬೇಕೊ ಗೊತ್ತಾಗುವುದಿಲ್ಲ. ಸಾವಿರಾರು ಜನ ಪ್ರವಾಸಿಗರ ಜೀವದ ಜತೆ ಚೆಲ್ಲಾಟ ಅಡುವ ಈ ಜಾಣ ಕುರುಡುತನಕ್ಕೆ ಇಲ್ಲಿಯ ಸ್ಥಳೀಯ ಪೋಲಿಸರು ಕೂಡ ಸಾಥ್ ನೀಡುತ್ತಿರಬಹುದೆನ್ನುವ ಗುಮಾನಿ ಮೂಡುತ್ತದೆ.

ಜೀಪ್‌ಗಳ ಮೇಲೆ ಪ್ರವಾಸೋದ್ಯಮ ಇಲಾಖೆ ಸ್ಟಿಕ್ಕರ್ ಅಂಟಿಸಿಕೊಂಡು ಪ್ರವಾಸಿಗರ ವಿಶ್ವಾಸ ಗಳಿಸಿಕೊಂಡು ಈ ರೀತಿಯ ಬೇಜವಾಬ್ದಾರಿಯುತ ಕೆಲಸ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮವನ್ನು ಆಡಳಿತ ತೆಗೆದುಕೊಳ್ಳಬೇಕಾಗಿದೆ. ಇದು ಪ್ರವಾಸಿಗರ ಹಿತದೃಷ್ಟಿಯಿಂದ ಅವಶ್ಯಕವೂ ಆಗಿದೆ. ಅಲ್ಲೆ ಠಿಕಾಣಿ ಹೂಡಿರುವ ಪೋಲಿಸರು ಕೂಡ ಇದನ್ನು ಗಮನಿಸದೇ ಇರುವುದು ವಿಡಂಬನೀಯ ವಿಚಾರ.

ಚಿಕ್ಕಮಗಳೂರಿಗೆಂದು ಪ್ರವಾಸಕ್ಕೆ ಕಳೆದ ಭಾನುವಾರ ಹೋಗಿದ್ದೆವು, ಮುಳ್ಳಯ್ಯನಗಿರಿ ಬೆಟ್ಟದ ತುದಿಗೆ ಹತ್ತಲು ಜೀಪ್‌ನಲ್ಲಿ ಹೋದಂತಹ ಸಂದರ್ಭ ಜೀಪಿನ ಪರಿಸ್ಥಿತಿ ಹಾಗೆ ಚಾಲಕನ ಡ್ರೈವಿಂಗ್ ಎರಡೂ ಅಪಾಯಕಾರಿ ಎನಿಸಿತು, ಪಯಣದ ಸಂದರ್ಭ ಮಾಡಿದ ವಿಡಿಯೋದಲ್ಲಿ ರೆಕಾರ್ಡ್ ಆದ ಗಾಡಿ ನಂಬರ್ ಸರ್ಚ್ ಮಾಡಿ ನೋಡಿದಾಗ ಕಂಡ ಫಲಿತಾಂಶ ದಂಗು ಬಡಿಯುವಂತೆ ಮಾಡಿತು, ಈ ಬಗ್ಗೆ ಚಿಕ್ಕಮಗಳೂರು ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು, ಒಳ್ಳೆಯ ವ್ಯವಸ್ಥೆ ಮಾಡಿಕೊಡಲಿ.
ಪ್ರವಾಸಿಗ, ಮಂಗಳೂರು

ಇತ್ತೀಚಿನ ಸುದ್ದಿ

ಜಾಹೀರಾತು