ಇತ್ತೀಚಿನ ಸುದ್ದಿ
ಎನ್ ಎಸ್ ಯುಐ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ನೇಮಕ
07/12/2023, 23:20
ಮಂಗಳೂರು(reporterkarnataka.com): ಎನ್ ಎಸ್ ಯುಐ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ನೇಮಕಗೊಂಡಿದ್ದಾರೆ.
ಸವಾದ್ ಅವರು ಕಳೆದ 3 ವರ್ಷಗಳಿಂದ ಉತ್ತಮವಾಗಿ ಸಂಘಟಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್ ಎಸ್ ಯುಐಯನ್ನು ಬಲಿಷ್ಠವಾಗಿ ಕಟ್ಟುವಲ್ಲಿ ಪಾತ್ರ ವಹಿಸಿದ್ದಾರೆ.
ಸವಾದ್ ಮೂಲತ ಸುಳ್ಯ ನಗರದ ಗಾಂಧಿನಗರದವರು. ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಬ್ರಿಜಿಸ್ಟ್ನಲ್ಲಿ ಮುಗಿಸಿ 14ನೇ ವಯಸ್ಸಿನಲ್ಲಿ ಸುಳ್ಯ ಗಾಂಧಿನಗರದ ಸರಕಾರಿ ಪ್ರೌಢ ಶಾಲೆಯ ಉಪನಾಯಕನಾಗಿ ಆಯ್ಕೆಗೊಂಡಿದ್ದರು. 10ನೇ ತರಗತಿಯಲ್ಲಿ ಚುನಾಯಿತ ನಾಯಕನಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಶಾಲಾ ದಿನಗಳಲ್ಲೇ ಕಾಂಗ್ರೆಸ್ ಬಾಲ ಸೇವಾದಳದಲ್ಲಿ ಸಕ್ರಿಯರಾಗಿದ್ದವರು, 2009 ರಲ್ಲಿ ತಾನು ಹೈಸ್ಕೂಲ್ ನಲ್ಲೇ ಓದುತ್ತಿರುವಾಗ ಎನ್ ಎಸ್ ಯುಐ ವಿದ್ಯಾರ್ಥಿ ಸಂಘಟನೆಯನ್ನು ಪ್ರವೇಶಿಸಿದರು. ಪಿಯುಸಿ ಶಿಕ್ಷಣದ ಸಂದರ್ಭದಲ್ಲಿ ಕೆವಿಜಿ ನೆಹರು ಮೆಮೋರಿಯಲ್ ಕಾಲೇಜಿನ ಎನ್ ಎಸ್ ಯುಐ ವಿದ್ಯಾರ್ಥಿ ಘಟಕಧ ಅಧ್ಯಕ್ಷರಾಗಿ, ಸುಳ್ಯ ನಗರ ಅಧ್ಯಕ್ಷರಾಗಿ, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ, ಸರ್ವ ಕಾಲೇಜು ಸಂಘದ ಕಾರ್ಯದರ್ಶಿಯಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಎನ್ ಎಸ್ ಯುಐ ಕರ್ನಾಟಕದ ಚುನಾಯಿತ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಅವರು ಎನ್ ಎಸ್ ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಂಚಾಲಕರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ.
2017ರ ಸಂದರ್ಭದಲ್ಲಿ ಎನ್ ಎಸ್ ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಗೆ ನಡೆದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಿಂತು ಗೆಲುವು ಸಾಧಿಸಿದ್ದರು.
ಅದೇ ವರ್ಷ ಎನ್ ಎಸ್ ಯುಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರಿನ ಸಂತ ಆಗ್ನೇಸ್ (ಸ್ವಾಯತ್ತ) ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ “ಇಂದಿರಾ” ಎಂಬ ಕಾರ್ಯಾಗಾರವು ನಡೆಸಲಾಗಿತ್ತು, ಈ ಕಾರ್ಯಕ್ರಮದ ನಿರ್ವಹಣೆ ಮಾಡಿದ್ದರು. ಅದೇ ರೀತಿ 2020 ರಲ್ಲಿ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೊರರಾಜ್ಯಕ್ಕೆ ತೆರಳುವ ಹಾಗೂ ಊಟದ ವ್ಯವಸ್ಥೆಯನ್ನು ಕೂಡ ಎನ್ ಎಸ್ ಯುಐ ಜಿಲ್ಲಾ ಸಮಿತಿ ವತಿಯಿಂದ ಸವಾದ್ ಸುಳ್ಯ ಹಾಗೂ ಶೌನಕ್ ರೈ ಅವರ ನೇತೃತ್ವದಲ್ಲಿ ನಡೆಯಿತು, 2020ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ನಲ್ಲಿ ನಡೆಯುತ್ತಿದ್ದ ಎನ್ ಇಪಿ ಶಿಕ್ಷಣ ನೀತಿಯ ಬಗ್ಗೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ನಂತರ 2020 ರಲ್ಲೇ ಎನ್ ಎಸ್ ಯುಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪುತ್ತೂರಿನಲ್ಲಿ “ಪ್ರೇರಣಾ” ಕಾರ್ಯಾಗಾರ , 8 ವಿಧಾನಸಭಾ ಕ್ಷೇತ್ರದಲ್ಲಿ “ಸಂವಿಧಾನ ಕಡೆ, ನಮ್ಮ ಕಡೆ” ಕಾರ್ಯಕ್ರಮ “ಚಿಂತನ-ಮಂಥನ” ಕಾರ್ಯಾಗಾರ, ಎನ್ ಇಪಿ ಶಿಕ್ಷಣ ನೀತಿ ವಿರೋಧಿಸಿ “Reject NEP” ಅಭಿಯಾನ ಹಾಗೂ ಜಿಲ್ಲೆಯಲ್ಲಿ ವಿನೂತನವಾಗಿ “ಕ್ಯಾಂಪಸ್ ಗೇಟ್ ಮೀಟ್” ಅಭಿಯಾನ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹೋರಾಟ, ಉಚಿತ ಲ್ಯಾಪ್ ಟಾಪ್ ಮತ್ತು ಅರಿವು ಲೋನ್ ವಿತರಣೆ ವಿಳಂಬವಾದಾಗ ಅದರ ವಿರುಧ್ದ ಮುಖ್ಯಮಂತ್ರಿ ಸಹಿತ ಅದಕ್ಕೆ ಸಂಬಂದಪಟ್ಟವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದರು.