2:58 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಮ್ಯಾದರಾಳ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಕೊನೆಗೂ ಪರಿಹಾರ: ಶಾಸಕ ತುರುವಿಹಾಳರಿಂದ ಬೋರ್ ವೆಲ್ ಕೊಡುಗೆ

02/08/2021, 09:08

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು

info.reporterkarnataka@gmail.com

ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದ ಮಸ್ಕಿ ತಾಲೂಕಿನ ಮ್ಯಾದರಾಳ ಗ್ರಾಮದ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನೂತನ ಶಾಸಕ ಬಸವನ ಗೌಡ ತುರುವಿಹಾಳ ಮಾಡಿದ್ದಾರೆ. ಸಾರ್ವಜನಿಕರಿಗಾಗಿ ಗ್ರಾಮದಲ್ಲಿ ಬೋರ್ ವೆಲ್ ಹಾಕಿಸಿದ್ದಾರೆ. 3 ಇಂಚು ನೀರು ಬಂದು ಗ್ರಾಮಸ್ಥರು ಹರ್ಷಗೊಂಡಿದ್ದಾರೆ.

ಮ್ಯಾದರಾಳದ ಗ್ರಾಮಸ್ಥರು ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಹಲವು ವರ್ಷಗಳಿಂದ ತತ್ತರಿಸಿ ಹೋಗಿದ್ದರು. ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದ್ದರು. ಆದರೂ ವಾರದಲ್ಲಿ 2 ಅಥವಾ 4 ಬಾರಿ ಮಾತ್ರ ನೀರು ಬರುತ್ತಿದ್ದವು. ಆದರೆ ಇದನ್ನು

ಅರಿತ ಮಸ್ಕಿ ನೂತನ ಶಾಸಕ ಬಸವನಗೌಡ ತುರುವಿಹಾಳ ಅವರು ಆ ಗ್ರಾಮಕ್ಕೆ ಸಾರ್ವಜನಿಕರಿಗಾಗಿ ಬೋರ್ವೆಲ್ ಹಾಕಿಸಿದ್ದಾರೆ. 3 ಇಂಚು ನೀರು ಬಂದಿದೆ. ಗ್ರಾಮದ ಜನರು ಖುಷಿ ಹರ್ಷ ವ್ಯಕ್ತಪಡಿಸಿದ್ದಾರೆ. ಎಷ್ಟೋ ವರ್ಷದ ಕನಸು ಈಗ ನನಸಾಗೋ ಭಾಗ್ಯ ನಮ್ಮ ಗ್ರಾಮಕ್ಕೆ ಬಂದಿದೆ. 

ನೂತನ ಶಾಸಕ ಬಸನಗೌಡ ತುರುವಿಹಾಳ ಹಾಗೂ ಸಹೋದರ ಸಿದ್ದನಗೌಡ ಅಭಿಮಾನಿಗಳು,

ಸಣ್ಣ ಹನುಮನಗೌಡ, ಅಂಬರೀಶ್ ದೇವರಮನೆ, ವೆಂಕಣ್ಣ ಕಳಮಳ್ಳಿ, ನರಸನಗೌಡ, ಹನುಮಣ್ಣ ವಾಟರ್ ಮ್ಯಾನ್, ಕಾಂಗ್ರೆಸ್ ಮುಖಂಡ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿ ವೆಂಕನಗೌಡ ದೇವರು ಮನೆ ಇನ್ನಿತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು