2:53 PM Friday29 - November 2024
ಬ್ರೇಕಿಂಗ್ ನ್ಯೂಸ್
ಹೆಚ್ಚುತ್ತಿರುವ ಗರ್ಭಿಣಿಯರ, ಬಾಣಂತಿಯರ ಸಾವು ಪ್ರಕರಣ: ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಸರಕಾರದಿಂದ ಸರ್ಜರಿ!! ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ…

ಇತ್ತೀಚಿನ ಸುದ್ದಿ

ಮತ್ತೆ ಖದರ್!: ಎಸ್ ಡಿಪಿಐ ಜತೆಗಿನ ತಾಂಟುವ ಆಟದಲ್ಲಿ ಅಂತರ ಹೆಚ್ಚಿಸಿ ಗೆದ್ದ ಖಾದರ್!

13/05/2023, 22:37

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಎಲ್ಲರ ಲೆಕ್ಕಾಚಾರದಂತೆ ಮಂಗಳೂರು ಕ್ಷೇತ್ರದಿಂದ
ಕಾಂಗ್ರೆಸ್ ಅಭ್ಯರ್ಥಿ ಯು.ಟಿ. ಖಾದರ್ ಗೆಲುವು ಸಾಧಿಸಿದ್ದಾರೆ. ಜತೆಗೆ ಗೆಲುವಿನ‌ ಅಂತರವನ್ನೂ ಹೆಚ್ಚಿಸಿಕೊಂಡಿದ್ದಾರೆ.
ಸತತ 5ನೇ ಬಾರಿ ವಿಧಾನಸಭೆ ಪ್ರವೇಶಿಸುತ್ತಿರುವ ಖಾದರ್ ಅವರಿಗೆ ಈ ಬಾರಿ ಟಫ್ ಫೈಟ್ ಎದುರಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಲೆಕ್ಕಾಚಾರ ಹಾಕಿದ್ದರು. ಕಾರಣ ಎಸ್ ಡಿಪಿಐ ಅಭ್ಯರ್ಥಿ ರಿಯಾಜ್ ಪರಂಗಿಪೇಟೆ ಅವರು ತೊಡೆ ತಟ್ಟಿ ಖಾದರ್ ವಿರುದ್ಧ ಸ್ಪರ್ಧೆಗಿಳಿದಿದ್ದರು. ಚುನಾವಣಾ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಗಿಂತ ಹೆಚ್ಚು ಖಾದರ್ ವಿರುದ್ಧ ಆರೋಪವನ್ನು ರಿಯಾಜ್ ಮಾಡಿದ್ದರು. ಇಬ್ಬರೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಗಳಾಗಿರುವುದರಿಂದ ಒಂದೇ ಸಮುದಾಯದೊಳಗಿನ ಜಗಳ ಮಾರನೇ ವ್ಯಕ್ತಿಗೆ ಸಹಾಯ ಮಾಡಿತು ಎಂದು ಜನರು ಅಂದುಕೊಂಡಿದ್ದರು. ಖಾದರ್- ರಿಯಾಜ್ ಫೈಟ್ ನಿಂದ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಅವರಿಗೆ ನೆರವಾದೀತು ಎಂಬ ಲೆಕ್ಕಾಚಾರ ಕೇಳಿ ಬಂದಿತ್ತು. ಆದರೆ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಲೆಕ್ಕಾಚಾರವೆಲ್ಲ ತಲೆ ಕೆಳಗಾಗಿದೆ. ಎಸ್ ಡಿಪಿಐ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಮತ ಬಾಚಿಕೊಂಡರೂ ಬಿಜೆಪಿ ಅಭ್ಯರ್ಥಿ ಸತೀಶ್ ಕುಂಪಲ ಅವರಿಂದ 23 ಸಾವಿರ ಮತಗಳ ಅಂತರದಲ್ಲಿ ಖಾದರ್ ಗೆಲುವಿನ ನಗೆ ಹೊರಸೂಸಿದ್ದಾರೆ.




ಖಾದರ್ ಗೆಲುವಿನ ಓಟವನ್ನು ತಡೆಯಲು ಬಿಜೆಪಿ ಪಾಳಯದಲ್ಲಿ ಭಾರೀ ಕಾರ್ಯತಂತ್ರ ನಡೆಯಲಿದೆ ಎಂಬ ಮಾಹಿತಿ ಆರಂಭದಲ್ಲಿದ್ದರೂ ನಂತರ ಅದು ಠುಸ್ ಎನಿಸಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರನ್ನು ಬಹುತೇಕ ಕ್ಷೇತ್ರಗಳಿಗೆ ಕರೆಸಿ ರೋಡ್ ಶೋ ನಡೆಸಿದ್ದರೂ ಸತೀಶ್ ಕುಂಪಲ ಪರ ಯಾವುದೇ ಸ್ಟಾರ್ ಕ್ಯಾಂಪೇನರ್ ಗಳನ್ನು ಕರೆಸದೆ ಬಿಜೆಪಿ ಕೈಚೆಲ್ಲಿ ಕುಳಿತ್ತಿತ್ತು. ಒಂದು ರೀತಿಯಲ್ಲಿ ಬಿಜೆಪಿ ಇಲ್ಲಿ ಸತೀಶ್ ಕುಂಪಲ ಅವರನ್ನು ಬಲಿಪಶು ಮಾಡಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು