12:56 AM Wednesday11 - February 2026
ಬ್ರೇಕಿಂಗ್ ನ್ಯೂಸ್
ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ… ರಾಜ್ಯ ಸರ್ಕಾರ ಎಲ್ಲ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲಿ: ಮಾಜಿ… NDPS ಕಾಯ್ದೆ: ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದ 5.71 ಕೋಟಿ ಮೌಲ್ಯದ ಮಾದಕ ವಸ್ತುಗಳು… Mangaluru | ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ನಮ್ಮ ಅಭಿಪ್ರಾಯ ಕೇಳಿಲ್ಲ:…

ಇತ್ತೀಚಿನ ಸುದ್ದಿ

ಸಿಟಿ ಸಮೂಹ ಸಂಸ್ಥೆಗಳು ಹಾಗೂ ಕೈಲ್ಕೆರೆ ರುಕ್ಮಿಣಿ ಶೆಟ್ಟಿ ಕಾಲೇಜು ಆಫ್ ನರ್ಸಿಂಗ್ ನ ವಾರ್ಷಿಕ ಕ್ರೀಡೋತ್ಸವ ‘ಸಿನ್ಯಾಪ್ಸ್ 2023’ ಸಂಪನ್ನ

04/05/2023, 17:20

ಮಂಗಳೂರು(reporterkarnataka.com)ಮಂಗಳೂರಿನ ಸಿಟಿ ಸಮೂಹ ಸಂಸ್ಥೆಗಳು ಹಾಗೂ ಕೈಲ್ಕೆರೆ ರುಕ್ಮಿಣಿ ಶೆಟ್ಟಿ ಕಾಲೇಜು ಆಫ್ ನರ್ಸಿಂಗ್ ನ ವಾರ್ಷಿಕ ಕ್ರೀಡೋತ್ಸವವು ನಗರದ ಮಂಗಳ ಕ್ರೀಡಾಂಗಣದಲ್ಲಿ ಮೇ 2ರಂದು ಜರುಗಿತು.

ಫಿಟ್ನೆಸ್ ಇನ್ ಸ್ಟ್ರಕ್ಟರ್ ಹಾಗೂ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಕೋಚ್ ಗಳಾದ ಕೌಶಿಕ್ ಬೋಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡೋತ್ಸವದ ವಿನ್ಯಾಸವನ್ನು (“ಸಿನ್ಯಾಪ್ಸ್ 2023”) ಅನಾವರಣಗೊಳಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ “ವಿದ್ಯಾರ್ಥಿಗಳು ತಮ್ಮನ್ನು ಕ್ರೀಡಾಪಟುಗಳಾಗಿ ರೂಪಿಸಿಕೊಳ್ಳಲು ಇನ್ನೂ ಸಮಯಾವಕಾಶವಿದೆ. ತಾವೆಲ್ಲರೂ ಯೌವನಾವಸ್ಥೆಯಲ್ಲಿರುವುದರಿಂದ ಇನ್ನೂ ಕಾಲ ಮಿಂಚಿಲ್ಲ. ಮಾನವ ದೇಹ, ದೇವರ ಒಂದು ವಿಶೇಷ ರಚನೆ. ಈ ದೇಹವನ್ನು ಆಯಾ ಪ್ರಾಯಕ್ಕೆ ಸರಿಯಾಗಿ ಯಾವ ರೀತಿಯಲ್ಲೂ ಪರಿವರ್ತಿಸಿಕೊಳ್ಳಲು ಆವಕಾಶವಿದೆ. ಸತತ ಪ್ರಯತ್ನ ಶ್ರದ್ಧೆ, ಜೀವನ ಶೈಲಿ ಹಾಗೂ ಕಠಿಣ ವ್ಯಾಯಾಮದಿಂದ ನೀವು ಇದನ್ನು ಸಾಧಿಸಬಹುದು” ಎಂಬ ಕಿವಿಮಾತು ಹೇಳಿದರು.
ಸಿಟಿ ಹಾಸ್ಪಿಟಲ್ ಟ್ರಸ್ಟ್ ಹಾಗೂ ನಂದಾವನ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಕೆ. ಭಾಸ್ಕರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ “ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯು ತುಂಬಾ ಪಠ್ಯ ವಸ್ತುಗಳನ್ನು ಒಳಗೊಂಡಿರುವುದರಿಂದ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಿಗೆ ಸಮಯ ಇಲ್ಲದಂತಾಗಿದೆ. ಆದರೆ, ಮಂಗಳೂರಿನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ವಿಫುಲ ಅವಕಾಶ ಮತ್ತು ಸೌಲಭ್ಯಗಳಿವೆ. ವಿದ್ಯಾರ್ಥಿಗಳು ಕಾಲೇಜಿನ ಸಮಯದ ನಂತರ ತಮ್ಮ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯರ್ಥ ಮಾಡುವುದರ ಬದಲಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯ ಕಳೆಯುವುದರಿಂದ ದೇಹ ಹಾಗೂ ಮನಸ್ಸು ವಿಕಸನಗೊಳ್ಳುತ್ತದೆ” ಎಂದು ಬುದ್ಧಿಮಾತು ಹೇಳಿದರು.
ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದರು. ಸಿಟಿ ಸಮೂಹ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರು ಹಾಗೂ ಆಡಳಿತಾಧಿಕಾರಿ ಅನ್ವಿತಾ ಆರ್. ಶೆಟ್ಟಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು