3:30 AM Friday24 - April 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್…

ಇತ್ತೀಚಿನ ಸುದ್ದಿ

ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆ: ಮೊದಲ ಬಾರಿಗೆ ಶ್ರೀ ಶ್ರೀ ಪ್ರಶಸ್ತಿ-2023 ಪ್ರದಾನ

30/01/2023, 13:38

ಬೆಂಗಳೂರು(reporterkarnataka.com): ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಅನುಕರಣೀಯ ಕೊಡುಗೆಗಾಗಿ ಪ್ರತಿಷ್ಠಿತ ಶ್ರೀ ಶ್ರೀ ಪ್ರಶಸ್ತಿ 2023 ನ್ನು ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ ಟ್ರಸ್ಟ್ ನ ವತಿಯಿಂದ ಶನಿವಾರ ಪ್ರದಾನ ಮಾಡಲಾಯಿತು.
ಇದೇ ಮೊದಲನೆಯ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ- ಶೈಕ್ಷಣಿಕ ಉನ್ನತಿಗಾಗಿ, ವಿದ್ಯಾಸಂಸ್ಥೆಗಳಿಗೆ ಹಾಗೂ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡುತ್ತಿರುವುದು. ಜಾಗತಿಕ ಆಧ್ಯಾತ್ಮಿಕ ಗುರು ಮತ್ತು ಮಾನವತಾವಾದಿ ಪೂಜ್ಯ ಗುರುದೇವ ಶ್ರೀ ಶ್ರೀ ರವಿಶಂಕರ್ ರವರ ಉಪಸ್ಥಿತಿಯಲ್ಲಿ ಇವರ ಆಶೀರ್ವಚನದೊಂದಿಗೆ ಈ ಪ್ರಶಸ್ತಿ ಪ್ರದಾನ ಸಮಾರಂಭವು ನೆರವೇರಿಸಲ್ಪಟ್ಟಿತು. ಕಾರ್ಯಕ್ರಮದಲ್ಲಿ ಡಾ. ರಾಜಕುಮಾರ್ ರಂಜನ್ ಸಿಂಗ್-MoS(ಶಿಕ್ಷಣ), ಬಿ ಸಿ ನಾಗೇಶ್ ( ಶಿಕ್ಷಣ ಸಚಿವರು), ಡಾ. ಅಶ್ವಥ್ ನಾರಾಯಣ್ ಸಿ. ಎನ್. (ಉನ್ನತ ಶಿಕ್ಷಣ ಐ ಟಿ ಮತ್ತು ಬಿ ಟಿ ವಿಜ್ಞಾನ ಮತ್ತು ತಂತ್ರಜ್ಞಾನ ಕೌಶಲ್ಯ ಅಭಿವೃದ್ಧಿ ಸಚಿವರು), ಟಿಮ್ ಡ್ರೇಪರ್ (ಸಂಸ್ಥಾಪಕರು, ಡ್ರೇಪರ್ ಅಸೋಸಿಯೇಟ್)
ಪ್ರಶಸ್ತಿ ಪ್ರದಾನ ಮಾಡಿದ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಮಾತನಾಡಿ, ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿರುವ ಶಿಕ್ಷಕ ವರ್ಗವನ್ನು ಗುರುತಿಸಿ ಪುರಸ್ಕರಿಸುತ್ತಿರುವುದು ನನಗೆ ಅತ್ಯಂತ ಹರ್ಷದಾಯಕವಾಗಿರುವ ಕ್ಷಣವಾಗಿದೆ. ನಾವು ರಾಷ್ಟ್ರೀಯ ಮಟ್ಟದಲ್ಲಿ ಈ ಹೊಸ ಶೈಕ್ಷಣಿಕ ಪದ್ಧತಿಯನ್ನು ಜಾರಿಗೊಳಿಸುವ ಹಂತದಲ್ಲಿರುವಾಗಲೇ ಗುರುದೇವರು ತಮ್ಮ ಶಾಲೆಗಳಲ್ಲಿ ಇದನ್ನು ಅಳವಡಿಸಿದ್ದಾರೆ .ಸ್ವಾಮಿ ವಿವೇಕಾನಂದರ ನುಡಿಗಳಂತೆ- ವಿದ್ಯಾಭ್ಯಾಸದ ಉದ್ದೇಶವು ಭಾರತೀಯ ಸಂಸ್ಕೃತಿಯನ್ನು ಉನ್ನತ ಮಟ್ಟಕ್ಕೆ ಏರಿಸಿ ಬೆಳೆಸುವುದಾಗಿದೆ. ಪೂಜ್ಯ ಗುರುದೇವರು ,ಗುಡ್ಡಗಾಡು ಪ್ರದೇಶಗಳಲ್ಲಿ ಈಗಾಗಲೇ ಶಾಲೆಗಳ ನಿರ್ಮಾಣವನ್ನು ಮಾಡಿ ಸ್ವಾಮಿ ವಿವೇಕಾನಂದರ ನುಡಿಗಳಂತೆ ವಿದ್ಯಾಭ್ಯಾಸ ಕ್ರಮವನ್ನು ಅಳವಡಿಸುವಲ್ಲಿ ನಮಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಸರಕಾರವು ಇನ್ನೂ ಕಾರ್ಯಪ್ರವೃತ್ತವಾಗಬೇಕಾಗಿದೆ ಎಂದರು.

ji
ಸಮಾಜದಲ್ಲಿ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ತಾವು ಸಲ್ಲಿಸಿದ ಸೇವೆಯ ಅನನ್ಯ ಕೊಡುಗೆಯನ್ನು ಗುರುತಿಸಿದುದಕ್ಕಾಗಿ ಪ್ರಶಸ್ತಿ ವಿಜೇತರು ತಮ್ಮ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
3000ಕ್ಕೂ ಹೆಚ್ಚು ಜನರು ಅಲ್ಲಿ ನೆರೆದಿದ್ದರು. ಆನ್ಲೈನ್ ಮೂಲಕ ಸಾವಿರಾರು ಜನರು ಈ ಕಾರ್ಯಕ್ರಮವನ್ನು ವೀಕ್ಷಿಸಿದರು.

ಈ ಕೆಳಗಿನವರನ್ನು ವಿಜೇತರೆಂದು ಗುರುತಿಸಲಾಯಿತು:

*ತಮ್ಮ ಸರ್ವಾಂಗೀಣ ಪ್ರಗತಿಗಾಗಿ ಪ್ರತಿಷ್ಠಿತ ಶ್ರೀ ಶ್ರೀ ಪ್ರಶಸ್ತಿಯನ್ನು ಪಡೆದುಕೊಂಡವರು*

*ಆರ್ಮಿ ಪಬ್ಲಿಕ್ ಸ್ಕೂಲ್, ಶಂಕರ್ ವಿಹಾರ್, ದೆಹಲಿ ಕಂಟೋನ್ಮೆಂಟ್

*ದಿ ಹೆರಿಟೇಜ್ ಸ್ಕೂಲ್, ಕಲ್ಕತ್ತಾ.

*ವಿಶೇಷ ಉಲ್ಲೇಖ*-
*ಅಮಿತಿ ಇಂಟರ್ನ್ಯಾಷನಲ್ ಸ್ಕೂಲ್, ಗುರುಗ್ರಾಮ್.

ದೆಹಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಉತ್ತರ

ಮೌಂಟ್ ಅಬು ಪಬ್ಲಿಕ್ ಸ್ಕೂಲ್ ರೋಹಿಣಿ, ನವದೆಹಲಿ.

*ಸಮಗ್ರ ಶಿಕ್ಷಣಕ್ಕಾಗಿ ಶ್ರೀ ಶ್ರೀ ಪ್ರಶಸ್ತಿ*
ಶ್ರೀಮತಿ ಸುಲೋಚನಾ ದೇವಿ ಸಿಂಘಾನಿಯಾ ಶಾಲೆ, ಥಾಣೆ

ಮೇಯೋ ಕಾಲೇಜು ,ಅಜ್ಮೀರ್

*ಪೂರ್ವ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀಶ್ರೀ ಪ್ರಶಸ್ತಿಗಳು*

ಜಮ್ಶೆಡ್ಪುರದ ವಿದ್ಯಾಭಾರತಿ ಚಿನ್ಮಯ ವಿದ್ಯಾಲಯದಿಂದ ಶ್ರೀಮತಿ ಸಹನಾ.

*ಉತ್ತರ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿಗಳು*-
KIIT ವರ್ಲ್ಡ್ ಗುರ್ಗಾಮ್ ನಿಂದ ಶ್ರೀಮತಿ ಪ್ರಿಯಾಂಕ ಯಾದವ್

*ದಕ್ಷಿಣ ವಲಯದಿಂದ ಉತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿಗಳು*
ಡಾಕ್ಟರ್ ಗೀತಾ ಲಕ್ಷ್ಮಣ್ ಸಿಂಧಿ ಶಾಲೆ, ಹೆಬ್ಬಾಳ, ಬೆಂಗಳೂರು.

*ಪಶ್ಚಿಮ ವಲಯದ ಅತ್ಯುತ್ತಮ ಶಿಕ್ಷಕರಿಗೆ ಶ್ರೀ ಶ್ರೀ ಪ್ರಶಸ್ತಿಗಳು*
ಶ್ರೀಮತಿ ಸುನೀತಾ ಚಂದ್ ,ಡಿಎ ವಿ ಪಬ್ಲಿಕ್ ಸ್ಕೂಲ್ ,ಐರೋಲಿ, ನವಿ ಮುಂಬೈ.
*ವಿಶೇಷ ಉಲ್ಲೇಖ*
ಅಡ್ವಕೇಟ್ ರಾಜೇಂದರ್ ಅಪ್ಪಾ ಸಾಹೇಬ್, ಕೋಲಿ ಸರ್ಕಾರಿ ಪ್ರಾಥಮಿಕ ಶಾಲೆ, ಮಂಗಳವೇಧ ಜಿಲ್ಲೆ ,ಶೋಲಾಪುರ.
*ಮಾನವೀಯ ಮೌಲ್ಯಗಳ ಶಿಕ್ಷಣಕ್ಕೆ ಅತ್ಯುತ್ತಮ ಕೊಡುಗೆ*
ಶ್ರೀ ಪೋಲಾ ಭಾಸ್ಕರ್ ಕಾಲೇಜು ಶಿಕ್ಷಣದ ಕಮಿಷನರ್ ಕಾರ್ಯದರ್ಶಿ,GAD( ಸೇವೆಗಳು ಮತ್ತು HRM)
https://drive.google.com/drive/folders/1HrpT0OzpoGOZiqev4zZ613gohwFx2MVq

ಇತ್ತೀಚಿನ ಸುದ್ದಿ

ಜಾಹೀರಾತು