6:02 PM Saturday27 - June 2026
ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು ಮಂಗಳೂರಿನಲ್ಲೇ ಇದ್ದಿದ್ದರೆ ಶಿಕ್ಷಕನಾಗಿರುತ್ತಿದ್ದೆ: ಬಾಲಿವುಡ್ ಬಾದ್ ಶಾ ಶಾರುಖ್‌ ಖಾನ್ ಎಐ ತಂತ್ರಜ್ಞಾನದಲ್ಲಿ ಗೃಹಿಣಿಯ ಫೋಟೋ ಎಡಿಟ್; 30 ಲಕ್ಷಕ್ಕೆ ಬೇಡಿಕೆ; ಮಹಿಳೆ ಆತ್ಮಹತ್ಯೆಗೆ… ಟ್ರಾಫಿಕ್ ಸಮಸ್ಯೆಯಾಗಿದ್ದು ನಿಜ, ನೀಟ್ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಸಹಾಯ ಮಾಡ್ತೀವಿ: ಕೆಪಿಸಿಸಿ ಅಧ್ಯಕ್ಷ… ಚನ್ನಪಟ್ಟಣ | ಎಕ್ಸ್​ಪ್ರೆಸ್​ ರಸ್ತೆಯಲ್ಲಿ ಭೀಕರ ಅಪಘಾತ: ಕಾರಿನ ಚಕ್ರ ಸ್ಫೋಟಗೊಂಡು ಚಾಲಕ… ಹಸೆಮಣೆ ಏರಬೇಕಿದ್ದಾಕೆಗೆ ಪಾಪಿ ಯುವಕನಿಂದ ಬೆದರಿಕೆ: ಮಾನಕ್ಕೆ ಅಂಜಿ ಒಂದೇ ಕುಟುಂಬದ ಮೂವರು… ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್…

ಇತ್ತೀಚಿನ ಸುದ್ದಿ

ಡ್ರೈವಿಂಗ್ ನಲ್ಲಿ ಪ್ರಸಿದ್ಧರಾದ ನಿವೃತ್ತ ಸೈನಿಕ, ಶತಾಯುಷಿ ಮಂಗಳೂರಿನ ಮೈಕಲ್ ಡಿಸೋಜ ಇನ್ನಿಲ್ಲ

11/09/2022, 10:42

ಮಂಗಳೂರು(reporterkarnataka.com):ಡ್ರೈವಿಂಗ್ ನಲ್ಲಿ ಎತ್ತಿದ ಕೈಗೆ ಪ್ರಸಿದ್ಧರಾದ ನಿವೃತ್ತ ಸೈನಿಕ, ಶತಾಯುಷಿ ಮಂಗಳೂರಿನ ಮೈಕಲ್ ಡಿಸೋಜ (108)  ಅವರು ನಿಧನರಾಗಿದ್ದಾರೆ.

ಭಾರತೀಯ ಸೇನೆಯಲ್ಲಿ ಮೆಕ್ಯಾನಿಕಲ್ ಕಮ್ ಡ್ರೈವರ್ 10 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸೈನ್ಯದಲ್ಲಿ 10 ವರ್ಷ ಸೇವೆಯ ನಂತರ ಲೋಕೋಪಯೋಗಿ ಇಲಾಖೆಗೆ ಸೇರಿ ಉಡುಪಿ ರಥಬೀದಿಯ ಕಾಂಕ್ರೀಟ್ ರಸ್ತೆ, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಮಂಗಳೂರಿನ ಕೂಳೂರು ಸೇತುವೆ, ಮಲ್ಪೆ ಕಲ್ಮಾಡಿ ಸೇತುವೆ, ಬೈಂದೂರಿನ ಸೇತುವೆಗಳು, ಉಭಯ ಜಿಲ್ಲೆಗಳ ಅನೇಕ ಹಳೆಯ ಸೇತುವೆಗಳನ್ನು ನಿರ್ಮಿಸುವಾಗ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅವರು ಪರ್ಕಳದಲ್ಲಿ ವಾಸ್ತವ್ಯ ಹೊಂದಿದ್ದರು.ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು.100 ವರ್ಷ ಕಳೆದರೂ ಉತ್ತಮ ದೃಷ್ಟಿ ಸಾಮರ್ಥ್ಯ
ಹೊಂದಿದ್ದರು.

2024ರ ತನಕ ಮಂಗಳೂರಿನ ಆರ್‌ ಟಿಒ ಅವರಿಗೆ ನಾಲ್ಕು ಚಕ್ರ ವಾಹನ ಚಾಲನೆ ಪರವಾನಗಿ ನೀಡಿತ್ತು. ಮೃತರ ಪತ್ನಿ 98ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ಮೈಕಲ್ ಅವರ ತಾಯಿ ಕೂಡ 108 ವರ್ಷ ಕಾಲ ಬದುಕಿದ್ದರು. ಮಂಗಳೂರಿನ ಚರ್ಚ್‌ನಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು