7:34 PM Thursday20 - August 2026
ಬ್ರೇಕಿಂಗ್ ನ್ಯೂಸ್
ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ

ಇತ್ತೀಚಿನ ಸುದ್ದಿ

ಸಂಹಿತಾ ಸಾಧನೆಗೆ ಶಿಕ್ಷಣ ಸಚಿವರ ಅಭಿನಂದನೆ; ದೂರವಾಣಿ ಕರೆ ಮಾಡಿದ ಮಿನಿಸ್ಟ್ರು ಬಿ.ಸಿ. ನಾಗೇಶ್

16/08/2022, 19:26

ಮಂಗಳೂರು(reporterkarnataka.com): ವಿಶ್ವ ಟೇಕ್ವಾಂಡೋ ಚಾಪಿಯನ್‌ ಶಿಪ್‌ ನಲ್ಲಿ ಮಹಿಳೆಯರ (ಕಿರಿಯ) ವಿಭಾಗದಲ್ಲಿ ಬೆಳ್ಳಿ ಗೆದ್ದ ಶಾರದಾ  ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ.ಸಂಹಿತಾ ಅಲೆವೂರಾಯ ಅವರನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದಿಸಿದ್ದಾರೆ.

ಸಂಹಿತಾ ಹೆತ್ತವರಾದ ಕದ್ರಿಯ ವಾಸುದೇವ ಭಟ್‌ ಕುಂಜತ್ತೋಡಿ ಅವರಿಗೆ ಕರೆ ಮಾಡಿದ ಶಿಕ್ಷಣ ಸಚಿವರು, ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಕ್ರೀಡೆಯ ಕುರಿತು ಮಕ್ಕಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಸಂಹಿತಾ ಅವರ ಸಾಧನೆ ಕುರಿತು ಮೂಖ್ಯಮಂತ್ರಿ ಅವರಿಗೆ ತಿಳಿಸುತ್ತೇನೆ ಎಂದರು.

ಬಳಿಕ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಕರೆ ಮಾಡಿ ಸಂಹಿತಾ ಸಾಧನೆಗೆ ಅಭಿನಂದಿಸಿದ್ದು, ನಮ್ಮೂರ ಹುಡುಗಿಯ ಕ್ರೀಡೆಯ ಸಾಧನೆ ಎಲ್ಲರಿಗೆ ಪ್ರೇರಣೆ ಎಂದರು.  

“ನಾನು ಕರೆಯನ್ನು ನಿರೀಕ್ಷಿಸಿರಲಿಲ್ಲ. ನಾನ್ರಿ ಏಜುಕೇಶನ್‌ ಮಿನಿಸ್ಟ್ರು ಬಿ.ಸಿ. ನಾಗೇಶ್‌ ಮಾತನಾಡೋದು ಎಂದಾಗ ಖಚಿತ ಆಯಿತು. ನನ್ನ ನಂಬರ್‌ ಸಂಗ್ರಹಿಸಿ ಕರೆ ಮಾಡುವಂತಹ ಸ್ಪಂದನೆ ಇರುವ ಸಚಿವರಿಗೆ ಮತ್ತು ಜನಸ್ಪಂದನ ಸರಕಾರಕ್ಕೆ ಕೃತಜ್ಞ” ಎಂದು ವಾಸುದೇವ ಭಟ್‌ ಕುಂಜತ್ತೋಡಿ ಹೇಳಿದ್ದಾರೆ.

ವಾಸುದೇವ ಭಟ್‌ ಅವರ ಪತ್ನಿ ದೀಪಾ ಕೆ.ಎಸ್.‌ ಮತ್ತು ಋತ್ವಿಕ್‌ ಅಲೆವೂರಾಯ ಅವರು ಪವರ್‌ಲಿಫ್ಟಿಂಗ್‌ ವಿಭಾಗದಲ್ಲಿ ಅಂತಾರಾಷ್ಟ್ರೀಯ ಕೂಟಗಳಲ್ಲಿ, ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗಳಿಸಿದ್ದಾರೆ. ಒಂದೇ ಮನೆಯ ಮೂರು ಮಂದಿಯೂ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವುದು ಗಮನೀಯ.

ಇತ್ತೀಚಿನ ಸುದ್ದಿ

ಜಾಹೀರಾತು