7:41 PM Thursday12 - February 2026
ಬ್ರೇಕಿಂಗ್ ನ್ಯೂಸ್
ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ… ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೃಷ್ಣಾ ನದಿ ನೀರು; ಶೀಘ್ರವೇ ಆಂಧ್ರ ಸಿಎಂ ಜತೆ…

ಇತ್ತೀಚಿನ ಸುದ್ದಿ

ವೈದ್ಯರ ಹೂ ಕುಂಡ ಎತ್ತುವ ದಮ್ಮು ಇಲ್ಲದ ಪಾಲಿಕೆ ಆಡಳಿತ, ಅಕ್ರಮ ಕಟ್ಟಡಕ್ಕೆ ಕೈಹಾಕಿತೇ?: ಇದು ಮಂಗಳೂರಿಗರ ಪ್ರಶ್ನೆ

18/05/2022, 11:16

ಮಂಗಳೂರು(reporterkarnataka.com): ಪ್ರತಿಷ್ಠಿತರ ಅತಿಕ್ರಮಣದ ವಿರುದ್ಧ ಕೈಚೆಲ್ಲಿದ ಮಂಗಳೂರು ಮಹಾನಗರಪಾಲಿಕೆ ಆಡಳಿತ ಸಾರ್ವಜನಿಕರ ಛೀಮಾರಿಗೆ ಒಳಗಾಗಿದೆ. ನಗರದ ಡೊಂಗರಕೇರಿಯಲ್ಲಿ ವೈದ್ಯರೊಬ್ಬರು ಸಾರ್ವಜನಿಕ ಫುಟ್ ಪಾತ್ ಪ್ರದೇಶವನ್ನು ಅತಿಕ್ರಮಣ ಮಾಡಿ ಇಟ್ಟಿದ್ದ ಹೂ ಕುಂಡವನ್ನು ತೆಗೆಸುವಲ್ಲಿ ವಿಫಲವಾಗಿದೆ. ಗಡುವು ಮುಗಿದರೂ ಹೂ ಕುಂಡ ತೆರವಾಗದಿರುವುದನ್ನು ಕಂಡು ಮತ್ತೆ ಸಾಮಾಜಿಕ ಕಾರ್ಯಕರ್ತರೇ ತೆರವುಗೊಳಿಸಿದ ಘಟನೆ ನಡೆದಿದೆ.


ಹಲವು ತಿಂಗಳಿಗಳಿಂದ ಡೊಂಗರಕೇರಿಯಲ್ಲಿ ಅನಧಿಕೃತವಾಗಿ ಪ್ರತಿಷ್ಠಿತ ಹೃದಯತಜ್ಞ ವೈದ್ಯರ ಮನೆಯ ಮುಂಭಾಗದಲ್ಲಿ ಇಟ್ಟಂಥಹ ಹೂವಿನ- ಕುಂಡದ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ, ದಕ್ಷಿಣ ವಿಧಾನ ಸಭೆ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ಬಂದರು ಪೊಲೀಸ್ ಠಾಣೆಗೆ ಈ ವಿಚಾರಗಳ ಬಗ್ಗೆ ಮನವಿಯನ್ನ ಸಲ್ಲಿಸಲಾಗಿತ್ತು

ರಾಜಕೀಯ ಒತ್ತಡಕ್ಕೆ ಮಣಿದ ಪಾಲಿಕೆ ಆಡಳಿತ ತರವುಗೊಳಿಸುವಲ್ಲಿ ವಿಫಲವಾಗಿತ್ತು. ಇದರಿಂದ ಡೊಂಗರಕೇರಿ ಪರಿಸರದ ನಾಗರೀಕರಿಗೆ ಯಾವುದೇ ರೀತಿಯಲ್ಲಿ ನ್ಯಾಯ ಸಿಗಲಿಲ್ಲ. ಮೇ 4ರಂದು ಅದೇ ಸ್ಥಳದಲ್ಲಿ ಪ್ರತಿಭಟನೆ ಮಾಡಿ ಮಂಗಳೂರು ಮಹಾನಗರ ಪಾಲಿಕೆಗೆ, ಮಾಧ್ಯಮ ಸ್ನೇಹಿತರ ಮುಖಾಂತರ ಮುಂದಿನ 10 ದಿನಗಳಲ್ಲಿ ಈ ಹೂವಿನ ಕುಂಡವನ್ನು ತೆರವುಗೊಳಸದೇ ಇದ್ದಲ್ಲಿ ಸಾರ್ವಜನಿಕರೇ ಸೇರಿ ಮಹಾನಗರ ಪಾಲಿಕೆ ಮಾಡುವಂತಹ ಕೆಲಸ ಮಾಡಿ ತೋರಿಸುತ್ತೇವೆ ಎಂಬ  ಸ್ಪಷ್ಟ ಎಚ್ಚರಿಕೆಯ ಸಂದೇಶವನ್ನು ಕೂಡ ರವಾನಿಸಲಾಗಿತ್ತು. ಇದೀಗ ಶಾಂತಿ ಸಂದೇಶವನ್ನು ಜಗತ್ತಿಗೆ ಸಾರಿದ ಗೌತಮ ಬುದ್ಧರ ಬುದ್ಧ ಪೂರ್ಣಿಮೆಯ ವಿಶೇಷ ದಿನದಂದು ಸಾಮಾಜಿಕ ಕಾರ್ಯಕರ್ತರ ಮಂಜುಳಾ ನಾಯಕ್ ನೇತೃತ್ವದಲ್ಲಿ ಹೂ ಕುಂಡಗಳನ್ನು ತೆರವುಗೊಳಿಸಲಾಯಿತು.

ಸಾರ್ವಜನಿಕರ ಸ್ಥಳದಲ್ಲಿ ಸಾರ್ವಜನಿಕರಿಗೆ ತೊಂದರೆಯಾದಾಗ ಪಾಲಿಕೆ ಆಡಳಿತ ಸ್ಪಂದಿಸಿ ತೆರವುಗೊಳಿಸಬೇಕಿತ್ತು. ಆದರೆ ಈ ಕೆಲಸವನ್ನು ಪಾಲಿಕೆ ಆಡಳಿತ ಮಾಡಿಲ್ಲ. ಇಲ್ಲಿನ ಕಾರ್ಪೊರೇಟರ್,  ಮೇಯರ್ ಮುಂತಾದವರು ಹಣವಂತರ, ಪ್ರಭಾವಿಗಳ ಓಟು ಮಾತ್ರ ಪಡೆದು ಗೆದ್ದವರೇ? ಸಾಮಾನ್ಯರ ಓಟು ಇವರಿಗೆ ಬಿದ್ದಿಲ್ಲವೇ? ಹೂ ಕುಂಡು ಎತ್ತುವ ದಮ್ಮು ಇಲ್ಲದ ಪಾಲಿಕೆ ಆಡಳಿತ ಮತ್ತೆ ಅಕ್ರಮ ಕಟ್ಟಡಗಳಿಗೆ ಕೈ ಹಾಕಿತೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಪಾಲಿಕೆ ಮೇಯರ್ ಮತ್ತು ಕಮಿಷನರ್ 
ಉತ್ತರಿಸಬೇಕು.

ಇತ್ತೀಚಿನ ಸುದ್ದಿ

ಜಾಹೀರಾತು