9:37 PM Tuesday26 - May 2026
ಬ್ರೇಕಿಂಗ್ ನ್ಯೂಸ್
ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ 30ರಂದು ಮಂಗಳೂರಿಗೆ: ಧರ್ಮಸ್ಥಳದಲ್ಲಿ ವಾಸ್ತವ್ಯ ಗಂಡನ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಗರ್ಭಿಣಿ ಪತ್ನಿ! ಕಿಡ್ನಿ, ಹಾರ್ಟ್ ಮತ್ತು… ಕಾಫಿ ತೋಟದಲ್ಲಿ ಕಾಡಾನೆಗಳ ‘ರೌದ್ರ ನರ್ತನ: ಅರಣ್ಯ ಸಿಬ್ಬಂದಿಯನ್ನೇ ಬೆನ್ನಟ್ಟಿದ ಗಜಪಡೆ ಮೇಕೆದಾಟು ವಿವಾದ: ತಮಿಳುನಾಡು ಸಿಎಂ ವಿಜಯ್ ತುರ್ತು ಸಭೆ, ಕಾನೂನು ಹೋರಾಟ ಚುರುಕುಗೊಳಿಸಲು… ಕೊಲ್ಲೂರು ಆಕ್ಸಿಡೆಂಟ್ | ಮೃತ ಮಹಿಳೆಯ ಮೈ ಮೇಲಿನ ಚಿನ್ನಾಭರಣ ಕದ್ದ ಕೇಸಿಗೆ… ಚಿಕ್ಕಮಗಳೂರು: ಕೈ ಕೈ ಮಿಲಾಯಿಸುವ ಮಟ್ಟಿಗೆ ತಲುಪಿದ ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ… ಮಂಗಳೂರು ವಿಮಾನ ದುರಂತ | ಕಾಕ್‌ಪಿಟ್‌ನಲ್ಲಿ ಹಾರಾಟದ ವೇಳೆ 1 ಗಂಟೆ 40… ಭಾರತೀಯರ ರಕ್ತಕ್ಕೆ ಪಾಕ್​ನಲ್ಲಿ ಪ್ರತೀಕಾರ: ಪುಲ್ವಾಮಾ ದಾಳಿ ಮಾಸ್ಟರ್‌ ಮೈಂಡ್ ಹಮ್ಜಾ ಬುರ್ಹಾನ್… ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ ಪ್ರಕಟ: 80,535 ವಿದ್ಯಾರ್ಥಿಗಳ ಪೈಕಿ 36,764 ಮಂದಿ… ತಜ್ಞರ ಸಮಿತಿ ವರದಿಯನ್ನು ನಿರ್ಲಕ್ಷಿಸಿದ್ದೇ ದುಬಾರೆ ದುರ್ಘಟನೆ ಕಾರಣ?

ಇತ್ತೀಚಿನ ಸುದ್ದಿ

ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಏಪ್ರಿಲ್ 6ರ ವರೆಗೆ ಭಾರೀ ಮಳೆ ಸಾಧ್ಯತೆ

04/04/2022, 08:12

ಬೆಂಗಳೂರು(reporterkarnataka.com):ರಾಜ್ಯದಲ್ಲಿ ಮತ್ತೆ ಮಳೆ ಬರುವ ಮುನ್ಸೂಚನೆವಿದ್ದು, ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 6 ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ.

ಉಡುಪಿ, ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಚಿಕ್ಕಮಗಳೂರು ಬೆಂಗಳೂರು, ಉತ್ತರ ಕನ್ನಡ,ಮತ್ತು ಶಿವಮೊಗ್ಗದಲ್ಲಿ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.

ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗಲಿದೆ. ಕರ್ನಾಟಕದ ದಕ್ಷಿಣ ಒಳನಾಡಿನ ಹಲವೆಡೆ ಕೂಡ ಮಳೆಯಾಗುವ ಸಾಧ್ಯತೆಯಿದೆ.

ಇತ್ತೀಚಿನ ಸುದ್ದಿ

ಜಾಹೀರಾತು