8:19 AM Sunday5 - July 2026
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ | ಅರಳಾಪುರದ ಕೊಪ್ಪಲು ಗ್ರಾಮದಲ್ಲಿ ಗಾಳಿ ಮಳೆಗೆ ಬಿದ್ದ ಬೃಹತ್ ಮರ:… Raichuru | ಮಸ್ಕಿ: ಅತಿಥಿ ಶಿಕ್ಷಕರ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ… ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಜೂಜಾಟ: 28 ಜನರ ಬಂಧನ;… ಮತ ಪರಿಷ್ಕರಣೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ..!?: ಮನೆ ಮನೆಗೆ ಹೋಗುವ ಬದಲಾಗಿ ಜನರನ್ನೇ… ಮುಂದಿನ ಪೀಳಿಗೆಗೆ ಹಿಂಸೆ, ದ್ವೇಷ, ಸುಳ್ಳಿನ ಭಾರತವನ್ನು ಕೊಡಬಾರದು: ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ಕಾಸು ಬೇಕಾದ್ರೆ ನನ್ನ ಹತ್ರ ಕೇಳೋ: ಲಂಚಕೋರ ಅಧಿಕಾರಿಗೆ ಕುಣಿಗಲ್ ಶಾಸಕ ಡಾ.… Bangalore | ವೇಶ್ಯಾವಾಟಿಕೆ:12 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಸಿಸಿಬಿ ಪೊಲೀಸರ ವಶಕ್ಕೆ ಶಾಸಕ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಯತ್ನ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ… ಬೆಂಗಳೂರು | ನಕಲಿ ಪೊಲೀಸ್ ಅಸಲಿ ಆಟ: ಯೂನಿಫಾರ್ಮ್ ಧರಿಸಿ ಬೈಕ್ ಸವಾರರಿಂದ… Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ…

ಇತ್ತೀಚಿನ ಸುದ್ದಿ

ಯೋಗಿ ಭರ್ಜರಿ ಜಯ: ಕದ್ರಿ ಜೋಗಿ ಮಠ ಹರ್ಷಮಯ!!; ದೂರದ ಉತ್ತರ ಪ್ರದೇಶಕ್ಕೂ ದಕ್ಷಿಣದ ಮಂಗಳೂರಿಗೂ ಎತ್ತಣ ಸಂಬಂಧ?

10/03/2022, 20:16

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ದೂರದ ಮಂಗಳೂರಿನ ಕದ್ರಿಯಲ್ಲಿರುವ ಜೋಗಿ ಮಠದಲ್ಲಿ ಸಂಭ್ರಮ ಆಚರಿಸಲಾಯಿತು. ಉತ್ತರದ 

ಹಿಮಾಲಯ ತಪ್ಪಲಿನ ಉತ್ತರ ಪ್ರದೇಶಕ್ಕೂ ದಕ್ಷಿಣದ ಮಂಗಳೂರಿಗೂ ಎತ್ತಣ ಸಂಬಂಧ ಎಂದು ನೀವೆಲ್ಲ ತಲೆ ಕೆರೆದುಕೊಳ್ಳಬಹುದು. ಆದರೆ ಸಂಬಂಧ ಇರುವುದರಿಂದಲೇ ಕದ್ರಿಯ ಜೋಗಿ ಮಠದಲ್ಲಿ ಸಂಭ್ರಮ ನೆಲೆಸಿದೆ.

ಆದಿತ್ಯನಾಥ್ ಯೋಗಿ ನೇತೃತ್ವದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಯೋಗಿ ಅವರು ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ. ಇವೆಲ್ಲ ಖುಷಿ ಉತ್ತರ ಪ್ರದೇಶ ಮಾತ್ರವಲ್ಲದೆ ದಕ್ಷಿಣ ಭಾರತದ ಮಂಗಳೂರಿನ ಕದ್ರಿಯಲ್ಲಿರುವ ಜೋಗಿ ಮಠದಲ್ಲಿಯೂ ಮಡುಗಟ್ಟಿ ನಿಂತಿದೆ.

ಯೋಗಿ ಆದಿತ್ಯನಾಥ್‌ ಅವರಿಗೂ  ಮಂಗಳೂರಿಗೂ ಅವಿನಾಭಾವ ಸಂಬಂಧ ಇದೆ. ಯೋಗಿಯವರ ಭರ್ಜರಿ ಗೆಲುವು ಇಲ್ಲಿಯ ಕದ್ರಿಯಲ್ಲಿರುವ ಕದಳಿ ಶ್ರೀ ಯೋಗೇಶ್ವರ (ಜೋಗಿ) ಮಠದಲ್ಲಿ ಸಂಭ್ರಮ ನೆಲೆಸುವಂತೆ ಮಾಡಿದೆ.

ಯೋಗಿ ಆದಿತ್ಯನಾಥ್ ಅವರು ಅಖಿಲ ಭಾರತ ವರ್ಷಿಯ ಅವಧೂತ್ ಯೋಗಿ ಮಹಾ ಸಭಾ ಭೇಕ್ ಭಾರಹ ಪಂಥದ ಮಹಾಂತ್ ಆಗಿದ್ದು, 12
ವರ್ಷಗಳಿಗೊಮ್ಮೆ ನಡೆಯುವ ಮಂಗಳೂರು ಕದ್ರಿಯ ಜೋಗಿ ಮಠದ ಮಠಾಧಿಪತಿ (ರಾಜ) ಗಳ ಆಯ್ಕೆ ಸಂದರ್ಭದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಯೋಗಿ ನೇತೃತ್ವದಲ್ಲಿಯೇ ಮಠಾಧಿಪತಿಯ ಆಯ್ಕೆ ನಡೆಯುತ್ತದೆ. ಭಾರಹ ಪಂಥದ ಪದಾಧಿಕಾರಿಗಳ ಸಮ್ಮುಖದಲ್ಲಿ ಕುಂಭಮೇಳದ ಸಮಯದಲ್ಲಿ ನಾಸಿಕ್ ಸಮೀಪದ ತ್ರಯಂಬಕೇಶ್ವರದಲ್ಲಿ 12 ಪಂಗಡಗಳ ಶ್ರೀಗಳು ಮಂಗಳೂರು ಜೋಗಿ  ಮಠದ  ‘ರಾಜ’ವನ್ನು ಆಯ್ಕೆ ಮಾಡುತ್ತಾರೆ.

ಯೋಗಿಯವರು ಆಯ್ಕೆ ಮಾಡಿದ ಬೈರಾಗ್ ಪಂಥದ ಶ್ರೀ ಯೋಗಿ ನಿರ್ಮಲನಾಥ್ ಅವರು ಸದ್ಯ ಜೋಗಿ ಮಠದ ‘ರಾಜ’ನಾಗಿದ್ದಾರೆ. ಜೋಗಿ ಮಠಕ್ಕೆ ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. 

ಯೋಗಿಯವರು ಇಲ್ಲಿಯ ತನಕ ಮಂಗಳೂರಿಗೆ 6 ಸಲ ಭೇಟಿ ನೀಡಿದ್ದಾರೆ. ಕರ್ನಾಟಕಕ್ಕೆ ಭೇಟಿ ನೀಡಿದಾಗ ಪ್ರತೀ ಸಂದರ್ಭದಲ್ಲೂ ಅವರು ಜೋಗಿ ಮಠಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ವಿಶ್ರಾಂತಿ, ವಾಸ್ತವ್ಯಕ್ಕೆ ಜೋಗಿ ಮಠವನ್ನೇ ಆಶ್ರಯಿಸುತ್ತಾರೆ. ಸಾಮಾನ್ಯರಲ್ಲಿ ಸಾಮಾನ್ಯನಂತೆ ನೆಲದ ಮೇಲೆಯೇ ಪವಡಿಸುತ್ತಾರೆ. ಒಟ್ಟಿನಲ್ಲಿ ಕದ್ರಿ ಜೋಗಿ ಮಠದಲ್ಲಿ ಸಂಭ್ರಮ ನೆಲೆಸುವಂತೆ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು