10:37 PM Wednesday6 - May 2026
ಬ್ರೇಕಿಂಗ್ ನ್ಯೂಸ್
ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು ಕೇವಲ 1 ಮತದಿಂದ ಡಿಎಂಕೆ ಅಭ್ಯರ್ಥಿ ವಿರುದ್ಧ ರೋಚಕ ಗೆಲುವು ಕಂಡ ಟಿವಿಕೆ… ಕೇರಳದಲ್ಲಿ ಯುಡಿಎಫ್‌ ಶತಕ: ಸಿಎಂ ರೇಸ್​ನಲ್ಲಿ ಮೂವರ ಹೆಸರು ಪಶ್ಚಿಮ ಬಂಗಾಳ: ಚುನಾವಣೆ ಫಲಿತಾಂಶ ಬಳಿಕ ಗಲಾಟೆ, ಪೊಲೀಸರಿಂದ ಲಾಠಿಚಾರ್ಜ್ ಪಶ್ಚಿಮ ಬಂಗಾಳ: ಸಿಎಂ ಮಮತಾ ಬ್ಯಾನರ್ಜಿ ನಿವಾಸದ ಎದುರು ‘ಜೈ ಶ್ರೀರಾಮ್’ ಘೋಷಣೆ… ಮಗ ಸಿಎಂ ಆಗೋ ಖುಷಿಯಲ್ಲಿ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ವಿಜಯ್‌ ತಂದೆ-ತಾಯಿ

ಇತ್ತೀಚಿನ ಸುದ್ದಿ

ಅಪ್ಪಟ ಕನ್ನಡತಿ, ಗೌರಿಬಿದನೂರಿನ ಶಿಲ್ಪಾ ಪ್ರಭಾಕರ್  ತಮಿಳುನಾಡು ಮುಖ್ಯಮಂತ್ರಿಯ ವಿಶೇಷ ಅಧಿಕಾರಿ

29/05/2021, 07:39

ಚಿಕ್ಕಬಳ್ಳಾಪುರ(reporterkarnataka news): ಕಾವೇರಿ ವಿಷಯದಲ್ಲಿ ಕರ್ನಾಟಕ ಮತ್ತು ತಮಿಳುನಾಡಿಗೆ ಯಾವಾಗಲೂ ಮನಸ್ತಾಪ ಇದ್ದದ್ದೇ. ಈ ವಿಷಯ ಬಿಟ್ಟರೆ ಕನ್ನಡಿಗರು ಮತ್ತು ತಮಿಳರು ಅನ್ಯೋನ್ಯವಾಗಿಯೇ ಬದುಕು ಸಾಗಿಸುತ್ತಿದ್ದಾರೆ. ಇದೀಗ ಅಚ್ಚರಿಯ ವಿಷಯವೆಂದರೆ ತಮಿಳುನಾಡು ಮುಖ್ಯಮಂತ್ರಿಯವರ ವಿಶೇಷ ಅಧಿಕಾರಿ ನಮ್ಮ ಅಪ್ಪಟ ಕನ್ನಡತಿ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ ವಿವಿ ಪುರಂ ಬಡಾವಣೆಯ ಶಿಲ್ಪಾ ಪ್ರಭಾಕರ್ ಅವರೇ ವಿಶೇಷ ಅಧಿಕಾರಿ. ಇವರು ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್​ ಅವರ ಪುತ್ರಿ.

1981 ಆಗಸ್ಟ್ 31 ಗೌರಿಬಿದನೂರು ನಗರದಲ್ಲಿ ಜನಿಸಿದ ಶಿಲ್ಪಾ, ಪ್ರಾಥಮಿಕ ಹಾಗೂ ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ನ್ಯಾಷನಲ್ ಕಾಲೇಜ್​ನಲ್ಲಿ ಪೂರೈಸಿದರು. ಬೆಂಗಳೂರಿನಲ್ಲಿ ಎಲ್ ಎಲ್ ಬಿ ಪದವಿ ಪಡೆದರು.  ನಂತರ ಯುಪಿಎಸ್ ಸಿ ಪರೀಕ್ಷೆಗೆ ಕುಳಿತರು. ಅಲ್ಲಿ 46ನೇ ಸ್ಥಾನದೊಂದಿಗೆ ಉತ್ತೀರ್ಣರಾಗಿದ್ದರು. 2018ರಲ್ಲಿ ತಮಿಳುನಾಡಿನ ತಿರುವನ್ವೇಲಿ ಜಿಲ್ಲೆಯ ಮೊದಲ ಮಹಿಳಾ ಜಿಲ್ಲಾಧಿಕಾರಿಯಾಗಿ ನೇಮಕಗೊಂಡರು. ಅಂಗನವಾಡಿ ಕೇಂದ್ರಗಳನ್ನು ದೇಶದಲ್ಲಿಯೇ ಮಾದರಿ ಅಂಗನವಾಡಿ ಮಾಡಲು ನಿರ್ಧರಿಸಿ ತಮ್ಮ ಮೂರು ವರ್ಷದ ಹೆಣ್ಣುಮಗುವನ್ನು ಅಂಗನವಾಡಿಗೆ ಸೇರಿಸುವ ಮೂಲಕ ಇಡೀ ದೇಶದ ಗಮನವನ್ನು ಸೆಳೆದರು. ಶಿಲ್ಪಾ ಅವರು ಮುಂದೆ ಎಂದೂ ತನ್ನ ವೃತ್ತಿ ಜೀವನದಲ್ಲಿ ಹಿಂತಿರುಗಿ ನೋಡಿಲ್ಲ. ಇದೀಗ ತಮಿಳುನಾಡು ಸಿಎಂ ನ ವಿಶೇಷ ಅಧಿಕಾರಿ.

ಇತ್ತೀಚಿನ ಸುದ್ದಿ

ಜಾಹೀರಾತು