ಇತ್ತೀಚಿನ ಸುದ್ದಿ
ಕ್ಲಬ್ ಹೌಸ್‌ನ ಸಂಘದಂಗಳ ವೇದಿಕೆಯಲ್ಲಿ ಅ. 27 ‘ಮಾತೃ ಸಂಗಮ’
26/10/2021, 14:22
ಮಂಗಳೂರು(reporterkarnataka.com): ಕ್ಲಬ್ ಹೌಸ್‌ನ ಸಂಘದಂಗಳ ವೇದಿಕೆಯಲ್ಲಿ ಅ. 27 ರಂದು ಸಂಜೆ 7.30 ಕ್ಕೆ ‘ಮಾತೃ ಸಂಗಮ’ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶಾರದಾಶ್ರಮ ಚಳ್ಳಕೆರೆ ಅವರು ಆಶೀರ್ವಚನ ನೀಡಲಿದ್ದಾರೆ. ವಿಭು ಅಕಾಡೆಮಿ ಬೆಂಗಳೂರು ಇದರ ಮುಖ್ಯಸ್ಥರಾದ ಡಾ. ಆರತಿ ವಿ.ಬಿ. ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ನಟಿ, ನ್ಯಾಯವಾದಿ ಮಾಳವಿಕಾ ಅವಿನಾಶ್ ಅವರು ಪ್ರಸ್ತಾವನೆ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕೇವಲ ಮಹಿಳೆಯರು ಮಾತ್ರವಲ್ಲದೆ ಪುರುಷರು ಸಹ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.














