ಇತ್ತೀಚಿನ ಸುದ್ದಿ
ಯುಪಿ ಮುಖ್ಯಮಂತ್ರಿಗೆ ಮಾತೃವಿಯೋಗ: ಸುದ್ದಿ ತಿಳಿದರೂ ಕಾರ್ಯಕ್ರಮ ಮುಂದುವರೆಸಿದ ಯೋಗಿ ಆದಿತ್ಯನಾಥ್
20/11/2026, 20:54
ಲಕ್ನೋ(reporterkarnataka.com): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಾಯಿ ಸಾವಿತ್ರಿ ದೇವಿ (91) ಅವರು ಉತ್ತರಾಖಂಡದಲ್ಲಿ ನಿಧನರಾಗಿದ್ದಾರೆ. ಪೌಡಿ ಜಿಲ್ಲೆಯ ತಮ್ಮ ಪೂರ್ವಜರ ಗ್ರಾಮವಾದ ಪಂಚೂರ್ನ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
*ತಾಯಿಯ ನಿಧನದ ಸುದ್ದಿ ತಿಳಿದರೂ ಕಾರ್ಯಕ್ರಮ ಮುಂದುವರಿಸಿದ ಯೋಗಿ*
ತಾಯಿಯ ನಿಧನದ ಸುದ್ದಿ ಬಂದ ಸಮಯದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಗೋರಖ್ಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. 50 ಸಾವಿರ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸುವ ಈ ಸಮಾರಂಭದ ನಡುವೆಯೇ ಅವರಿಗೆ ಈ ದುಃಖದ ಸುದ್ದಿ ತಲುಪಿತು.

ಆದಾಗ್ಯೂ, ಅವರು ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸದೆ ಮುಂದುವರಿಸಿದರು. ಸಿಎಂ ಯೋಗಿ ಅವರು ಪೌಡಿಗೆ ತೆರಳಿ ಅಂತಿಮ ದರ್ಶನ ಪಡೆದು ಅಂತಿಮ ವಿಧಿ ವಿಧಾನದಲ್ಲಿ ಪಾಲ್ಗೊಂದರು.












