10:01 PM Sunday8 - November 2026
ಬ್ರೇಕಿಂಗ್ ನ್ಯೂಸ್
ಎಚ್​.ಡಿ.ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು: ಪಿಎ ವಾಟ್ಸಪ್​ ಚಾಟ್​ ಬಗ್ಗೆ ಡಿಸಿ… ಮುಖ್ಯಮಂತ್ರಿ ಡಿಕೆಶಿ ಹಾಸನಾಂಬೆ ದರ್ಶನ ಪಡೆಯುತ್ತಿರುವ ವೀಡಿಯೋಗೆ ಭಕ್ತರಿಂದ ಚಪ್ಪಲಿ ಎಸೆತ: ಸರತಿ… ಕೊಡಗಿನ ಜನತೆಗೆ ಬೆಲೆ ಏರಿಕೆ ನಡುವೆಯೇ ಮತ್ತೊಂದು ಶಾಕ್: ಖಾಸಗಿ ಬಸ್ ದರ… Bangalore | ಹಾಕಿ ದಿಗ್ಗಜ ಕೊಡಗಿನ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ… ಬಸ್ ದರ ಏರಿಕೆ | ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ… Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy… ಸಿಡಿ ಫ್ಯಾಕ್ಟರಿ ಇರೋದು ಅಲ್ಲೇ: ಪ್ರಜ್ವಲ್ ರೇವಣ್ಣ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ…

ಇತ್ತೀಚಿನ ಸುದ್ದಿ

ಎಚ್​.ಡಿ.ಕುಮಾರಸ್ವಾಮಿ ಆರೋಪಕ್ಕೆ ಹಾಸನ ಜಿಲ್ಲಾಧಿಕಾರಿ ತಿರುಗೇಟು: ಪಿಎ ವಾಟ್ಸಪ್​ ಚಾಟ್​ ಬಗ್ಗೆ ಡಿಸಿ ಕೊಟ್ಟ ಸ್ಪಷ್ಟನೆ ಏನು?

08/11/2026, 21:54

ಹಾಸನ(reporterkarnataka.com): ಹಾಸನ ಜಿಲ್ಲಾಡಳಿತದ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿ ಲತಾ ಕುಮಾರಿ ಅವರ ಪಿಎ ಶಶಿಕಿರಣ್ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಕ್ರಷರ್‌ಗಳಿಗೆ ಲೈಸೆನ್ಸ್ ನೀಡಲು ಲಕ್ಷ ಲಕ್ಷ ರೂಪಾಯಿ ಲಂಚ ಕೇಳಲಾಗಿದೆ ಎಂದು ಎಚ್​ಡಿಕೆ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

*ಹಾಸನ ಜಿಲ್ಲಾಧಿಕಾರಿ ಸ್ಪಷ್ಟನೆ:*
ಹಾಸನ ಡಿಸಿ ಆಪ್ತ ಸಹಾಯಕರ ವಾಟ್ಸಾಪ್‌ನಲ್ಲಿ ಲಂಚದ ಹಣ ಬಗ್ಗೆ ಚಾಟ್ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್​ಡಿಕೆ ಆರೋಪ ವಿಚಾರ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿದ್ದು, ಈ ಬಗ್ಗೆ ಹಾಸನ ಡಿಸಿ ಕೆ.ಎಸ್. ಲತಾಕುಮಾರಿ ಅವರು ಸ್ಪಷ್ಟನೆ ನೀಡಿದ್ದಾರೆ. ನಮ್ಮ ವಿರುದ್ಧ ಸುಳ್ಳು ಹಾಗೂ ಆಧಾರರಹಿತ ಮಾಹಿತಿಗಳನ್ನು ಹರಡಲಾಗುತ್ತಿದೆ. ಆದರೆ, ನಾವು ಯಾವುದೇ ರೀತಿಯ ಅನಧಿಕೃತ ಅಥವಾ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಿಲ್ಲ. ಈ ಸಂಬಂಧ ಸಮಗ್ರ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವಂತೆ ಸೈಬರ್ ಕ್ರೈಂ ವಿಭಾಗಕ್ಕೆ ಅಧಿಕೃತವಾಗಿ ದೂರು ಸಲ್ಲಿಸಲಾಗಿದೆ.
ಈ ಕುರಿತು FIR ಕೂಡ ದಾಖಲಿಸಲಾಗಿದೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯಾಂಶ ಹೊರಬಂದು, ಸುಳ್ಳು ಹಾಗೂ ಆಧಾರರಹಿತ ಮಾಹಿತಿಗಳನ್ನು ಹರಡಿರುವ ತಪ್ಪಿತಸ್ಥರನ್ನು ಗುರುತಿಸಿ, ಅವರ ವಿರುದ್ಧ ಕಾನೂನು ರೀತ್ಯಾ ಸೂಕ್ತ ಕ್ರಮ ಜರುಗಿಸಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದು ಹೇಳಿದ್ದಾರೆ.

*ಕುಮಾರಸ್ವಾಮಿ ಆರೋಪವೇನು?:*
ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ಅವರು ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿ, ಹಾಸನ ಡಿಸಿ ಲತಾ ಕುಮಾರಿ ಪಿಎ ವಿರುದ್ಧ ಲಂಚಾವತಾರ ಆರೋಪ ಮಾಡಿದ್ದರು. ಡಿಸಿ ಪಿಎ ಶಶಿಕಿರಣ್ ವಿರುದ್ಧ ಹೆಚ್​​ಡಿಕೆ ಗಂಭೀರ ಆರೋಪ ಮಾಡಿದ್ರು. ಮಧ್ಯವರ್ತಿ ಜೊತೆ ಕ್ರಷರ್​ಗಳಿಗೆ ಪರವಾನಗಿ ಮತ್ತು ಇತರೆ ವಿಚಾರವಾಗಿ ದಾಖಲೆ ಬಿಡುಗಡೆ ಸಹ ಮಾಡಿದ್ದರು. ಮಧ್ಯವರ್ತಿ ಜೊತೆ ಶಶಿಕಿರಣ್ ಚಾಟ್ ಮಾಡಿರೋ ದಾಖಲೆ ಬಿಡುಗಡೆಯಾಗಿದ್ದು, ಚಾಟ್​ನಲ್ಲಿ ಅಧಿಕಾರಿಗಳಿಗೆ ಲಕ್ಷ ಲಕ್ಷ ಲಂಚ ನೀಡಿರುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅಲ್ಲದೇ ಹಾಸನ ಡಿಸಿ ಲತಾಕುಮಾರಿ, ಸಚಿವ ಶಿವಲಿಂಗೇಗೌಡ, ಸಂಸದ ಶ್ರೇಯಸ್ ಪಟೇಲ್, ಅರಸೀಕೆರೆ ತಹಶೀಲ್ದಾರ್ ಸಂತೋಷ್, ಹಾಸನ ತಹಶೀಲ್ದಾರ್ ಗೀತಾ ಹೆಸರು ಉಲ್ಲೇಖವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು