ಇತ್ತೀಚಿನ ಸುದ್ದಿ
ಹೆಂಡ್ತಿಯ ಅಧಿಕಾರದಲ್ಲಿ ಗಂಡನ ದರ್ಬಾರ್!: ಅಜ್ಜಂಪುರ ಪಟ್ಟಣ ಪಂಚಾಯಿತಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಉಪಾಧ್ಯಕ್ಷೆ ಪತಿ!!
06/11/2026, 18:41
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಹೆಂಡತಿಗೆ ಸಿಕ್ಕ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಗಂಡ ದರ್ಬಾರ್ ನಡೆಸಿದ ಘಟನೆ ಅಜ್ಜಂಪುರ ಪಟ್ಟಣ ಪಂಚಾಯಿತಿಯಲ್ಲಿ ನಡೆದಿದೆ.
ಅಜ್ಜಂಪುರ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆಯಾಗಿರುವ ಬಿಜೆಪಿಯ ಶೋಭಾ ಅವರ ಗಂಡ ಸಂತೋಷ್ ಅವರು ಪತ್ನಿಯ ಅಧಿಕಾರವನ್ನು ಸ್ವತಃ ತಾನೇ ಚಲಾಯಿಸುತ್ತಿರುವ ಅಘಾತಕ್ಕಾರಿ ವಿಷಯ ಬೆಳಕಿಗೆ ಬಂದಿದೆ.
ಶೋಭಾ ಅವರ ಪತಿ ಸಂತೋಷ್ ಅವರು ಹೆಂಡ್ತಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ಅಧಿಕಾರಿಗಳ ಸಭೆ ನಡೆಸಿದ್ದಾರೆ. ಹೆಂಡತಿ ಅಧಿಕಾರ ದುರುಪಯೋಗಪಡಿಸಿಕೊಂಡು ಗಂಡ ಸಂತೋಷ್ ಅವರು ದರ್ಬಾರ್ ನಡೆಸಿದ್ದಾರೆ.



ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಶೋಭಾ ಅವರ ಪತಿ ಸಂತೋಷ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ.
ಸಭೆಯಲ್ಲಿ ಸಂತೋಷ್ ಅವರು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಪಟ್ಟಣ ಪಂಚಾಯತಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯ ವಿಡಿಯೋ ವೈರಲ್ ವೈರಲ್ ಆಗಿದೆ. ಪತ್ನಿ ಶೋಭಾರನ್ನ ಪಕ್ಕದಲ್ಲಿ ಕೂರಿಸಿಕೊಂಡು ಅಧಿಕಾರಿಗಳಿಗೆ ಸಂತೋಷ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂತೋಷ್ ವಿರುದ್ಧ
ಸೂಕ್ತ ಕ್ರಮಕ್ಕೆ ಪಟ್ಟಣ ಪಂಚಾಯತಿ ಕಾಂಗ್ರೆಸ್ ಸದಸ್ಯರ ಒತ್ತಾಯಿಸಿದ್ದಾರೆ.
ಅಜ್ಜಂಪುರ ತಹಶಿಲ್ದಾರ್ ಗೆ ಪಟ್ಟಣ ಪಂಚಾಯತಿ ಕಾಂಗ್ರೆಸ್ ಸದಸ್ಯರು ದೂರು ನೀಡಿದ್ದಾರೆ.












