8:39 PM Friday6 - November 2026
ಬ್ರೇಕಿಂಗ್ ನ್ಯೂಸ್
Bangalore | ಹಾಕಿ ದಿಗ್ಗಜ ಕೊಡಗಿನ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ… ಬಸ್ ದರ ಏರಿಕೆ | ಹೆಂಡ್ತಿಗೆ ಫ್ರಿ ಕೊಟ್ಟು ಗಂಡನಿಂದ ಡಬಲ್ ವಸೂಲಿ… Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy… ಸಿಡಿ ಫ್ಯಾಕ್ಟರಿ ಇರೋದು ಅಲ್ಲೇ: ಪ್ರಜ್ವಲ್ ರೇವಣ್ಣ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ… ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಕನ್ನಡ ಬಾವುಟ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಆಗುಂಬೆ ಬಳಿ ಭೀಕರ ಕಾರು ಅಪಘಾತ: ವೈದ್ಯ ವಿದ್ಯಾರ್ಥಿ ದುರ್ಮರಣ; 4 ಮಂದಿಗೆ… ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಮೈತ್ರಿಕೂಟ ಪಟ್ಟು |…

ಇತ್ತೀಚಿನ ಸುದ್ದಿ

Kodagu | ವಿರಾಜಪೇಟೆ: ಮದ್ಯದಲ್ಲಿ ವಿಷ ಬೆರೆಸಿ ಸ್ನೇಹಿತನನ್ನು ಕೊಂದ ಪ್ರಕರಣ; ಆರೋಪಿಗಳ ಬಂಧನ

05/11/2026, 19:17

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಅಕ್ಟೊಬರ್ 21ಕ್ಕೆ ಕಾಣೆಯಾದ ಪೊನ್ನಪ್ಪ ಕೆ.ಪಿ ವಿನು (41) ಶವವಾಗಿ ಪತ್ತೆಯಾಗಿದ್ದು ಹೇಗೆ ಇಲ್ಲಿದೆ ಬೆಚ್ಚಿ ಬೀಳಿಸುವ ಮಾಹಿತಿ ಇಲ್ಲಿದೆ:
ಇದೇ ತಿಂಗಳ 21ರ ಬುಧವಾರ ರಾತ್ರಿ ಒಂಬತ್ತು ಗಂಟೆಗೆ ಮನೆಯಿಂದ ಹೊರಗೆ ಹೋದ ವಿನು ಮನೆಗೆ ಬಾರದ ಹಿನ್ನೆಲೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಗೆ ವಿನು ಅವರ ತಾಯಿ 26 ನೇ ತಾರಿಕಿಗೆ ಮಗ ಕಾಣೆಯಾದ ಬಗ್ಗೆ ಪುಕಾರು ನೀಡಿದ್ದರು.
ಕೆ.ಪಿ. ಪೊನ್ನಪ್ಪ ಅಲಿಯಾಸ್ ವಿನು ಗ್ರಾಮದ ವಿವಿಧ ಕಡೆಗಳಲ್ಲಿ ತೋಟದ ರೈಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ತಾ. 21-10-2026 ರ ರಾತ್ರಿ ಸೋಮಯ್ಯ ಎಂಬಾತ ವಿನುವಿಗೆ ಕರೆಮಾಡಿ ನಿನ್ನೊಂದಿಗೆ ಮಾತನಾಡಬೇಕು ಬಾ ಎಂದು ತಿಳಿಸುತ್ತಾನೆ. ಸೋಮಯ್ಯ ತನ್ನ ಕಾರಿನಲ್ಲಿ ವಿನುವನ್ನು ಕೂರಿಸಿಕೊಂಡು ಕಡಂಗಕ್ಕೆ ಆಗಮಿಸುತ್ತಾನೆ. ಅಲ್ಲಿ ಸತೀಶ್ ಮತ್ತು ಹೆಚ್.ಬಿ. ರವಿ ಅವರು ಸಂಗಡಿಗರೊಂದಿಗೆ ಕಡಂಗ ಬಾರ್ ವೊಂದರಲ್ಲಿ ವಿಸ್ಕಿ ಸೇವನೆ ಮಾಡುತ್ತಾರೆ.
ಈ ಮೊದಲೇ ಸಂಚು ರೂಪಿಸಿದ್ದಂತೆ ಮದ್ಯದೊಂದಿಗೆ ವಿಷವನ್ನು ಬೆರೆಸಿ ವಿನುವಿಗೆ ನೀಡುತ್ತಾರೆ. ಮದ್ಯ ಸೇವನೆ ಮಾಡಿದ ವಿನು ಅಸ್ವಸ್ಥಗೊಳ್ಳುತ್ತಾನೆ.
ಸಂಗಡಿಗರು ವಿನುವಿಗೆ ಮತ್ತೊಮ್ಮೆ ಕುಡಿಸಿ ಆತ ಮೃತನಾದ ಎಂದು ತಿಳಿದಾಗ ಮೃತ ಶರೀರವನ್ನು ಮೂರಿಯೊಂದರಲ್ಲಿರಿಸಿ ಪರಾರಿಯಾಗುತ್ತಾರೆ.
ಮರುದಿನ ಪೊನ್ನಪ್ಪ ಕೆ.ಎಂ. ಅಲಿಯಾಸ್ ಅಪ್ಪಿ ಸಹಾಯದಿಂದ ಸೋಮಯ್ಯ, ರವಿ ಮತ್ತು ಸತೀಶ್‌ ನಾಲ್ವರು ಸೇರಿ ಅರಣ್ಯ ಪ್ರದೇಶದಲ್ಲಿ ಶವವನ್ನು ಹೂತುಹಾಕುತ್ತಾರೆ.
ತಾ. 21-10-2026 ರ ರಾತ್ರಿ ತೆರಳಿದ ವಿನು ನಾಪತ್ತೆಯಾಗಿದ್ದಾನೆ ಎಂದು ತಾಯಿ ರೇಣು ಅವರು ತಾ. 26-10-2026 ರಂದು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುತ್ತಾರೆ. ದೂರು ಸ್ವೀಕರಿಸಿದ ಪೊಲೀಸರು ವಿನು ಅವರ ಸಂಗಡಿಗರನ್ನು ಕರೆಹಾಕಿ ತನಿಖೆ ಮುಂದುವರಿಸುತ್ತಾರೆ.
ಈ ಮಧ್ಯೆ ಸೋಮಯ್ಯನಿಗೆ ತನಿಖೆಗೆ ಸಹಕರಿಸಲು ಠಾಣೆಗೆ ಬರಲು ತಿಳಿಸುತ್ತಾರೆ. ಪೊಲೀಸರ ಕರೆಯಿಂದ ಭಯಗೊಂಡ ಸೋಮಯ್ಯ ತಾ. 26 ರಂದು ಮದ್ಯದೊಂದಿಗೆ ವಿಷ ಪ್ರಾಶನ ಮಾಡಿ ಆತ್ಮಹತ್ಯೆಗೆ ಮುಂದಾಗಿ ತಾ. 27 ರಂದು ಮೈಸೂರು ಆಸ್ಪತ್ರೆಯಲ್ಲಿ ಸಾವನ್ನಪ್ಪುತ್ತಾನೆ. ಬಳಿಕ ಆತ್ಮಹತ್ಯೆ ಮಾಡಿಕೊಂಡ ಸೋಮಯ್ಯನ ಮೊಬೈಲ್ ಫೋನನ್ನು ತನಿಖೆಗೆ ಒಳಪಡಿಸಿದ ವೇಳೆ ವಿನು ಕೊಲೆಯಾಗಿರುವ ವಿಷಯ ಬೆಳಕಿಗೆ ಬರುತ್ತದೆ.

*ಆರೋಪಿಗಳ ವಿವರ*

1) ಸತೀಶ ಕೆ.ಜಿ @ ಬೋಪಯ್ಯ, ತಂದೆ ಗಣೇಶ ಕೆ.ಎ. ಪ್ರಾಯ: 19 ವರ್ಷ, ಕೂಲಿ ಕೆಲಸ, ವಾಸ ಜೀವಜಲ ಎಸ್ಟೇಟ್ ಲೈನು ಮನೆ. ಬಬ್ರಾಡ್, ತೋರ, ಕೆದಮಳ್ಳೂರು ಗ್ರಾಮ, ವಿರಾಜಪೇಟೆ ತಾಲ್ಲೋಕು.

2) ಹೆಚ್.ಬಿ ರವಿ, ತಂದೆ ಪೌತಿ ಬೆಳ್ಯಪ್ಪ, ಪ್ರಾಯ: 61 ವರ್ಷ, ಕೂಲಿ ಕೆಲಸ, ವಾಸ ಕೊರ್ತಿಕ್ಕಾಡು, ತೋರ, ಕೆದಮಳ್ಳೂರು ಗ್ರಾಮ, ವಿರಾಜಪೇಟೆ ತಾಲ್ಲೋಕು.

3) ಕೆ.ಎಂ.ಪೊನ್ನಪ್ಪ@ಅಪ್ಪಿ, ತಂದೆ ಪೌತಿ ಮೇದು, ಪ್ರಾಯ: 43 ವರ್ಷ, ಕೂಲಿ ಕೆಲಸ, ವಾಸ ಕುಪ್ಪಮೊಟ್ಟೆ ತೋರ, ಕೆದಮಳ್ಳೂರು ಗ್ರಾಮ, ವಿರಾಜಪೇಟೆ ತಾಲ್ಲೋಕು.

*ತನಿಖಾ ತಂಡದ ವಿವರ*

1) ಶ್ರೀ ಸೂರಜ್ ಪ್ರಭಾರ ಡಿವೈಎಸ್ಪಿ, ವಿರಾಜಪೇಟೆ ಉಪ ವಿಭಾಗ,

2) ಶ್ರೀ ಅನೂಪ್ ಮಾದಪ್ಪ ಪಿ. ವೃತ್ತ ನಿರೀಕ್ಷಕರು, ವಿರಾಜಪೇಟೆ ವೃತ್ತ.

3) ಶ್ರೀ ಪ್ರಮೋದ್ ಕುಮಾರ್ ಪಿ.ಎಸ್.ಐ ವಿರಾಜಪೇಟೆ ನಗರ ಠಾಣೆ.

4) ಸಿಬ್ಬಂದಿಗಳಾದ ಎ.ಎಸ್.ಐ ಮೋಹನ, ಎ.ಎಸ್.ಐ ರವಿ, ನವೀನ್ ಕುಮಾರ್, ಅಬ್ದುಲ್ ಮಜೀದ್, ಕೆ.ಎ.ಅನೀಫ್, ಎಂ.ಎಸ್.ಬೋಪಣ್ಣ, ಮಹೇಶ್.ಎಸ್, ಪರಮೇಶ್, ತೇಜಸ್ ಕುಮಾರ್ ರವರುಗಳು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು