5:00 PM Tuesday3 - November 2026
ಬ್ರೇಕಿಂಗ್ ನ್ಯೂಸ್
Mysore | ಹುಣಸೂರು ಬಳಿ ಬೈಕ್‌ಗೆ ಒಕ್ಕಣೆ ಯಂತ್ರ ಡಿಕ್ಕಿ: ಸವಾರರಿಬ್ಬರ ದುರ್ಮರಣ ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000… Kodagu | ಚಲಿಸುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಹೊಗೆ: ಪ್ರಯಾಣಿಕರಲ್ಲಿ ಆತಂಕ ಅಂತಾರಾಷ್ಟ್ರೀಯ ಸಾಧಕ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಚರಿತ್ರೆ ‘Village Boy… ಸಿಡಿ ಫ್ಯಾಕ್ಟರಿ ಇರೋದು ಅಲ್ಲೇ: ಪ್ರಜ್ವಲ್ ರೇವಣ್ಣ ಕೇಸ್​ನಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ… ಸರ್ಕಾರಿ ಕಚೇರಿ, ಖಾಸಗಿ ಕಂಪನಿಗಳಲ್ಲಿ ಕನ್ನಡ ಬಾವುಟ ಕಡ್ಡಾಯ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಣೆ ಆಗುಂಬೆ ಬಳಿ ಭೀಕರ ಕಾರು ಅಪಘಾತ: ವೈದ್ಯ ವಿದ್ಯಾರ್ಥಿ ದುರ್ಮರಣ; 4 ಮಂದಿಗೆ… ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ‘ಇಂಡಿಯಾ’ ಮೈತ್ರಿಕೂಟ ಪಟ್ಟು |… ಬಿಜೆಪಿ ಮರುಸೇರ್ಪಡೆಗೆ ಯತ್ನಾಳ್‌ ಕಠಿಣ ಷರತ್ತು: ವಿಜಯೇಂದ್ರ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ… ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ: ಎಸ್‌ಐಟಿ ನೂತನ ಮುಖ್ಯಸ್ಥರಾಗಿ ಚೇತನ್…

ಇತ್ತೀಚಿನ ಸುದ್ದಿ

Madikeri | ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನ: ನ. 9ರಂದು ಕೊಡಗಿನ ಪುತ್ತರಿ ಹಬ್ಬದ ಮುಹೂರ್ತ ನಿಗದಿ

03/11/2026, 16:57

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಐತಿಹಾಸಿಕ ಹಾಗೂ ಪ್ರಸಿದ್ಧ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಕೊಡಗಿನ ಪ್ರಮುಖ ಹಬ್ಬವಾಗಿರುವ ಪುತ್ತರಿ ಹಬ್ಬದ ದಿನ, ಶುಭ ಮುಹೂರ್ತ ನಿಗದಿಪಡಿಸುವ ಕಾರ್ಯಕ್ರಮ ಮತ್ತು ‘ದೇಶಕಟ್ಟು’ ಆಚರಣೆಯು ಇದೇ ನವೆಂಬರ್ 9ರ ಸೋಮವಾರದಂದು ನಡೆಯಲಿದೆ ಎಂದು ದೇವಸ್ಥಾನದ ದೇವತಕ್ಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.
ಪ್ರಾಚೀನ ಸಂಪ್ರದಾಯದಂತೆ ನವೆಂಬರ್ 9ರ ಸೋಮವಾರ ಬೆಳಿಗ್ಗೆ 10:30ಕ್ಕೆ ದೇವಸ್ಥಾನದ ಪರಂಪರಾಗತ “ಪತ್ತೆಪರೆ”ಯಲ್ಲಿ ವಿಶೇಷ ಸಭೆ ನಡೆಯಲಿದೆ. ದೇವತಕ್ಕರು, ತಕ್ಕಮುಖ್ಯಸ್ಥರು, ನಾಡುತಕ್ಕರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ದೇವಸ್ಥಾನದ ಜ್ಯೋತಿಷ್ಯರಾದ ಅಮ್ಮಂಗೇರಿ ಕಣಿಯರು ಪುತ್ತರಿ ಹಬ್ಬದ ದಿನಾಂಕ ಹಾಗೂ ಕದಿರು ತೆಗೆಯುವ ಶುಭ ಘಳಿಗೆಯನ್ನು ನಿಗದಿಗೊಳಿಸಲಿದ್ದಾರೆ.

*ಆದಿಸ್ಥಾನ ಮಲ್ಮದಲ್ಲಿ ‘ದೇಶಕಟ್ಟು’ ಜಾರಿ :*
ಅಂದೇ ಮಧ್ಯಾಹ್ನದ ನಿತ್ಯ ಪೂಜೆಯ ನಂತರ ಅಪರಾಹ್ನ ಆದಿಸ್ಥಾನ ಮಲ್ಮದಲ್ಲಿ ಸಾಂಪ್ರದಾಯಿಕ “ದೇಶಕಟ್ಟು” ಜಾರಿಯಾಗಲಿದೆ. ಅಮಾವಾಸ್ಯೆಯಂದು “ವಿಶಾಖ” ನಕ್ಷತ್ರದಲ್ಲಿ ಆರಂಭವಾಗುವ ಈ ದೇಶಕಟ್ಟು, ನವೆಂಬರ್ 24ರ ಮಂಗಳವಾರ ಮುಸ್ಸಂಜೆ(ಬಿರ್ಚ್ಯಾರ್ ಕಲ್ಲಾಡ್ಚ ನಮ್ಮೆ) ಸಂಪನ್ನವಾಗುವವರೆಗೆ ಜಾರಿಯಲ್ಲಿರುತ್ತದೆ.
ನವೆಂಬರ್ 24ರಂದು ಮಲ್ಮ ಬೆಟ್ಟದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪಾಡಿ, ನೆಲಜಿ, ಹಾಗೂ ಪೇರೂರು ಗ್ರಾಮಗಳ ವಿವಿಧ ತಕ್ಕಮುಖ್ಯಸ್ಥರ ಆಗಮಿಸು ‘ಎತ್ತುಪೊರಾಟ’ದೊಂದಿಗೆ ಭಕ್ತರು ಆದಿಸ್ಥಾನ ಮಲ್ಮದಲ್ಲಿ ಒಟ್ಟುಗೂಡಲಿದ್ದಾರೆ.
ಮಲ್ಮದ ದೇವನೆಲೆಯ ಪ್ರದಕ್ಷಿಣೆ, ಸಣ್ಣಕ್ಕಿ ನೈವೇದ್ಯ ಅರ್ಪಣೆ ಹಾಗೂ ಮೂರೂ ದೇವಳಕ್ಕೆ ಸಂಬಂಧಿಸಿದ ಜೋಡೆತ್ತುಗಳೊಂದಿಗೆ ತಂದ ಧಾನ್ಯದ ರಾಶಿಯನ್ನು (“ಪೋರ್”) ಒಟ್ಟಿಗೆ ಸುರಿದು, ಸಂಜೆ ವೇಳೆಗೆ ದೇವತಕ್ಕರು ಅದನ್ನು ಇಬ್ಭಾಗ ಮಾಡುವ “ಪೋರ್ ಮುರಿಪ” ಧಾರ್ಮಿಕ ವಿಧಿಯೊಂದಿಗೆ ‘ದೇಶಕಟ್ಟು’ ಮುಕ್ತಾಯಗೊಳ್ಳಲಿದೆ.

*ದೇಶಕಟ್ಟಿನ ಕಟ್ಟುಪಾಡುಗಳು ಮತ್ತು ವೈಶಿಷ್ಟ್ಯತೆ:*
ಕೊಡವ ಸಂಪ್ರದಾಯದಂತೆ ದೇಶಕಟ್ಟು ಜಾರಿಯಲ್ಲಿರುವ ಅವಧಿಯಲ್ಲಿ ದೇವತಕ್ಕರು ವಿಧಿಸುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಈ ಸಮಯದಲ್ಲಿ ಮದುವೆ, ನಿಶ್ಚಿತಾರ್ಥ, ನಾಮಕರಣದಂತಹ ಯಾವುದೇ ಆಡಂಬರದ ಶುಭ ಸಮಾರಂಭಗಳನ್ನು ನಡೆಸುವಂತಿಲ್ಲ. ಪ್ರಾಣಿಹಿಂಸೆ ಹಾಗೂ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಅಮಾವಾಸ್ಯೆಯಿಂದ ಆರಂಭವಾಗಿ ಚಂದ್ರನ ಪಥಕ್ಕೆ ಅನುಗುಣವಾಗಿ ವೃದ್ಧಿಯಾಗುತ್ತಾ, ಹುಣ್ಣಿಮೆ ಅಥವಾ ಹುಣ್ಣಿಮೆಯ ಮುನ್ನಾದಿನ ಮುಕ್ತಾಯಗೊಳ್ಳುವ ಈ ಕಟ್ಟುಪಾಡುಗಳು ನಾಡಿನ ವೃದ್ಧಿ ಮತ್ತು ಸಮೃದ್ಧಿಯ ಸಂಕೇತವಾಗಿವೆ. ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಸಂಭ್ರಮದ ಪುತ್ತರಿಗೆ ಇದು ನಾಂದಿ ಹಾಡುತ್ತದೆ.
ಕೊಡಗಿನ ಸಮಸ್ತ ಭಕ್ತಾದಿಗಳು ಈ ಪ್ರಾಚೀನ ದೇಶಕಟ್ಟಿನ ನಿಯಮಗಳಿಗೆ ಮನ್ನಣೆ ನೀಡಿ ಸಹಕರಿಸಬೇಕಾಗಿ ಪಾಡಿ ದೇವನೆಲೆಯ ದೇವತಕ್ಕರಾದ ಪರದಂಡ ಕುಟುಂಬಸ್ಥರು ವಿನಂತಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು