ಇತ್ತೀಚಿನ ಸುದ್ದಿ
ಕುಟುಂಬ ಸಮೇತರಾಗಿ ಹಾಸನಾಂಬೆ ದೇವಿಯ ದರ್ಶನ ಪಡೆದ ಸಚಿವ ಕೃಷ್ಣ ಬೈರೇಗೌಡ: ₹1,000 ವಿಶೇಷ ಪ್ರವೇಶ ಟಿಕೆಟ್ ಮೂಲಕ ದೇವಿಯ ದರ್ಶನ
03/11/2026, 15:11
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕುಟುಂಬ ಸಮೇತರಾಗಿ ಹಾಸನದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಸಚಿವರು ₹1,000 ವಿಶೇಷ ಪ್ರವೇಶ ಟಿಕೆಟ್ ಪಡೆದು ದೇವಾಲಯಕ್ಕೆ ತೆರಳಿ ಹಾಸನಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ರಾಜ್ಯದ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಮಳೆ-ಬೆಳೆ ಕರುಣಿಸುವಂತೆ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಅವರ ಪತ್ನಿ ಮೀನಾಕ್ಷಿ, ತಾಯಿ ಸಾವಿತ್ರಮ್ಮ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದು, ದೇವಿಯ ದರ್ಶನ ಪಡೆದರು.













