ಇತ್ತೀಚಿನ ಸುದ್ದಿ
ಸಿಡಿ ಫ್ಯಾಕ್ಟರಿ ಇರೋದು ಅಲ್ಲೇ: ಪ್ರಜ್ವಲ್ ರೇವಣ್ಣ ಕೇಸ್ನಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ
02/11/2026, 19:12
ಬೆಂಗಳೂರು(reporterkarnataka.com):ಸ್ಟಿಂಗ್ ಆಪರೇಷನ್ ವಿರುದ್ಧ ಮತ್ತೆ ಗುಡುಗಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವ್ರು, ಸ್ಟಿಂಗ್ ಷಡ್ಯಂತ್ರದ ಹಿಂದೆ ಕುಮಾರಸ್ವಾಮಿ ಇಲ್ಲ. ಮೊದಲು ವಿಡಿಯೋ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಗುಡುಗಿದ್ರು.
ಇದೇ ವೇಳೆ ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆಯೂ ಮಾತಾಡಿದ ಕುಮಾರಸ್ವಾಮಿ ಅವ್ರು, ಪ್ರಜ್ವಲ್ಗೆ ಒಂದು ಕೇಸ್ನಲ್ಲಿ ಜೀವಾವದಿ ಶಿಕ್ಷೆ ಕೊಡಿಸಿಬಿಟ್ಟಿದ್ದಾರೆ.



ಇನ್ನೊಂದು ಕೇಸ್ ನಡೀತಿದೆ. ಹಾಗೇ ಸಿಡಿ ಫ್ಯಾಕ್ಟರಿ ಇರೋದು ಇವರ ಮನೆಯಲ್ಲೇ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
*ಕುಮಾರಸ್ವಾಮಿ ತಿರುಗೇಟು*
ನನ್ನ ಅಣ್ಣನ ಮಗನಿಗೆ ಯಾವ ರೀತಿ ಜೀವಾವಧಿ ಶಿಕ್ಷೆಗೆ ಕೊಡಿಸಿದ್ದೀರಾ, ನನ್ನ ಮೇಲೆ 200 ಕೋಟಿ ಆಪಾದನೆ ಬಂದಿತ್ತು. ಆದ್ರೆ ನಾವು ಈ ಕ್ಷಣದವರೆಗೂ ಗೋಗರೆದು ರಕ್ಷಣೆ ಕೇಳಿಲ್ಲ. ಮೋದಿ, ಶಾ ಯಾರ ಬಳಿಯೂ ಹೋಗಿ ಕೇಳಿ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಎದುರುಸಿಬೇಕು ಅಂತಿದ್ರೆ ನೇರವಾಗಿ ಎದುರಿಸುತ್ತೇನೆ ಎಂದುಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
‘*ನಾನೇ ಪೆನ್ಡ್ರೈವ್ ಕೊಟ್ಟೆ ಅಂತಾನೆ’*
ಅವನ್ಯಾರೋ ಇನ್ನೊಬ್ಬ ಮಂತ್ರಿ ಹೇಳ್ತಾನೆ. ರೇವಣ್ಣನ ಮಗನ ಜೈಲಿಗೆ ಕಳುಹಿಸಲು ನಾನೇ ಪೆನ್ಡ್ರೈವ್ ಕೊಟ್ಟೇ ಎಂದು ಮಂಡ್ಯದವನು ಹೇಳ್ತಾನೆ ಎಂದು ಹೆಸರೇಳದೇ ಸಚಿವ ಚಲುವರಾಯಸ್ವಾಮಿ ವಿರುದ್ಧ ಕುಮಾರಸ್ವಾಮಿ ಗುಡುಗಿದ್ರು. ಭಾವನಾತ್ಮಕ ಸಂಬಂಧ ಇದ್ಯೇನ್ರಿ? ಇವರಿಗೆಲ್ಲಾ ಮರಿಯಾದೆ ಕೊಟ್ಟು ಮಾತಾಡಬೇಕಾ? ಎಂದು ಕಿಡಿಕಾರಿದ್ರು.
*ಇದೇ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರ್ಕೊಂಡು ಮಾಡಿದ್ರು*
ಪ್ರಜ್ವಲ್ ರೇವಣ್ಣ ಮೇಲೆ ಕೇಸ್ ಹಾಕಿದ್ರು. ಈ ಪ್ರಕರಣ ಸಂಬಂಧ ಆಡಿಯೋ ಇತ್ತಲ್ವಾ, ಒಬ್ಬರನ್ನ ಕರೆಸಿ ಹೇಳಿಕೆ ಕೊಡಿಸಲು ಸುಸ್ತಾದೆ ಅನ್ನೋದು. ಅದರ ವಿರುದ್ಧ ಪೊಲೀಸರು ಏನ್ ಕ್ರಮ ತೆಗೆದುಕೊಂಡ್ರು ಹೇಳಿ. ನಾನು ಬಿಜೆಪಿ ಜೊತೆ ಹೋದೆ ಅಂತ ಇದೇ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಸೇರ್ಕೊಂಡು ಮಾಡಿದ್ರಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ರು.
*ಡಿಕೆ ಶಿವಕುಮಾರ್ ಮನೆಗೆ ಹೋಗಿದ್ದ ಕಾರ್ತಿಕ್*
ಕಾರ್ತಿಕ್ ಅಂತ ಪ್ರಜ್ವಲ್ ರೇವಣ್ಣ ಡ್ರೈವರ್ ಇದ್ರಲ್ಲ. ಅವರೊಂದಿಗಿನ ಡಿಕೆಶಿಗೆ ಲಿಂಕ್ ಇದೆ. ಇದಕ್ಕೇನು ಹೇಳ್ತೀರಾ ಸಿಎಂ ಡಿಕೆ ಶಿವಕುಮಾರ್? CDRನಲ್ಲಿ ಡಿಕೆ ಶಿವಕುಮಾರ್ ಮನೆಗೆ ಕಾರ್ತಿಕ್ ಹೋಗಿರೋದು ಇದೆ. ಅಗಸ್ಟ್ 5, 2023 ಮತ್ತು 6 ಅಗಸ್ಟ್ 2026 ರಂದು ಕಾರ್ತಿಕ್ ಸಿಎಂ ಡಿಕೆ ಶಿವಕುಮಾರ್ ಮನೆಗೆ ಹೋಗಿದ್ದ. ಈ ಕೇಸ್ನಲ್ಲಿ ನಿಮ್ಮನ್ನ ತನಿಖೆ ಮಾಡಿದ್ದಾರಾ ಸಿಎಂ ಡಿಕೆ ಶಿವಕುಮಾರ್, ಇದನ್ನೆಲ್ಲಾ ಕೋರ್ಟಿಗೂ ಕೊಟ್ಟಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ರು. ಸಿಡಿ ಪ್ಯಾಕ್ಟರಿ ಇರೋದು ಅಲ್ಲೇ
ಸಿಡಿ ಪ್ಯಾಕ್ಟರಿ ಇರೋದು ಅಲ್ಲೇ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ನನ್ನ ಮನೆಗೆ ನೂರಾರು ಜನ ಬರ್ತಾರೆ, ಯಾರೂ ತಪ್ಪು ಮಾಡಿದ್ರು ತನಿಖೆ ಮಾಡಿ. ಇದನ್ನೆಲ್ಲಾ ಬಿಟ್ಟು ಟ್ರೇಲರ್, ಪಿಚ್ಚರ್ ಎಂದ್ರೆ ಹೇಗೆ? ಪ್ರಜ್ವಲ್ ಡ್ರೈವರ್ ನಿಮ್ಮ ಮನೆಗೆ ಬಂದಿದ್ದು ಸಿಡಿಆರ್ ಇದ್ಯಲ್ಲ ಇದಕ್ಕೆ ಉತ್ತರ ಕೊಡಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
*ಮಫ್ತಿಯಲ್ಲಿ ಪೊಲೀಸರು ನನ್ನ ಮನೆಗೆ ಬರ್ತಾರೆ*
ಮಫ್ತಿಯಲ್ಲಿ ಪೊಲೀಸರು ನನ್ನ ಮನೆಗೆ ಬರ್ತಾರೆ, ನಿಮಗೆ ಮಾಹಿತಿ ಕೊಡಬೇಕಲ್ಲ. ಕಿಡ್ನಿ ಮಾರಾಟ ಮಾಡಿ 2 ಲಕ್ಷ ಹಣ ಕೊಡಿಸಿ ಎಂದು ಗದಗದ ಹೆಣ್ಮಗಳು ಬಂದಿದ್ರು. ಅವರಿಗೆ ನಾನು ಹಣ ಕೊಟ್ಟೇ ನಾನು ಬಂದಿರೋದು ಎಂದ್ರು.












