ಇತ್ತೀಚಿನ ಸುದ್ದಿ
ಅಂಬಾರಿ ಹೊರೋದಕ್ಕೆ ಪ್ರಶಾಂತ ಆನೆ ಆಯ್ಕೆ: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಘೋಷಣೆ
14/10/2026, 21:43
ಮೈಸೂರು(reporterkarnataka.com): ಮೈಸೂರು ದಸರಾ ಬಂಬೂ ಸವಾರಿಯಲ್ಲಿ ಅಂಬಾರಿ ಹೊರೋದಕ್ಕೆ ಪ್ರಶಾಂತ ಆನೆ ಆಯ್ಕೆಯಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಘೋಷಣೆ ಮಾಡಿದ್ದಾರೆ.
*ಅಂಬಾರಿ ಆನೆಯಾಗಿ ಪ್ರಶಾಂತ ಫೈನಲ್..!*
ಆನೆಗಳಿಗೆ ಎಲ್ಲಾ ಹಂತದ ತಾಲೀಮು ಮುಗಿದಿದೆ.
ಅಂಬಾರಿ ಆನೆ ಆಯ್ಕೆ ವಿಚಾರ ಸೂಕ್ಷ್ಮ
ಆನೆಗಳು ತಾಲೀಮಿನಲ್ಲಿ ನಡೆದುಕೊಂಡ ರೀತಿಯನ್ನ ಗಮನಿಸಿ ಅಂಬಾರಿ ಆನೆಯಾಗಿ ಆಯ್ಕೆ ಮಾಡುತ್ತೇವೆ.
ಈ ಬಾರಿ ಪ್ರಶಾಂತ ಆನೆಯನ್ನ ಅಂಬಾರಿ ಹೊರೋದಕ್ಕೆ ಆಯ್ಕೆ ಮಾಡಿದ್ದೀವಿ.
ಪ್ರಶಾಂತ ಆನೆ ಎಲ್ಲಾ ರೀತಿಯಲ್ಲೂ ಅಂಬಾರಿ ಹೊರೋದಕ್ಕೆ ಸೂಕ್ತವಾಗಿದೆ.
ಧನಂಜಯ ಆನೆಯನ್ನ ಮೀಸಲು ಅಂಬಾರಿ ಆನೆಯಾಗಿ ಇಟ್ಟಿದ್ದೀವಿ.
ಅಭಿಮನ್ಯು ನಿಶಾನೆ, ಗೋಪಿ ನೌಪತ್ ಆನೆ.
ಅಂಬಾರಿ ಆನೆ ಜೊತೆ ರೂಪ ಚೈತ್ರ, ಕಾವೇರಿ ಆನೆ ಬರುತ್ತವೆ.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ.












