8:29 PM Tuesday6 - October 2026
ಬ್ರೇಕಿಂಗ್ ನ್ಯೂಸ್
ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

*ಗ್ಲ್ಯಾನಿಶ್ ಮಾರ್ಟಿಸ್‌ಗೆ ಲಿಯೋ ರೊಡ್ರಿಗಸ್ ಕುಟುಂಬ ದತ್ತಿ ಕಿಟಾಳ್ ಯುವ ಪ್ರಶಸ್ತಿ ಪ್ರದಾನ*

06/10/2026, 20:28

ಮಂಗಳೂರು(reporterkarnataka.com): ಕೊಂಕಣಿ ಸಾಹಿತ್ಯದಲ್ಲಿ ಯುವ ಸಾಹಿತಿಗಳ ಪ್ರತಿಭೆಯನ್ನು ಗುರುತಿಸಿ, ಗೌರವಿಸುವ ಕಳೆದ 15 ವರ್ಷಗಳ ಪರಂಪರೆಯ ಅಂಗವಾಗಿ ಅಲಂಗಾರಿನ ಯುವ ಕವಿ ಮತ್ತು ಕಥೆಗಾರ ಗ್ಲ್ಯಾನಿಶ್ ಮಾರ್ಟಿಸ್ ಅವರಿಗೆ 2026 ನೇ ಸಾಲಿನ ಪ್ರತಿಷ್ಠಿತ ಕಿಟಾಳ್ ಯುವ ಪುರಸ್ಕಾರವನ್ನು ಶನಿವಾರ ಸಂಜೆ ನಗರದ ಎಂಸಿಸಿ ಬ್ಯಾಂಕಿನ ಫಿಎಫ್‌ಎಕ್ಸ್ ಸಲ್ಡಾನ್ಹಾ ಸಭಾಂಗಣದಲ್ಲಿ ಅಬುದಾಬಿಯ ಖ್ಯಾತ ಉದ್ಯಮಿ ಮತ್ತು ಕೊಂಕಣಿ ಸಮರ್ಥಕ ಶ್ರೀ ಲಿಯೋ ರೊಡ್ರಿಗಸ್ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ದೇರೆಬೈಲ್ ಧರ್ಮಕೇಂದ್ರದ ಪ್ರಧಾನ ಗುರುಗಳಾದ ಫಾ| ಜೋಸೆಫ್ ಮಾರ್ಟಿಸ್, ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಮತ್ತು ಕಿಟಾಳ್ ಸಂಪಾದಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿಮರ್ಶಕ ಎಚ್. ಎಮ್. ಪೆರ್ನಾಲ್ ಉಪಸ್ಥಿತರಿದ್ದರು. ಕಿಟಾಳ್ ಸಹ ಸಂಪಾದಕ ಕವಿ ವಿಲ್ಸನ್ ಕಟೀಲ್ ಪುರಸ್ಕೃತರನ್ನು ಪರಿಚಯಿಸಿ, ಸನ್ಮಾನ ಪತ್ರ ವಾಚಿಸಿದರು.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಲಿಯೊ ರೊಡ್ರಿಗಸ್ “ಯುವಕರಲ್ಲಿ ಸಮುದಾಯ ಮತ್ತು ಸಾಹಿತ್ಯದತ್ತ ಜವಾಬ್ದಾರಿಯುತ ಮನೋಭಾವ ಬೆಳೆಸುವುದೇ ಪ್ರಶಸ್ತಿಯ ಉದ್ದೇಶವಾಗಿದ್ದು, ಇತ್ತೀಚಿನ ದಿನಗಳಲ್ಲಿ ಕೊಂಕಣಿ ಸಾಹಿತ್ಯದಲ್ಲಿ ಕೃಷಿ ಮಾಡುತ್ತಿರುವ ಯುವಜನರ ಸಂಖ್ಯೆ ಕ್ಷೀಣಿಸುವುದು ಗಮನಕ್ಕೆ ಬರುತ್ತಿದೆ. ಕೊಂಕಣಿ ಭಾಷೆಯಲ್ಲಿ ಉತ್ತಮ ಸಾಹಿತ್ಯ ಲಭ್ಯವಿದೆ ಮತ್ತು ಸಾಕಷ್ಟು ಹಿರಿಯ ಅನುಭವಿ ಸಾಹಿತಿಗಳು ನಮ್ಮ ನಡುವೆ ಇದ್ದಾರೆ. ಯುವಜನರನ್ನು ಸಾಹಿತ್ಯದ ಕಡೆಗೆ ಆಕರ್ಷಿಸಲು ಹಿರಿಯ ಸಾಹಿತಿಗಳು ಸಾಹಿತ್ಯ ಅಥವಾ ಸಾಂಸ್ಕೃತಿಕ ಕಾರ್ಯಾಗಾರ / ಶಿಬಿರ ಹಮ್ಮಿಕೊಳ್ಳುವುದಾದರೆ ನನ್ನ ಸಂಪೂರ್ಣ ಬೆಂಬಲ ಇರಲಿದೆ” ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಕೊಂಕಣಿ ಭಾಷೆ ಮತ್ತು ಕಲೆಯ ಸಂವರ್ಧನೆಗಾಗಿ ಶ್ರಮಿಸಿದ ಹಿರಿಯ ಸಾಧಕರಾದ ಡಾ| ಎವ್ಜಿನ್ ಡಿ ಸೋಜಾ, ಮೂಡುಬೆಳ್ಳೆ ಮತ್ತು ಎಡ್ಡಿ ಸಿಕ್ವೇರಾ ಇವರನ್ನು, ಅವರ 80ನೇ ಮತ್ತು 75ನೇ ಜನ್ಮ ದಿನದ ಅಂಗವಾಗಿ ಅಭಿನಂದಿಸಿ, ಗೌರವಿಸಲಾಯಿತು.
ತಮ್ಮ ಭಾಷಣದಲ್ಲಿ ಅರಿಸ್ಟಾಟಲ್‌ನ “ಆಶ್ಚರ್ಯವೇ ಜ್ಞಾನದ ಆರಂಭ” ಮಾತನ್ನು ಉಲ್ಲೇಖಿಸಿ ಮಾತನಾಡಿದ ಮುಖ್ಯ ಅತಿಥಿ ಫಾ| ಜೋಸೆಫ್ ಮಾರ್ಟಿಸ್ ” ಪ್ರತಿಯೊಬ್ಬ ಸಾಹಿತಿ ಈ ಬೆರಗನ್ನು ಅನುಭವಿಸುತ್ತಾನೆ, ಅದು ಅವನ ಬರವಣಿಗೆಗೆ ಸ್ಪೂರ್ತಿಯಾಗುತ್ತದೆ. ಬರಹಗಾರ ವಾಸ್ತವಿಕತೆಗೆ ಕನ್ನಡಿಯಾಗಿ ಆಂತರಿಕ ಚಿಂತನೆಗಳನ್ನು ಬರಹದ ಮೂಲಕ ಪ್ರಕಟಿಸುತ್ತಾನೆ. ಸಾಹಿತಿಗೆ ಸಾವಿಲ್ಲ, ತನ್ನ ಸಾಹಿತ್ಯದ ಮೂಲಕ ಆತ ಅಮರನಾಗುತ್ತಾನೆ” ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿದ ಗ್ಲಾನಿಶ್ ಮಾರ್ಟಿಸ್ ತಮ್ಮ ತಾಯಿ, ತಂದೆ ಮತ್ತು ತಾತನ ಪ್ರೇರಣೆಯನ್ನು ಉಲ್ಲೇಖಿಸಿ, ತಮ್ಮ ಸಾಹಿತ್ಯ ಪ್ರವಾಸದಲ್ಲಿ ಕುಟುಂಬದ ಪಾತ್ರವನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು. ಹಿರಿಯ ಕೊಂಕಣಿ ಸಾಹಿತಿಗಳಿಂದ ಪಡೆದ ಮಾರ್ಗದರ್ಶನಕ್ಕಾಗಿ ಧನ್ಯವಾದಗಳನ್ನು ಸಲ್ಲಿಸಿದರು. ಇಂದಿನ ಯುವಕರಲ್ಲಿ ಬರವಣಿಗೆಯ ಆಸಕ್ತಿ ಹೆಚ್ಚಿಸಲು, ಓದುವ ಅಭ್ಯಾಸ ಬೆಳೆಸುವುದು ಅತ್ಯಂತ ಅಗತ್ಯ ಎಂದು ಅವರು ತಮ್ಮ ಅನುಭವದಿಂದ ಹೇಳಿದರು. ಈ ಪ್ರಶಸ್ತಿ ತಮ್ಮ ಮೇಲೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಸಮಿತಿ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್, ಆಯ್ಕೆ ಸಮಿತಿ ಮುಖ್ಯಸ್ಥ ಕವಿ ಟೈಟಸ್ ನೊರೊನ್ಹಾ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ರಮೇಶ್ ನಾಯಕ್ ಮೈರಾ, ಎಂಡಿಎಸ್ ಚ್ಯಾರಿಟೀಸ್‌‌ನ ಪ್ರೊ| ಲೈನಲ್ ಅರಾನ್ಹಾ ಮತ್ತು ಓಸ್ವಲ್ಡ್ ರೊಡ್ರಿಗಸ್, ಕವಿ ಕಿಶೂ ಬಾರ್ಕೂರು, ಚಿತ್ರ – ನಿರ್ದೇಶಕ ಸ್ಟ್ಯಾನಿ ಬೇಳಾ, ಕೆನರಾ ಸಂಪರ್ಕ ಕೇಂದ್ರದ ಫಾ| ಅನಿಲ್ ಐವನ್ ಫೆರ್ನಾಂಡಿಸ್, ಗ್ಲ್ಯಾನಿಶ್ ಮಾರ್ಟಿಸ್ ಕುಟುಂಬಸ್ಥರು, ಗ್ಲ್ಯಾನಿಶ್ ಅವರ ಪಿಎಚ್‌ಡಿ ಗೈಡ್ ಡಾ| ಸಂತೋಷ್ ಎಲ್. ಗಾಂವ್ಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು