ಇತ್ತೀಚಿನ ಸುದ್ದಿ
Kodagu | ಕುಶಾಲನಗರದಲ್ಲಿ ಮಾದಕವಸ್ತು ಎಂಡಿಎಂಎ ಮಾರಾಟ: ಓರ್ವನ ಬಂಧನ
10/09/2026, 20:41
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

ಹಾರಂಗಿ ಮಾರ್ಗದ ರಸ್ತೆಯಲ್ಲಿ ನಿಷೇಧಿತ ಮಾದಕವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಟೌನ್ ಪೊಲೀಸರು ದಾಳಿ ನಡೆಸಿ ಸೋಮವಾರಪೇಟೆ ತಾಲ್ಲೂಕು ಮಾದ ಪುರದ ಪಾಶಿಕ್, 27 ವರ್ಷ ಎಂಬಾತನನ್ನು ದಿನಾಂಕ 06-09-2026 ರಂದು ವಶಕ್ಕೆ ಪಡೆದಿದ್ದಾರೆ.
ಆರೋಪಿಯಿಂದ 14 ಗ್ರಾಂ MDMA, ನಗದು ಹಾಗೂ ಒಂದು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಕುಶಾಲನಗರ ಟೌನ್ ಠಾಣೆಯಲ್ಲಿ ಮೋ.ಸಂ. 125/2026, ಕಲಂ 20, 22(c) NDPS Act ಅಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಯುವಜನರು ಮಾದಕ ವ್ಯಸನದಿಂದ ದೂರವಿರಿ, ಮಾಹಿತಿ ಇದ್ದರೆ 112 ಗೆ ಕರೆ ಮಾಡಿ ಅಥವಾ KSPP QRS App ಮೂಲಕh ಮಾಹಿತಿ ನೀಡುವಂತೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ಮನವಿ ಮಾಡಿದ್ದಾರೆ.












