12:58 PM Wednesday2 - September 2026
ಬ್ರೇಕಿಂಗ್ ನ್ಯೂಸ್
ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ

ಇತ್ತೀಚಿನ ಸುದ್ದಿ

ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ: ಕರಾವಳಿಯನ್ನು ನಡುಗಿಸಿದ್ದ ಕ್ರೂರ ಕೊಲೆಗಾರ

02/09/2026, 12:57

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಕೊಟ್ಟಿಗೆಹಾರ ಹಾಗೂ ಕರಾವಳಿ ಭಾಗದಲ್ಲಿ ಅತ್ಯಂತ ಭೀಕರ ವಾತಾವರಣ ಸೃಷ್ಟಿಸಿ, ಅಸಂಖ್ಯಾತ ಅಮಾಯಕರ ನೆಮ್ಮದಿ ಗೆಡಿಸಿದ್ದ ಸರಣಿ ಹಂತಕ ರಿಪ್ಪರ್ ಚಂದ್ರನ್ ಉರುಫ್ ರಮೇಶ್ ಉರುಫ್ ಸುರೇಂದ್ರನ್‌ನ ಕ್ರೂರ ಇತಿಹಾಸದ ಮಾಹಿತಿ ಇಲ್ಲಿದೆ.

*​ಕರಾವಳಿಯಲ್ಲಿ ಭೀತಿಯ ವಾತಾವರಣ:*
ಎಂಟತ್ತರ ದಶಕದಲ್ಲಿ ಹಲವಾರು ಅಮಾಯಕರನ್ನು ಕೊಂದು, ನರಳಿ ಸಾಯುವಂತೆ ಮಾಡಿದ್ದ ಈತ, ಕತ್ತಲೆಯ ಮರೆಯಲ್ಲಿ ಆಯುಧ ಹಿಡಿದು ಬರುತ್ತಿದ್ದ. ಕಾಸರಗೋಡು, ಕಣ್ಣೂರು, ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಜೆಯಾಗುತ್ತಿದ್ದಂತೆ ಜನರು ಬಾಗಿಲು ಮುಚ್ಚಿಕೊಂಡು ಭಯದಿಂದ ಕಾಲ ಕಳೆಯುವಂತಾಗಿತ್ತು. ಹಲವು ಕಡೆಗಳಲ್ಲಿ ಕತ್ತಲಾದ ಮೇಲೆ ಈ ಹಂತಕ ಪ್ರತ್ಯಕ್ಷನಾಗುತ್ತಾನೆ ಎಂಬ ವದಂತಿಗಳು ಹರಡಿದ್ದವು.
​ಸರಣಿ ಕೊಲೆಗಳ ಕ್ರೂರ ಶೈಲಿ:
1950ರಲ್ಲಿ ಕಾಸರಗೋಡು ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದ ಚಂದ್ರನ್, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ. 14ನೇ ವಯಸ್ಸಿಗೆ ಊರು ಬಿಟ್ಟು ಹಲವು ಊರುಗಳಲ್ಲಿ ಅಲೆಯುತ್ತಾ ತಿರುಗುತ್ತಿದ್ದ. 1977ರಲ್ಲಿ ಕಳ್ಳತನ ಪ್ರಕರಣದಲ್ಲಿ ಕಾಸರಗೋಡಿನಲ್ಲಿ ಮೊದಲ ಬಾರಿಗೆ ಪೊಲೀಸರ ಅಪ್ರೇಕ್ಷೆಗೆ ಒಳಗಾಗಿದ್ದ. ಜೈಲಿನಿಂದ ಹೊರಬಂದ ಮೇಲೆ ಈತನ ಸರಣಿ ಹತ್ಯೆಗಳು ಕಾಸರಗೋಡಿನಿಂದ ಕರ್ನಾಟಕದ ಕಡೆಗೆ ವಿಸ್ತರಿಸಿದವು.
​1988ರ ಸೆಪ್ಟೆಂಬರ್ 10ರಂದು ಸರಣಿ ಹತ್ಯೆಯ ಮೊದಲ ಬಲಿ ಬಿದ್ದಿತ್ತು. ಚಿಕ್ಕಮಗಳೂರಿನ ಮನೆಗಳ ಮೇಲೆ ದಾಳಿ ನಡೆಸಿ, ನಿದ್ರಿಸುತ್ತಿದ್ದವರ ತಲೆಗೆ ಚಾಕು ಅಥವಾ ಕಬ್ಬಿಣದ ಕಡ್ಡಿಯಿಂದ ಹೊಡೆದು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಮನೆಗಳೇ ಈತನ ಪ್ರಮುಖ ಗುರಿಯಾಗಿದ್ದವು.
​1985 ಅಕ್ಟೋಬರ್ 15ರಂದು ಮಂಜೇಶ್ವರದ ಒಂದೇ ಮನೆಯಲ್ಲಿ ಮೂವರ ಕುತ್ತಿಗೆ ಹಿಸುಕಿ, ತಲೆಗೆ ಹೊಡೆದು ಕೊಲೆ ಮಾಡಿ ದರೋಡೆ ನಡೆಸಿದ್ದ. ನಂತರ ಕೇರಳ ಹಾಗೂ ಕರ್ನಾಟಕದ ಹಲವು ಭಾಗಗಳಲ್ಲಿ ತನ್ನ ರಕ್ತಚರಿತ್ರೆಯನ್ನು ಮುಂದುವರಿಸಿದ್ದ.

*​ಪೊಲೀಸರಿಗೆ ಹಿನ್ನಡೆ ಮತ್ತು ತನಿಖೆ:*
ಹಲವು ಹತ್ಯೆಗಳು ನಡೆಯುತ್ತಿದ್ದರೂ ಆರಂಭದಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಗಲಿಲ್ಲ. ಕಾಸರಗೋಡಿನ ತಂಗಾಪರಂಬ್ ಪೊಲೀಸ್ ಠಾಣೆಯಲ್ಲಿ ಸರಣಿ ಹತ್ಯೆಯ ತನಿಖೆ ಆರಂಭಿಸಿ, ಹಲವು ಶಂಕಿತರನ್ನು ಬಂಧಿಸಲಾಯಿತು.
​ತಂಗಾಪರಂಬ್‌ನಲ್ಲಿ ನಡೆದ ಉಪ್ಪಳದ ಕೊಲೆ ಪ್ರಕರಣದಲ್ಲಿ ಸ್ಥಳದಲ್ಲಿ ಸಿಕ್ಕ ಬೆರಳಚ್ಚು ಅತ್ಯಂತ ನಿರ್ಣಾಯಕವಾಯಿತು. ತನಿಖೆ ನಡೆಸಿದಾಗ, ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದ ಸುರೇಂದ್ರನ್ ಎಂಬಾತನ ಬೆರಳಚ್ಚು ಮತ್ತು ಚಂದ್ರನ್ ಬೆರಳಚ್ಚು ಒಂದೇ ಎಂಬುದು ದೃಢಪಟ್ಟಿತು.
​ಕೊಟ್ಟಿಗೆಹಾರದಲ್ಲಿ ನಾಟಕೀಯ ಬಂಧನ:
1986 ಮೇ 27ರಂದು ಮುಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಚಂದ್ರನ್‌ನನ್ನು ಪೊಲೀಸರು ಬಂಧಿಸಿದರು. ಅಲ್ಲಿ ರಮೇಶ್ ಎಂಬ ಹೆಸರಿನಲ್ಲಿ ಧಾರ್ಮಿಕ ವ್ಯಕ್ತಿಯಂತೆ ನಟಿಸುತ್ತಾ, ಮನೆ ನಿರ್ಮಿಸಿಕೊಂಡು ವಾಸವಾಗಿದ್ದ.
​ಅಂದಿನ ಗೃಹ ಸಚಿವರಾಗಿದ್ದ ರಾಚಯ್ಯನವರು ಚಂದ್ರನ್‌ನನ್ನು ಬಂಧಿಸಿದ ಪೊಲೀಸರಿಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದರು.

*​ಮರಣದಂಡನೆ ಶಿಕ್ಷೆ: 1987ರಲ್ಲಿ* ನ್ಯಾಯಾಲಯವು ಚಂದ್ರನ್ ಮಾಡಿದ ಕೃತ್ಯಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. 1991 ಜುಲೈ 6ರಂದು ಈ ಸರಣಿ ಹಂತಕ ರಿಪ್ಪರ್ ಚಂದ್ರನ್ ಅಲಿಯಾಸ್ ರಮೇಶ್ ಅಲಿಯಾಸ್ ಸುರೇಂದ್ರನ್‌ನನ್ನು ಗಲ್ಲಿಗೇರಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು