4:35 PM Tuesday1 - September 2026
ಬ್ರೇಕಿಂಗ್ ನ್ಯೂಸ್
*ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ

ಇತ್ತೀಚಿನ ಸುದ್ದಿ

‘ರಾಕ್ಣೊ’ ವಾರ್ಷಿಕ ಪ್ರಶಸ್ತಿ – 2026 ಪ್ರಕಟ: ಕೊಂಕಣಿ ಸಾಹಿತಿ ಡಾ. ಜೆರಿ ನಿಡ್ಡೋಡಿಗೆ ‘ವರ್ಷದ ಅತ್ಯುತ್ತಮ ಲೇಖಕ ಪ್ರಶಸ್ತಿ’

01/09/2026, 16:35

ಮಂಗಳೂರು(reporterkarnataka.com): ಮಂಗಳೂರು ಮೂಲದ ಕೊಂಕಣಿ-ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ಸಾಹಿತ್ಯ ಪ್ರಶಸ್ತಿ – 2026 ಪ್ರಕಟಿಸಿದೆ.
‘ವರ್ಷದ ಅತ್ಯುತ್ತಮ ಲೇಖಕ ಪ್ರಶಸ್ತಿ’ ಕೊಂಕಣಿ ಸಾಹಿತಿ ಡಾ. ಜೆರಿ ನಿಡ್ಡೋಡಿ, ಅವರಿಗೆ ಸಂದಿದೆಯಾದರೆ, ‘ವರ್ಷದ ಅತ್ಯುತ್ತಮ ಧರ್ಮಕೇಂದ್ರ ಪತ್ರಿಕೆ ಪ್ರಶಸ್ತಿ’ ಮಂಗಳೂರು ಆಂಜೆಲೊರ್ ಧರ್ಮಕೇಂದ್ರದ ‘ಆಂಜೆಲರ‍್ಚೊ ಆಂಜ್’ ಪತ್ರಿಕೆಗೆ ದೊರೆತಿದೆ. ಈ ಪ್ರಶಸ್ತಿಗಳನ್ನು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ಪೂಜ್ಯ ಪೀಟರ್ ಪಾವ್ಲ್ ಸಲ್ಡಾನ್ಹಾ, ಇವರು 2026 ಸಪ್ತೆಂಬರ್ 6, ಆದಿತ್ಯವಾರದಂದು ಬೆಳಿಗ್ಗೆ 9.30 ಗಂಟೆಗೆ ನಗರದ ಬಿಜೈ ಧರ್ಮಕೇಂದ್ರದ ಸಭಾಂಗಣದಲ್ಲಿ ಪ್ರದಾನ ಮಾಡಲಿರುವರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಮ್
ಸ್ಟ್ತಾನ್ಲಿ ಅಲ್ವಾರಿಸ್ ಅವರು ಹಾಜರಿರುವರು. ಬಿಜೈ ಧರ್ಮಕೇಂದ್ರದ ಸಹಯೋಗದೊಂದಿಗೆ ‘ರಾಕ್ಣೊ’ ಪತ್ರಿಕೆಯು ಈ ಕಾರ್ಯಕ್ರಮವನ್ನು ಆಯೋಜಿಸಲಿದೆ.
1934ನೇ ಇಸವಿಯಿಂದ ಮಂಗಳೂರು ಧರ್ಮಕ್ಷೇತ್ರದ ಅಡಿಯಲ್ಲಿ ಪ್ರಕಟವಾಗುತ್ತಿರುವ ‘ರಾಕ್ಣೊ’ ವಾರಪತ್ರಿಕೆಯು, ಅದರ ಸ್ಥಾಪನೆಯಿಂದ ಇಂದಿನವರೆಗೆ ಓದುಗರಿಗೆ ವೈವಿಧ್ಯಮಯ ವಿಷಯಗಳ ಕುರಿತು ಜ್ಞಾನವರ್ಧಕ ಮಾಹಿತಿಯನ್ನು ನೀಡುತ್ತಾ ಬಂದಿದೆ. ಕಳೆದ ಮೂರು ವರ್ಷಗಳಿಂದ ಪ್ರತೀ ವರ್ಷ ಎರಡು ಸಾಹಿತ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಮೂಲಕ ಸಾಹಿತಿಗಳನ್ನು ಹಾಗು ಪತ್ರಿಕೋದ್ಯಮವನ್ನು ಪ್ರೋತ್ಸಾಹಿಸುತ್ತಿದೆ. ವರ್ಷಕ್ಕೊಮ್ಮೆ ಅರ್ಜಿಗಳನ್ನು ಆಹ್ವಾನಿಸಿ, ಸಾಹಿತ್ಯವನ್ನು ಪರಿಶೀಲಿಸಿ, ಅತ್ಯುತ್ತಮ ಸಾಹಿತಿಗಳನ್ನು ಹಾಗೂ ಪತ್ರಿಕೆಗಳಿಗೆ ಪ್ರಶಸ್ತಿಗಳನ್ನು ನೀಡುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ‘ರಾಕ್ಣೊ’ ಮಾಜಿ ಸಂಪಾದಕರಾದ ಫಾ| ವಲೇರಿಯನ್ ಫೆರ್ನಾಂಡಿಸ್ ಅವರಿಂದ ಕೊಂಕಣಿ ಭಾಷಾ ತರಬೇತಿ ಕಾರ್ಯಕ್ರಮ ನಡೆಯಲಿದೆ.
‘ರಾಕ್ಣೊ’ ವಾರಪತ್ರಿಕೆಯ ಸಂಪಾದಕರು ಹಾಗೂ ಪ್ರಕಾಶಕರು ಆಗಿರುವ ಫಾ| ರೂಪೇಶ್ ಅಶೋಕ್ ಮಾಡ್ತಾ, ಅವರು ತಮ್ಮ ಹಾಗೂ ಸಂಪಾದಕೀಯ ಮಂಡಳಿಯ ಮತ್ತು ತೀರ್ಪುಗಾರರ ಸಮಿತಿಯ ಪರವಾಗಿ ಈ ಪ್ರಕಟಣೆಯನ್ನು ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು