8:10 AM Friday16 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಬಾಳೂರು ವಲಯ ಮಟ್ಟದ ಕ್ರೀಡಾಕೂಟ: ವಿದ್ಯಾಭಾರತಿ ಮತ್ತು ಬಗ್ಗಸಗೋಡು ಶಾಲೆಗೆ ಸಮಗ್ರ ಪ್ರಶಸ್ತಿ

31/08/2026, 20:53

ಸಂತೋಷ್ ಅತ್ತಿಗೆರೆ ಕೊಟ್ಟಿಗೆಹಾರ

info.reporterkarnataka@gmail.com

ಬಾಳೂರು ವಲಯ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಕ್ರೀಡಾಕೂಟ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಬಣಕಲ್
ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆ ಆತಿಥ್ಯದಲ್ಲಿ ಬಣಕಲ್ ಪ್ರೌಢಶಾಲೆ ಆವರಣದಲ್ಲಿ ನಡೆಯಿತು. ಇದರಲ್ಲಿ ಬಾಲಕರ ವಿಭಾಗದ ವಯಕ್ತಿಕ ಸಮಗ್ರ ಪ್ರಶಸ್ತಿಯನ್ನು GHPS ಬಗ್ಗಸಗೂಡು ಹಾಗೂ ಶ್ರೀ ವಿದ್ಯಾ ಭಾರತಿ ಪ್ರೌಡಶಾಲೆ.


ಬಾಲಕಿಯರ ವಿಭಾಗದ ವಯಕ್ತಿಕ ಸಮಗ್ರ GHPS ಬಗ್ಗಸಗೂಡು ಹಾಗೂ ಬಣಕಲ್ ಪ್ರೌಢಶಾಲೆ ಬಣಕಲ್ ಶಾಲಾ ಸಮಗ್ರ ಪ್ರಶಸ್ತಿ ಯನ್ನು ಶ್ರೀ ವಿದ್ಯಾ ಭಾರತಿ ವಿದ್ಯಾಸಂಸ್ಥೆ ಬಣಕಲ್ ಹಾಗೂ
GHPS ಬಗ್ಗಸಗೂಡು ಶಾಲೆಗಳು ಹಂಚಿಕೊಂಡವು.
ಕ್ರೀಡಾಕೂಟದ ಉದ್ಘಾಟನೆಯನ್ನು ಕಾಫಿ ಉದ್ಯಮಿ ಮೋಹನ್ ಬಾಳೂರು ನೆರವೇರಿಸಿ ಮಾತನಾಡಿ ಕ್ರೀಡೆ ಪ್ರತಿಯೊಬ್ಬರ ದೇಹವನ್ನು ಸದೃಢವಾಗಿಸುತ್ತದೆ ಆದ್ದರಿಂದ ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ ಎಂದು ತಿಳಿಸಿದರು.
ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮೂಡಿಗೆರೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೀನಾಕ್ಷಿ ಮಕ್ಕಳಲ್ಲಿ ಕ್ರೀಡಾ ಆಸಕ್ತಿಯನ್ನು ಬೆಳೆಸಿ ಪೋಷಿಸಿ ಕ್ರೀಡಾ ಕ್ಷೇತ್ರದಲ್ಲಿ ಅವರನ್ನು ಸಾಧನೆಯತ್ತ ಪ್ರೋತ್ಸಾಹಿಲು ಶಾಲಾ ಕ್ರೀಡಾಕೂಟ ಸಹಕಾರಿಯಾಗಿದೆ ಮತ್ತು ರಾಷ್ಟ್ರೀಯ ಕ್ರೀಡಾ ದಿನದ ಮಹತ್ವವನ್ನು ತಿಳಿಸಿದರು.
ಅಧ್ಯಕ್ಷತೆಯನ್ನು ವಿದ್ಯಾಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ಶಿವರಾಮ ಶೆಟ್ಟಿ ವಹಿಸಿದ್ದರು.
ಕ್ರೀಡಾಕೂಟದ ಕ್ರೀಡಾ ಜ್ಯೋತಿಯನ್ನು ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವ ಶ್ರೀ ವಿದ್ಯಾಭಾರತಿ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿ ಗಳಾದ ಆಶಿಕ್, ಶ್ರೀಜಿತ್, ಸಮರ್ಥ್, ಪ್ರಶಾಂತ್, ಭೂಮಿಕಾ ಇವರು ಕ್ರೀಡಾ ಜ್ಯೋತಿ ಹಿಡಿದು ಕ್ರೀಡಾಂಗಣಕ್ಕೆ ಆಗಮಿಸಿದರು.
ವಿದ್ಯಾರ್ಥಿಗಳು ನಡೆಸಿಕೊಟ್ಟ ಉದ್ಘಾಟನಾ ನೃತ್ಯ ಎಲ್ಲರ ಗಮನ ಸೆಳೆಯಿತು. ಕ್ರೀಡಾಕೂಟದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಜರೀನಾ, ಸಂಸ್ಥೆಯ ಉಪಾಧ್ಯಕ್ಷ ಬಿ.ಇ.ಸುಬ್ರಾಯಗೌಡ, ಕಾರ್ಯದರ್ಶಿ ಡಿ.ಪಿ.ಲಿಂಗಪ್ಪ. ಕೋಶಾಧಿಕಾರಿ ಯು.ಪಿ.ರಾಮಚಂದ್ರ ಹೊಳ್ಳ, ನಿರ್ದೆಶಕರಾದ ಬಿ.ಬಿ.ಮಂಜುನಾಥ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಲವೀನಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜಪ್ಪ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಫೈರೋಜ್ ಮತ್ತು ಸುಧಾಕರ್, ಅರುಣ್ ಲೋಬೋ, ನಾರಾಯಣ ಗೌಡ, ಬೆಟ್ಟಗೆರೆ ಲೋಕೇಶ್,ಗ್ಯಾರೇಜ್ ಸಂಘದ ರವಿ, ಜೆಸಿಐನ ರಂಜಿತ್,ಸೇವಾ ಭಾರತಿ ಸಂಘದ ಸತೀಶ್, ವಿಪತ್ತು ನಿರ್ವಹಣಾ ಘಟಕದ ರವಿ, ಬಣಕಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ದಿವಾಕರ್, ಪೃಥ್ವಿ,ಕಾಲೇಜು ಪ್ರಾಂಶುಪಾಲರಾದ ಸತೀಶ್, ಶಾಲಾ ವಾಹನ ಸಂಘದ ಅಧ್ಯಕ್ಷ ಮಂಜುನಾಥ್,ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು, ಮುಖ್ಯಶಿಕ್ಷಕರಾದ ಮಾಲತಿ ಮತ್ತು ನಾಗರಾಜು, ಉಪಮುಖ್ಯ ಶಿಕ್ಷಕರಾದ ವಸಂತ್ ಹಾರ್ಗೋಡು ಶಿಕ್ಷಕರಾದ ಭಕ್ತೇಶ್,
ವಿಜಯೇಂದ್ರ, ಪ್ರತಾಪ್,ಲಿಂಗರಾಜು,ಲೋಕೇಶ್, ಅಶ್ವತ್,
ವಿಜೇಂದ್ರ, ಲೀಲಾಮಣಿ, ಶ್ವೇತಾ, ದೈಹಿಕ ಶಿಕ್ಷಣ ಶಿಕ್ಷಕ ಜಯಪಾಲ್,ಸಾಯಿಕೀರ್ತನ, ಗೀತಾ,ಅಶ್ವಿತಾ, ಆಶಾ, ಅನುಷ, ಪೂಜಾ,ಸುಶ್ಮಿತಾ,ಚಂದನ, ಪ್ರೀತಿ, ನೃತ್ಯ ಶಿಕ್ಷಕ ಕಿಶೋರ್,
ಶಾಲಾ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಪೋಷಕರು
ಭಾಗವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು