5:42 AM Thursday15 - October 2026
ಬ್ರೇಕಿಂಗ್ ನ್ಯೂಸ್
ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3… ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು

ಇತ್ತೀಚಿನ ಸುದ್ದಿ

ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು

19/08/2026, 13:58

ದಾವಣಗೆರೆ(reporterkarnataka.com): ಕಳೆದ 9 ತಿಂಗಳಿಂದ ಕಫದೊಂದಿಗೆ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದ ಮಹಿಳೆಯ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಹೆಬ್ಬೆರಳು ಗಾತ್ರದ ಅಡಿಕೆಯನ್ನು ಹೊರತೆಗೆದು ಕ್ಷಯ ಎಂದು ಶಂಕಿಸಲಾಗಿದ್ದ ರೋಗಿಯನ್ನು ಗುಣಪಡಿಸುವಲ್ಲಿ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆ ಶ್ವಾಸಕೋಶ ವೈದ್ಯಕೀಯ ವಿಭಾಗದ ವೈದ್ಯರು ಯಶಸ್ವಿಯಾಗಿದ್ದಾರೆ. ದಾವಣಗೆರೆಯ ಸಂತೋಷ್‌ಗಿರಿ ಗೋಸಾವಿ ಪತ್ನಿ ವೇದಿಕಾ ಅವರೇ ಬ್ರೋಂಕೋಸ್ಕೋಪಿ ಮೂಲಕ ಶ್ವಾಸನಾಳ ಮಾರ್ಗದಲ್ಲಿ ಸಿಲುಕಿದ್ದ ಅಡಿಕೆಯನ್ನು ಹೊರತೆಗೆಸಿಕೊಂಡು ಗುಣಮುಖರಾಗಿ ನಿರಂತರ ಕೆಮ್ಮಿನ ಸಮಸ್ಯೆಗೆ ಮುಕ್ತಿಪಡೆದಿರುವ ಗೃಹಿಣಿ.

*ಕ್ಷಯ ಶಂಕಿತ ರೋಗಿ*
ಕಫದೊಂದಿಗೆ ನಿರಂತರ ಕೆಮ್ಮಿನಿಂದ ಬಳಲುತ್ತಿದ್ದ ವೇದಿಕಾ ಅವರಿಗೆ ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದ್ದರೂ ಸಮಸ್ಯೆಗೆ ನಿಖರವಾದ ಕಾರಣ ಪತ್ತೆಯಾಗಿರಲಿಲ್ಲ. ಕ್ಷಯರೋಗಕ್ಕೆ ಯಾವುದೇ ಖಚಿತ ಸಾಕ್ಷ್ಯಗಳಿಲ್ಲದಿದ್ದರೂ, ದೀರ್ಘಕಾಲದ ಕೆಮ್ಮಿನ ಕಾರಣದಿಂದಾಗಿ ಅವರನ್ನು ಹಲವು ಬಾರಿ ಕ್ಷಯ ಶಂಕಿತ ರೋಗಿ ಎಂದು ಗುರುತಿಸಲಾಗಿತ್ತು.
ತಿಪಟೂರಿನ ವೈದ್ಯರೊಬ್ಬರ ಸಲಹೆ ಮೇರೆಗೆ ಇತ್ತೀಚೆಗೆ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಗೆ ಬಂದು ದಾಖಲಾದ ವೇದಿಕಾ ಅವರಿಗೆ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶ್ವಾಸಕೋಶ ವೈದ್ಯಕೀಯ ವಿಭಾಗದಲ್ಲಿ ಪರೀಕ್ಷಿಸಿದ ವೈದ್ಯರು ರೋಗಿಯ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ಪರಿಶೀಲಿಸಿದರು. ಈ ವೇಳೆ ಕೆಲ ತಿಂಗಳ ಹಿಂದೆ ಶ್ವಾಸನಾಳಕ್ಕೆ ಅಡಿಕೆ ಹೋಗಿರಬಹುದಾದ ಕುರಿತು ಮಹತ್ವದ ಮಾಹಿತಿ ದೊರೆಯಿತು.

*ಫ್ಲೆಕ್ಸಿಬಲ್ ಬ್ರೋಂಕೋಸ್ಕೋಪಿ*
ಈ ಸುಳಿವಿನ ಆಧಾರದ ಮೇಲೆ ಫ್ಲೆಕ್ಸಿಬಲ್ ಬ್ರೋಂಕೋಸ್ಕೋಪಿ (ಶ್ವಾಶನಾಳದರ್ಶಿ) ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ವೇಳೆ ಶ್ವಾಸನಾಳ ಮಾರ್ಗದಲ್ಲಿ 2.5×1.5 ಸೆಂ.ಮೀ. ಗಾತ್ರದ ದೊಡ್ಡವರ ಹೆಬ್ಬೆರಳು ಗಾತ್ರದ ಅಡಿಕೆ ಸಿಲುಕಿಕೊಂಡಿರುವ ಅಚ್ಚರಿಯ ಸಂಗತಿಯನ್ನು ವೈದ್ಯರು ಪತ್ತೆ ಹಚ್ಚಿದರು. ಸುಮಾರು 9 ತಿಂಗಳಿಂದ ರೋಗಿಯನ್ನು ಕಾಡುತ್ತಿದ್ದ ಸಮಸ್ಯೆಗೆ ಇದೇ ಮೂಲ ಕಾರಣವಾಗಿತ್ತು.
ಶ್ವಾಸಕೋಶ ವೈದ್ಯಕೀಯ ವಿಭಾಗದ ತಜ್ಞರ ತಂಡ ಅತ್ಯಂತ ಜಾಗರೂಕತೆಯಿಂದ ಮತ್ತು ನಿಖರತೆಯಿಂದ ಜನರಲ್ ಅನಸ್ತೇಶಿಯ ನೀಡಿ ಬ್ರೋಂಕೋಸ್ಕೋಪಿ ಮೂಲಕ ಆ ಅಡಿಕೆಯನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಈ ಪ್ರಕ್ರಿಯೆಯಲ್ಲಿ ಶ್ವಾಸನಾಳ ಮಾರ್ಗಗಳಿಗೆ ಯಾವುದೇ ಹಾನಿಯಾಗದಂತೆ ವಿಶೇಷ ಕಾಳಜಿ ವಹಿಸಲಾಯಿತು. ಚಿಕಿತ್ಸೆ ಬಳಿಕ ಸುಮಾರು ಒಂದು ವರ್ಷದಿಂದ ರೋಗಿಯನ್ನು ಕಾಡುತ್ತಿದ್ದ ಕೆಮ್ಮು ಹಾಗೂ ಇತರ ಲಕ್ಷಣಗಳು ಬಹುತೇಕ ಸಂಪೂರ್ಣ ಕಡಿಮೆಯಾಗಿವೆ.
ಈ ಅಪರೂಪದ ಪ್ರಕರಣವು ಸರಿಯಾದ ವೈದ್ಯಕೀಯ ಇತಿಹಾಸ ಸಂಗ್ರಹಣೆ, ವೈದ್ಯರ ಅನುಭವ ಹಾಗೂ ಸಮಗ್ರ ರೋಗ ನಿರ್ಣಯದ ಮಹತ್ವವನ್ನು ಎತ್ತಿ ತೋರಿಸುತ್ತದೆ. ಜೊತೆಗೆ ದೀರ್ಘಕಾಲದ ಉಸಿರಾಟದ ಸಮಸ್ಯೆಗಳ ನಿಜವಾದ ಕಾರಣವನ್ನು ಪತ್ತೆಹಚ್ಚುವಲ್ಲಿ ಬ್ರೋಂಕೋಸ್ಕೋಪಿ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು