9:30 PM Wednesday12 - August 2026
ಬ್ರೇಕಿಂಗ್ ನ್ಯೂಸ್
Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;…

ಇತ್ತೀಚಿನ ಸುದ್ದಿ

ಉಡುಪಿ ಪುತ್ತಿಗೆ ಶ್ರೀಪಾದರ ಚಾತುರ್ಮಾಸ್ಯ: ನವಿಮುಂಬಯಿಯಲ್ಲಿ ಸ್ವಾಗತ ಸಮಾರಂಭ

12/08/2026, 19:50

ಮುಂಬೈ(reporterkarnataka.com): ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಚಾತುರ್ಮಾಸ ವ್ರತವನ್ನು ಆಚರಿಸುವ ಸಲುವಾಗಿ ಮಂಗಳವಾರ ನವಿಮುಂಬಯಿಗೆ ಆಗಮಿಸಿದ್ದು, ಅಪಾರ ಭಕ್ತಸಮೂಹದ ಸಮ್ಮುಖದಲ್ಲಿ ಶ್ರೀಪಾದರಿಗೆ ಭವ್ಯವಾದ ಸ್ವಾಗತ ಕೋರಲಾಯಿತು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಪಾದರು ದೀಪ ಪ್ರಜ್ವಲಿಸುವ ಮೂಲಕ ಚಾತುರ್ಮಾಸ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಬಳಿಕ ಆಶೀರ್ವಚನ ನೀಡಿದ ಅವರು, ನಾವು ಸಂಪಾದಿಸಿದ ಹಣದ ಒಂದು ಭಾಗವನ್ನು ದೇವರ ಸೇವೆಗೆ, ಧಾರ್ಮಿಕ ಕಾರ್ಯಗಳಿಗೆ, ದಾನ್ಫದಕ್ಷಿಣೆಗೆ, ಜ್ಞಾನಪ್ರಸಾರಕ್ಕೆ ಹಾಗೂ ಬಡವರು ಮತ್ತು ಅಸಹಾಯಕರ ಸೇವೆಗೆ ವಿನಿಯೋಗಿಸಬೇಕು. ಹಣವನ್ನು ಸತ್ಕಾರ್ಯಗಳಿಗೆ ಬಳಸಿದಾಗ ಅದು ಪುಣ್ಯವಾಗಿ ಪರಿವರ್ತನೆಯಾಗುತ್ತದೆ. ಪುಸ್ತಕಗಳ ಪ್ರಕಟನೆ ಮತ್ತು ವಿತರಣೆ ಉದ್ದೇಶ ಉತ್ತಮ ವಿಚಾರಗಳು ಮತ್ತು ಜ್ಞಾನವನ್ನು ಜನರಿಗೆ ತಲುಪಿಸುವ ಮೂಲಕ ಪುಣ್ಯವನ್ನು ಸಂಪಾದಿಸುವುದಾಗಿದೆ ಎಂದರು.
ಚಾತುರ್ಮಾಸ್ಯದ ಅವಧಿಯಲ್ಲಿ ಜ್ಞಾನ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ಶ್ರೀ ಪಾಂಡುರಂಗ ವಿಠಲ ದೇವರ ಅನುಗ್ರಹದಿಂದ ಲೋಕಕ್ಕೆ ಮಂಗಳವಾಗಲಿ ಎಂದು ಹಾರೈಸಿದರು. ಬಳಿಕ ಮಠದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಶಿವರಾಮ ಶೆಟ್ಟಿ, ಉಪಾಧ್ಯಕ್ಷರಾದ ಗೋಪಾಲ ವೈ. ಶೆಟ್ಟಿ, ಎನ್‌. ಆರ್‌. ರೈ, ಕಾರ್ಯಾಧ್ಯಕ್ಷ ಧರ್ಮದರ್ಶಿ ಅಣ್ಣಿ ಶೆಟ್ಟಿ, ಗೋಕುಲದ ಮಾಜಿ ಅಧ್ಯಕ್ಷ ಡಾ| ಸುರೇಶ್‌ ರಾವ್‌, ಅದಮಾರು ಮಠದ ಮುಖ್ಯ ಪ್ರಬಂಧಕ ರಾಜೇಶ್‌ ಭಟ್‌ ಹಾಗೂ ನೆಹರೂ ನಗರ ಪರಿಸರದ ಸಂತೋಷ್‌ ಶೆಟ್ಟಿ ಉಪಸ್ಥಿತರಿದ್ದರು.
ಭವ್ಯ ಪುರ ಮೆರವಣಿಗೆ ಗುರುವಾಯೂರಪ್ಪನ್‌ ದೇವಾಲಯದಿಂದ ಆರಂಭ ವಾದ ಪುರಪ್ರವೇಶ ಮೆರವಣಿಗೆಯಲ್ಲಿ ವೇದಘೋಷ, ಭಜನೆ, ಯಕ್ಷಗಾನ, ನೃತ್ಯ, ಕುಣಿತ, ಕೊಂಬು-ಕಹಳೆ, ನಾಗಸ್ವರ ಹಾಗೂ ವಿವಿಧ ವಾದ್ಯಗೋಷ್ಠಿಗಳು ವಿಶೇಷ ಮೆರುಗು ನೀಡಿದವು. ಗುರುವಾಯೂರಪ್ಪ ದೇವಾಲಯದ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಭಕ್ತರು ಶ್ರೀಪಾದರನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡರು. ಶ್ರೀ ವಿಟ್ಠಲ ದೇವರ ಮೂರ್ತಿಯೊಂದಿಗೆ ಶ್ರೀಪಾದರು ವೈಭವದ ಮೆರವಣಿಗೆಯಲ್ಲಿ ಸಾಗಿ, ನವಿಮುಂಬಯಿಯಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಶ್ರೀ ಪುತ್ತಿಗೆ ಮಠದ ಶಾಖೆಯನ್ನು ಪ್ರವೇಶಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು