4:42 AM Monday21 - September 2026
ಬ್ರೇಕಿಂಗ್ ನ್ಯೂಸ್
*ರೈತರ ಬದುಕು ಉಳಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ: ಸಿಎಂ ಡಿ ಕೆ… *ರಾಜ್ಯದ ಹಿತವೇ ಸರ್ಕಾರದ ಮೊದಲ ಆದ್ಯತೆ: ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ* ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಆರೋಪಿಗಳಿಗೆ ಜಾಮೀನು: ಸರ್ಕಾರದ ವಿರುದ್ಧ ಎಸ್‌ಡಿಪಿಐ ಆಕ್ರೋಶ ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಗೃಹ… ಶಾರ್ಜಾದ ‘ಸ್ಟ್ರಿಂಗ್ ಟ್ರಾನ್ಸ್‌ಪೋರ್ಟ್’ ವ್ಯವಸ್ಥೆ: ಟೂರಿಸಂ ಸಚಿವ ಕೆ.ಜೆ. ಜಾರ್ಜ್ ನೇತೃತ್ವದ ನಿಯೋಗ… ರಾಜ್ಯ ಸಚಿವ ಸಂಪುಟ ಸಭೆ | ಸಂಚಾರ ವ್ಯತ್ಯಯ; ಬದಲಿ ಮಾರ್ಗ ವ್ಯವಸ್ಥೆ ಹ್ಯಾಂಡ್ಪಿಕ್ಡ್: ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ ಹಾಗೂ ಎಣ್ಣೆ ಉತ್ಪನ್ನ ಮಾರಾಟ ಆರಂಭ ‘ಮಂಗಳೂರು ಟೆಕ್ನೋವಾಂಜಾ 2026’: ಕರಾವಳಿಯಲ್ಲಿ ತಂತ್ರಜ್ಞಾನ ಕ್ರಾಂತಿ ಸೆ. 23ರಂದು ಅನಾವರಣ ಬಹುರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೊ ದಾಖಲೆ ಸಾಧನೆ: 2025-26ನೇ ಸಾಲಿನಲ್ಲಿ 3,735 ಕೋಟಿ… ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ

ಇತ್ತೀಚಿನ ಸುದ್ದಿ

ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ ಶ್ಲಾಘನೆ

01/08/2026, 18:43

ಗಿರಿಧರ್ ಕೊಂಪುಳಿರ ಮೈಸೂರು

info.reporterkarnataka@gmail.com

ಭಾರತದ ಅರ್ಥ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದೆ. ಭಾರತದ ಯುವ ಶಕ್ತಿಯಿಂದ ಇದು ಸಾಧ್ಯವಾಗಿದೆ. ಇಂದು ಭಾರತ ವಿಶ್ವದ ಮೂರನೇ ಅತೀ ದೊಡ್ಡ ಸ್ಟಾರ್ಟ್‌ಅಪ್ ವ್ಯವಸ್ಥೆಯಾಗಿದೆ.ಇದರ ಹಿಂದೆ ಯವ ಶಕ್ತಿ ಇದೆ. ಇಂದು ಭಾರತ ಅತೀ ದೊಡ್ಡ ಮೊಬೈಲ್ ರಫ್ತು ದೇಶವಾಗಿದೆ.ಇದರ ಹಿಂದೆ ಯುವ ಶಕ್ತಿ ಕಾರಣವಾಗಿದೆ. ಭಾರತದ ಯುವಕರ ಸಾಮರ್ಥ್ಯದಿಂದ ಸೆಮಿಕಂಡಕ್ಟರ್, ಎಐ, ತಂತ್ರಜ್ಞಾನ, ಸಂಶೋಧನೆಯಲ್ಲಿ ಹೊಸ ಅಧ್ಯಾಯ ನಿರ್ಮಾಣವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ ಯುವ ಶಕ್ತಿಯಿಂದ ಭಾರತ ಕಂಗೊಳಿಸುತ್ತಿದೆ ಎಂದು ಯುವ ಸಮೂಹದ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ರಾಮಕೃಷ್ಣ ಆಶ್ರಮದ ವಿದ್ಯಾ ಶಾಲೆ ವೇದಿಕೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ ಸಾರ್ವಜನಿಕರನ್ನುದ್ದೇಶಿಸಿ ಕನ್ನಡದಲ್ಲೇ ಮಾತು ಆರಂಭಿಸಿದರು. ಮೈಸೂರು ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪ್ರಮಾಣ ಸಲ್ಲಿಸಿ ಮಾತು ಆರಂಭಿಸಿದ ಪ್ರಧಾನಿ ಮೋದಿ, ನನ್ನ ಯಾತ್ರೆ ಆರಂಭ ಹಾಗೂ ಇಂದು ನಾನು ಯಾವ ಸ್ಥಾನದಲ್ಲಿದ್ದೇನೆ ಅನ್ನೋದರ ಹಿಂದೆ ರಾಮಕೃಷ್ಣ ಮಠದ ಯೋಗದಾನವಿದೆ ಎಂದು ಮೋದಿ ಹೇಳಿದ್ದಾರೆ.
ಮೈಸೂರಿನ ಪವಿತ್ರ ಭೂಮಿಯಲ್ಲಿ ನನಗೆ ವಿಶೇಷ ಉತ್ಸಾಹ, ಹಾಗೂ ಚೈತನ್ಯ ಸಿಗುತ್ತಿದೆ. ಮೈಸೂರು ಭಾರತದ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿನ ದೇವಸ್ಥಾನ, ಇಲ್ಲಿನ ಪರಂಪರೆ, ಉತ್ಸವ, ಮೈಸೂರು ದಸರಾ, ಇಲ್ಲಿನ ಅರಮನೆ, ಸಂಗೀತ, ಸಾಹಿತ್ಯ ಸೇರಿದಂತೆ ಭಾರತೀಯ ಪರಂಪರೆ ಇಲ್ಲಿನ ಭೂಮಿಯ ಕಣಕಣದಲ್ಲಿದೆ. ಶ್ರೀ ರಾಮಕೃಷ್ಣ ಆಶ್ರಮ ಮೈಸೂರಿನ ಸಮೃದ್ಧ ಪರಂಪರೆಯಲ್ಲಿ ಭವ್ಯ ಕೊಡುಗೆ ನೀಡಿದೆ. ಸ್ವಾಮಿ ವಿವೇಕಾನಂದರ ಪ್ರಯಾಣದಲ್ಲಿ ಇಲ್ಲಿ ತಂಗಿದ್ದರು. ರಾಷ್ಟ್ರ ಕವಿ ಕುವೆಂಪು ಮೈಸೂರಿನಲ್ಲಿರುವಾಗ ರಾಮಕೃಷ್ಣ ಆಶ್ರಮದ ಜೊತೆ ಉತ್ತಮ ಸಂಬಂಧ ಹೊಂದಿದ್ದರು.
ಸ್ವಾಮಿ ವಿವೇಕಾನಂದರು ಯುವ ಸ್ವಾಮಿಯಾಗಿದ್ದ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸಿದ್ದರು. ಅಂದು ವಿವೇಕಾನಂದರು ಯುವಕರಾಗಿದ್ದರು ಅವರ ಮಾತುಗಳು, ಚಿಂತನೆಗಳು ಪ್ರಬುದ್ಧವಾಗಿತ್ತು. ಅಂದು ಮೈಸೂರಿಗೆ ಆಗಮಿಸಿದ ಸ್ವಾಮಿ ವಿವೇಕಾನಂದರಿಗೆ ಮೈಸೂರು ಮಹಾರಾಜರು ಅತ್ಯಂತ ಗೌರವ ನೀಡಿದ್ದರು. ವಿವೇಕಾನಂದರ ಅಮೆರಿಕ ಪ್ರಯಾಣದಲ್ಲಿ ಮಹಾರಾಜರ ಕೊಡುಗೆಯನ್ನು ಸ್ಮರಿಸಿದ್ದಾರೆ.

*ಯುವ ಶಕ್ತಿಯಿಂದ ಭಾರತ ಬಲಿಷ್ಠ*
ಭಾರತದ ಯುವ ಶಕ್ತಿಯಿಂದ ಭಾರತ ಪ್ರಬಲ ರಾಷ್ಟ್ರವಾಗಿ ಮುನ್ನುಗ್ಗುತ್ತಿದೆ. ಯಾವುದೇ ದೇಶದಲ್ಲಿ ಯುವ ಸಾಮರ್ಥ್ಯ ಸರಿಯಾದ ದಿಕ್ಕು, ಅವಕಾಶಗಳು ಸಿಕ್ಕಿದಾಗ ಆ ದೇಶ ಪ್ರಬಲ ಶಕ್ತಿಯಾಗಿ ಬೆಳೆಯುತ್ತದೆ. ಇದೇ ವೇಳೆ ಭಾರತದಲ್ಲಿ ಐಐಟಿ, ಐಟಿ , ವಿಶ್ವವಿದ್ಯಾಲಯ, ದೇಶದ ಎಂಬಿಬಿಎಸ್ ಸೀಟುಗಳು, ಮೆಡಿಕಲ್ ಕಾಲೇಜುಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಭಾರತದ ಯುವ ಸಮೂಹವನ್ನು ಭವಿಷ್ಯಕ್ಕಾಗಿ ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತವಾಗಿದೆ ಎಂದು ಮೋದಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು