7:45 AM Saturday15 - August 2026
ಬ್ರೇಕಿಂಗ್ ನ್ಯೂಸ್
ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್… ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ

ಇತ್ತೀಚಿನ ಸುದ್ದಿ

Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ ಇನ್ಸ್‌ಪೆಕ್ಟರ್!

19/06/2026, 22:24

ಬೆಂಗಳೂರು(reporterkarnataka.com): ಸಿಲಿಕಾನ್ ಸಿಟಿಯಲ್ಲಿ ಖಾಕಿ ಪಡೆಯ ಮರ್ಯಾದೆಯನ್ನು ಹರಾಜು ಹಾಕುವಂತಹ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.
ಸಿಐಡಿ ವಿಭಾಗಕ್ಕೆ ಸೇರಿದ ಅಸಲಿ ಪೊಲೀಸ್ ಜೀಪ್‌ನಲ್ಲೇ ಬಂದು, ಪೊಲೀಸ್ ಐಡಿ ಕಾರ್ಡ್ ತೋರಿಸಿ ಕೇರಳ ಮೂಲದ ಯುವಕರಿಂದ ಬರೋಬ್ಬರಿ 20 ಲಕ್ಷ ರೂಪಾಯಿ ಹಣವನ್ನು ದೋಚಿರುವ ಪ್ರಕರಣ ನಡೆದಿದೆ. ಈ ದರೋಡೆ ಜಾಲದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಒಬ್ಬರ ಕೈವಾಡ ಇರುವುದು ಇಡೀ ಪೊಲೀಸ್ ಇಲಾಖೆಯನ್ನು ತಲೆತಗ್ಗಿಸುವಂತೆ ಮಾಡಿದೆ.
ಬೆಂಗಳೂರಿನ ಮಡಿವಾಳದ ಖಾಸಗಿ ಹೋಟೆಲ್ ಬಳಿ ಈ ಭೀಕರ ದರೋಡೆ ನಡೆದಿದೆ. ಕೇರಳ ಮೂಲದ ಯುವಕರು ಮನಿ ಟ್ರೇಡಿಂಗ್ ವ್ಯವಹಾರಕ್ಕಾಗಿ ದೊಡ್ಡ ಮೊತ್ತದ ನಗದು ಹಣವನ್ನು ತಂದಿದ್ದರು. ಈ ವಿಷಯ ತಿಳಿದು ಅಸಲಿ ಸಿಐಡಿ ಪೊಲೀಸ್ ಜೀಪ್‌ನಲ್ಲಿ ಬಂದ ಖಾಸಗಿ ವ್ಯಕ್ತಿಗಳು ಹಾಗೂ ಇನ್ಸ್‌ಪೆಕ್ಟರ್, ಯುವಕರನ್ನು ತಡೆದು ನಿಲ್ಲಿಸಿದ್ದಾರೆ.
“ನೀವು ಅಕ್ರಮವಾಗಿ ಮನಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಾ?” ಎಂದು ಜೋರು ಮಾಡಿ, ಅಸಲಿ ಪೊಲೀಸ್ ಐಡಿ ಕಾರ್ಡ್ ತೋರಿಸಿ ಬೆದರಿಕೆ ಹಾಕಿದ್ದಾರೆ. ಜೀಪ್ ಮತ್ತು ಐಡಿ ಕಾರ್ಡ್ ನೋಡಿ ಬಂದವರು ಅಸಲಿ ಪೊಲೀಸರೇ ಎಂದು ನಂಬಿದ ಕೇರಳದ ಯುವಕರು, ಹೆದರಿ ತಮ್ಮ ಬಳಿಯಿದ್ದ 20 ಲಕ್ಷ ರೂಪಾಯಿ ಹಣವನ್ನು ಅವರ ಕೈಗಿಟ್ಟಿದ್ದಾರೆ.

*ದರೋಡೆಕೋರರ ವಿಡಿಯೋ ಮಾಡಿದ ಯುವಕರು!*
ಹಣ ಪಡೆದ ಬಳಿಕ ಪೊಲೀಸರ ಸೋಗಿನಲ್ಲಿದ್ದ ದರೋಡೆಕೋರರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಆದರೆ, ಘಟನೆಯ ವೇಳೆ ಸಮಯಪ್ರಜ್ಞೆ ಮೆರೆದಿದ್ದ ಕೇರಳದ ಯುವಕರು ತಮ್ಮ ಮೊಬೈಲ್‌ನಲ್ಲಿ ಇಡೀ ದರೋಡೆ ಪ್ರಕ್ರಿಯೆ ಹಾಗೂ ಬಂದಿದ್ದ ಜೀಪ್‌ನ ದೃಶ್ಯವನ್ನು ವಿಡಿಯೋ ಮಾಡಿಕೊಂಡಿದ್ದರು. ತಮಗೆ ಮೋಸ ಹೋಗಿರುವುದು ಖಾತರಿಯಾಗುತ್ತಿದ್ದಂತೆ ಸಂತ್ರಸ್ತ ಯುವಕರು ತಕ್ಷಣವೇ ಮಡಿವಾಳ ಪೊಲೀಸ್ ಠಾಣೆಗೆ ಧಾವಿಸಿ ಅಧಿಕೃತ ದೂರು ದಾಖಲಿಸಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಅರಿತ ಮಡಿವಾಳ ಉಪ ಪೊಲೀಸ್ ಆಯುಕ್ತರಾದ (DCP) ಮೊಹಮ್ಮದ್ ಸಜೀತ ಅವರು ತಕ್ಷಣವೇ ವಿಶೇಷ ತಂಡವನ್ನು ರಚಿಸಿ ತನಿಖೆಗೆ ಇಳಿದಿದ್ದಾರೆ. ಯುವಕರು ನೀಡಿದ ವಿಡಿಯೋ ಸಾಕ್ಷ್ಯಾಧಾರಗಳ ಬೆನ್ನತ್ತಿದ ಪೊಲೀಸರು, ದರೋಡೆಯಲ್ಲಿ ಭಾಗಿಯಾಗಿದ್ದ ಓರ್ವ ಖಾಸಗಿ ವ್ಯಕ್ತಿಯನ್ನು ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.

*ಇನ್ಸ್‌ಪೆಕ್ಟರ್ ಎಸ್ಕೇಪ್, ಜೀಪ್ ಸೀಜ್!*
ಬಂಧಿತ ಖಾಸಗಿ ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸ್ಫೋಟಕ ಸತ್ಯ ಹೊರಬಿದ್ದಿದೆ. “ದರೋಡೆ ನಡೆಸುವ ಸಮಯದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ಸಹ ಅದೇ ಜೀಪ್‌ನಲ್ಲಿ ಕುಳಿತಿದ್ದರು. ಅವರ ಸಮ್ಮತಿಯ ಮೇರೆಗೆ ನಾವು ಹೋಟೆಲ್ ಬಳಿ ಹೋಗಿ ಹೆದರಿಸಿ ಹಣ ಪಡೆದು ಬಂದೆವು” ಎಂದು ಆತ ಬಾಯಿಬಿಟ್ಟಿದ್ದಾನೆ.
ಈ ಮಾಹಿತಿ ಹೊರಬೀಳುತ್ತಿದ್ದಂತೆ ಮಡಿವಾಳ ಪೊಲೀಸರು ದರೋಡೆಗೆ ಬಳಸಲಾಗಿದ್ದ ಸಿಐಡಿ ಇನ್ಸ್‌ಪೆಕ್ಟರ್‌ಗೆ ಸೇರಿದ ಅಧಿಕೃತ ಪೊಲೀಸ್ ಜೀಪ್ ಅನ್ನು ವಶಕ್ಕೆ ಪಡೆದಿದ್ದಾರೆ. ಇತ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಸಿಐಡಿ ಇನ್ಸ್‌ಪೆಕ್ಟರ್ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದು, ಸದ್ಯ ಪೊಲೀಸರು ಈ ‘ಖಾಕಿ ಕದೀಮ’ನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು