5:14 PM Saturday1 - August 2026
ಬ್ರೇಕಿಂಗ್ ನ್ಯೂಸ್
ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ ಕಾವೇರಿ ನೀರು ಹಂಚಿಕೆ ವಿವಾದ | ಕಾನೂನು ತಜ್ಞರು, ಪ್ರತಿಪಕ್ಷಗಳ ಸಲಹೆ ಬಳಿಕ… ಮಂಗಳೂರು ಪೊಲೀಸರಿಂದ ಸುಮಾರು 82 ಕೋಟಿ ರೂ. ಮೌಲ್ಯದ ಡ್ರಗ್ಸ್ ನಾಶ: 157… ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ: ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕಿಯರೇ ಡ್ರಗ್ಸ್ ಜಾಲದ ಡಾನ್‌ಗಳು!! ಅಸ್ಸಾಂ ಪ್ರವಾಹ ಕೊಂಚ ಇಳಿಮುಖ: 70ಕ್ಕೂ ಅಧಿಕ ಸಾವು; 4.45 ಲಕ್ಷಕ್ಕೂ ಹೆಚ್ಚು… Mysore | ಮಲೆಮಹದೇಶ್ವರ ಅಭಯಾರಣ್ಯದಲ್ಲಿ ಅರಣ್ಯ ಸಿಬ್ಬಂದಿ ಫೈರಿಂಗ್: ಕಾಡುಹಂದಿ ಬೇಟೆಗಾರನಿಗೆ ಬಿತ್ತು… Bangalore | ಕ್ಯಾಬ್‌ಗೆ ಕಾಯುತ್ತಿದ್ದ ಯುವತಿಯ ‘ರೇಟ್‌’ ಕೇಳಿದ ಕಾಮುಕ ಅರೆಸ್ಟ್ ಗಂಗಾಧರ ಪಾಂಗಾಳ ಕೊಲೆ ಪ್ರಕರಣ: ಸತೀಶ್ ಬೈಕಂಪಾಡಿ ಸೇರಿ 4 ಮಂದಿ ಆರೋಪಿಗಳಿಗೆ… Bangalore | ಅಗ್ನಿ ದುರಂತ: ಚಂದಾಪುರದಲ್ಲಿ ಹೊತ್ತಿ ಉರಿದ 4 ಖಾಸಗಿ ಬಸ್‌ಗಳು ಭಾರತದ ಇತಿಹಾಸದಲ್ಲೇ ಮಕ್ಕಳ ಮೇಲೆ ಈ ರೀತಿ ಹಲ್ಲೆ ನಡೆದಿಲ್ಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷದ…

ಇತ್ತೀಚಿನ ಸುದ್ದಿ

Education | ಕಲ್ಲರಕೋಡಿ: ನೂತನ ಸರಕಾರಿ ಪದವಿಪೂರ್ವ ಕಾಲೇಜು ಉದ್ಘಾಟನೆ

16/06/2026, 09:59

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲರಕೋಡಿಯಲ್ಲಿ ನೂತನವಾಗಿ ನಿರ್ಮಾಣವಾದ ಉನ್ನತೀಕರಿಸಿದ ಪದವಿಪೂರ್ವ ಕಾಲೇಜು ಕಟ್ಟಡವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು,ಕಾಲೇಜು ಮಂಜೂರುಗೊಳಿಸುವುದು ಮುಖ್ಯವಲ್ಲ, ಅದರ ಬೆನ್ನಹಿಂದೆ ಬಿದ್ದು ಕಾರ್ಯಗತಗೊಳಿಸುವುದು ಮುಖ್ಯ. ಕಲ್ಲರಕೋಡಿಗೆ ಕಾಲೇಜು ಮಂಜೂರುಗೊಳಿಸಿದ ಬಳಿಕ ಅದನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿ. ಗ್ರಾಮದಲ್ಲಿ ಎರಡನೇ ಪದವಿಪೂರ್ವ ಕಾಲೇಜು ಆಗುತ್ತದೆ ಎಂದು ಯಾರೂ ಕನಸಲ್ಲೂ ನೆನೆಸಿರಲಿಲ್ಲ. ಯಾವುದು ಮಾಡಲು ಅಸಾಧ್ಯವೋ ಅದನ್ನು ಸಾಧ್ಯವಾಗಿಸುವುದು ನಮ್ಮ ಗುರಿ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ. ಎಸ್. ಗಟ್ಟಿ ಮೇಲಿನ ಅಂತಸ್ತು ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ತರಗತಿ ಕೊಠಡಿ ಉದ್ಘಾಟಿಸಿದರು. ಬಂಟ್ವಾಳ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಕೆ., ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ನರಿಂಗಾನ ಬೋಳ ಸಂತ ಲಾರೆನ್ಸ್ ಚರ್ಚ್ ಧರ್ಮಗುರು ವಂ. ಫಾ. ಫೆಡ್ರಿಕ್ ಡಿಸೋಜ, ಸಮಾಜ ಸೇವಕ ಇಬ್ರಾಹಿಂ ಪಾರೆ, ಡಿಡಿಪಿಐ ಹೆಚ್. ಹೆಚ್. ರಾಜೇಶ್ವರಿ, ನರಿಂಗಾನ ಗ್ರಾಮ ಪಂಚಾಯಿತಿ ಪಿಡಿಒ ಶ್ವೇತಾ ಕೆ., ಕಾರ್ಯದರ್ಶಿ ನಳೀನಿ ಎ.ಕೆ., ಗ್ರಾಮ ಕರಣಿಕರಾದ ಚೈತ್ರಾ ಕೆ., ಪ್ರಗತಿಪರ ಕೃಷಿಕ ಚಂದ್ರಹಾಸ್ ಶೆಟ್ಟಿ ಮೋರ್ಲಗುತ್ತು, ನರಿಂಗಾನ ಗ್ರಾಮ ಪಂಚಾಯಿತಿ ನಿಕಟಪೂರ್ವ ಸದಸ್ಯರಾದ ಮುರಲೀಧರ ಶೆಟ್ಟಿ ಮೋರ್ಲ, ಶೇಖಬ್ಬ ನಿಡ್ಮಾಡ್, ಸುಂದರ ಪೂಜಾರಿ ಕಂಬಳಕೋಡಿ, ಲತೀಫ್ ಕಾಪಿಕಾಡ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಶ್ರಫ್ ಎಸ್.ಎಚ್., ಗುತ್ತಿಗೆದಾರ ಫರ್ಜಾನ್ ಅಹ್ಮದ್ ಸಿದ್ಧಕಟ್ಟೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜು ಮಂಜೂರುಗೊಳಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ನಿರ್ಮಾಣದ ರೂವಾರಿ ನರಿಂಗಾನ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ನವಾಝ್ ನರಿಂಗಾನ, ಉಪ ನಿರ್ದೇಶಕಿ ಎಚ್. ಎಚ್. ರಾಜೇಶ್ವರಿ, ಮೊಂಟೆಪದವು ಪ್ರೌಢ ಶಾಲಾ ಹಿರಿಯ ಶಿಕ್ಷಕ ಸಂತೋಷ್ ಎಚ್. ಎಂ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಾಕ್ಷಿ ಬಿ., ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಜೋಯ್ಸ್ ಮೇರಿ ಕುವೆಲ್ಲೊ, ಪ್ರೌಢ ಶಾಲಾ ಮುಖ್ಯಶಿಕ್ಷಕಿ ನಯನ ಕುಮಾರಿ, ಗ್ರಾಮದ ನಿವೃತ್ತ ಮಿಡ್‌ವೈಫ್ ಸಿಲ್ವಿ ಐರಿಸ್ ಬಂಗೇರ, ನಿವೃತ್ತ ಉಗ್ರಾಣಿ ವೆಂಕಪ್ಪ ಅಂಬುಗ, ನಿವೃತ್ತ ಕಾರ್ಯದರ್ಶಿ ಡಿ. ರಾಜೀವ ಧರ್ಮಕ್ಕಿ, ಕಟ್ಟಡ ಗುತ್ತಿಗೆದಾರ ಫರ್ಜಾನ್ ಅಹ್ಮದ್, ಮೊಂಟೆಪದವು ಕೆಪಿಎಸ್ ಹಾಗೂ ಕಲ್ಲರಕೋಡಿ ಶಾಲೆಯ ಎಸ್‌ಎಸ್‌ಎಲ್‌ಸಿಯ ೧೬೦ವಿದ್ಯಾರ್ಥಿಗಳು, ಕಲ್ಲರಕೋಡಿ ಶಾಲಾ ಪ್ರಥಮ ಪಿಯುಸಿ ವಿದ್ಯಾರ್ಥಿಗಳು, ಕಾಲೇಜಿನ ನೂತನ ಶಿಕ್ಷಕ ವೃಂದ, ಪ್ರಾಥಮಿಕ ಹಾಗೂ ಪ್ರೌಢಶಾಲಾ ವರ್ಗಾವಣೆಗೊಂಡ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಎಲ್ಲ ಶಿಕ್ಷಕ ಶಿಕ್ಷಕಿಯರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಯುಕ್ತ ಚೆಂಡೆವಾದನ, ಮಿಮಿಕ್ರಿ ಹಾಗೂ ಜಾದೂ ಪ್ರದರ್ಶನ ನಡೆಯಿತು.


ಅಧ್ಯಕ್ಷತೆ ವಹಿಸಿದ ನರಿಂಗಾನ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ನವಾಝ್ ನರಿಂಗಾನ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯಿ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು