9:21 PM Thursday16 - April 2026
ಬ್ರೇಕಿಂಗ್ ನ್ಯೂಸ್
ಕೋಡಪದವಿನಲ್ಲಿ ಚಿನ್ನದ ಸರ ಕದ್ದ ಪ್ರಕರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಫೋಟೋದ ವ್ಯಕ್ತಿಗೂ… Chikkamagaluru | ಬಣಕಲ್: ಚಾಲಕನ ನಿಯಂತ್ರಣ ತಪ್ಪಿ ಐಟ್ವೆಂಟಿ ಕಾರು ವಿದ್ಯುತ್ ಕಂಬಕ್ಕೆ… ಕೊಟ್ಟಿಗೆಹಾರ-ಹೊರನಾಡು–ಶೃಂಗೇರಿ ರಸ್ತೆಯಲ್ಲಿ ಟ್ಯಾಕ್ಟರ್ ಪಲ್ಟಿ: ಅರ್ಧ ಗಂಟೆ ಸಂಚಾರ ಸ್ಥಗಿತ ಮಂಗಳೂರು-ಚೆನ್ನೈ ಎಗ್ಮೋರ್ ವಿಶೇಷ ರೈಲು ಓಡಾಟ ವಿಸ್ತರಣೆ: ಎಲ್ಲೆಲ್ಲಿ ನಿಲುಗಡೆ ಇದೆ? ಕುಶಾಲನಗರ | ರಸ್ತೆ ಅಪಘಾತ: ಕಿರುತೆರೆಯ ನಟ ಹರೀಶ್ ಸ್ಥಳದಲ್ಲೇ ಸಾವು ಗಾಂಧಿ ಬದುಕೇ ಒಂದು ಸಂದೇಶ: ಮಸ್ಕಿಯಲ್ಲಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಡಾ. ಕೊಡಗುಂಟಿ 3 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಪತ್ತೆ: ಚಂದ್ರದ್ರೋಣ ಪರ್ವತದ 2 ಸಾವಿರ… ಪ್ರಧಾನಿ‌ ಮೋದಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ ರವಾನೆ: ವಿದೇಶಿ ಏಜೆನ್ಸಿಗಳ ಜತೆ ಸಂಪರ್ಕ;… ಉತ್ತರ ಪ್ರದೇಶದಲ್ಲಿ ಭೀಕರ ದೋಣಿ ದುರಂತ: ಪ್ರವಾಸಿಗರಿದ್ದ ಸ್ಟೀಮರ್ ಪಲ್ಟಿಯಾಗಿ 10 ಮಂದಿ… ಚಾಮರಾಜನಗರ; ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ‘ಸೈಕೋ’ ಕಳ್ಳನ ಬಂಧನ

ಇತ್ತೀಚಿನ ಸುದ್ದಿ

ಕೋಡಪದವಿನಲ್ಲಿ ಚಿನ್ನದ ಸರ ಕದ್ದ ಪ್ರಕರಣಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುವ ಫೋಟೋದ ವ್ಯಕ್ತಿಗೂ ಸಂಬಂಧವಿಲ್ಲ: ಪೊಲೀಸರ ಸ್ಪಷ್ಟನೆ

16/04/2026, 18:54

ವಿಟ್ಲ(reporterkarnataka.com): ವಿಟ್ಲ ಠಾಣಾ ವ್ಯಾಪ್ತಿಯ ಕೋಡಪದವು ಎಂಬಲ್ಲಿ ಮಗುವೊಂದರ ಕುತ್ತಿಗೆಯಿಂದ ಚಿನ್ನದ ಸರ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ಬೈಕ್ ಸವಾರನ ಫೋಟೋಕ್ಕೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಪೊಲೀಸರ ಪ್ರಕಟಣೆ ತಿಳಿಸಿದೆ.
7 ವರ್ಷದ ಮಗುವಿನ ಕುತ್ತಿಗೆಯಲ್ಲಿದ್ದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು, ದ್ವಿಚಕ್ರ ವಾಹನ (ಕೆ.ಟಿ.ಎಂ ಬೈಕ್) ದಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಮಗುವನ್ನು ಬೆದರಿಸಿ ಎಳೆದುಕೊಂಡು ಹೋಗಿರುವ ಬಗ್ಗೆ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 91/2026, ಕಲಂ: 309(4) BNS 2023. ರಂತೆ ಪ್ರಕರಣ ದಾಖಲಾಗಿತ್ರು. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ಆರೋಪಿ ಎಂಬುದಾಗಿ ಕೆ.ಟಿ.ಎಂ ಬೈಕ್ ಸವಾರನೊಬ್ಬನ ಭಾವಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಈ ಬಗ್ಗೆ ವಿಟ್ಲ ಠಾಣಾ ಪೊಲೀಸರು ಸದ್ರಿ ಬೈಕ್ ಸವಾರನನ್ನು ವಿಚಾರಣೆ ನಡೆಸಿದ್ದು, ಈತನಿಗೂ, ಮಗುವಿನ ಚಿನ್ನದ ಸರ ಎಳೆದುಕೊಂಡು ಹೋಗಿರುವ ಘಟನೆಗೂ ಸಂಬಂಧವಿರುವುದಿಲ್ಲ ಎಂಬುದಾಗಿ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ. ಈ ಬೈಕ್ ಸವಾರನ ಬಗ್ಗೆ ಯಾವುದೇ ನಕರಾತ್ಮಕ ಅಭಿಪ್ರಾಯಗಳು ಉಂಟಾಗಬಾರದು ಎಂಬ ದೃಷ್ಟಿಯಿಂದ ಆತನ ಕುಟುಂಬದವರ ಕೋರಿಕೆಯ ಮೇರೆಗೆ ಈ ಸ್ಪಷ್ಟೀಕರಣವನ್ನು ನೀಡಲಾಗಿದ್ದು, ಪ್ರಕರಣದ ಆರೋಪಿಯ ಪತ್ತೆಕಾರ್ಯ ಪ್ರಗತಿಯಲ್ಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು