2:41 PM Thursday1 - October 2026
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ | ನಿಶ್ಚಿತಾರ್ಥವಾದ ಯುವಕ ಆತ್ಮಹತ್ಯೆ: ಮುಂದಿನ ತಿಂಗಳು 25ಕ್ಕೆ ಮದುವೆ ಇತ್ತು ನೈಸ್ ಯೋಜನೆ | 1995ರಿಂದ ಯೋಜನೆ ನಡೆದು ಬಂದ ಹಾದಿಯನ್ನು ಜನರ ಮುಂದಿಡುತ್ತೇನೆ:… ಕಾಡಿನಲ್ಲಿ ಕಾದಾಟದಿಂದ ತೀವ್ರ ಗಾಯ | ದುಬಾರೆ ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಂಡಾನೆ… ದೋಷಪೂರಿತ ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸಿ: ನಟ ಪ್ರಕಾಶ್ ರೈ ಆಗ್ರಹ ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಿ ಬಂಧಿಸಿ: ಕಾಂಗ್ರೆಸ್ ಪಾದಯಾತ್ರೆಯಲ್ಲಿ ಆಗ್ರಹ ಖಾಸಗಿ ಆಸ್ಪತ್ರೆ ಕೈಚೆಲ್ಲಿದ ಪ್ರಕರಣ: ಲೇಡೀಗೋಶನ್ ನಲ್ಲಿ ಪುನರ್ಜನ್ಮ ಪಡೆದ ಗರ್ಭಿಣಿ ಮಹಿಳೆ;… ಸೈಬರ್ ವಂಚನೆಗೆ ಬ್ರೇಕ್: 9,840 ಕೋಟಿ ಸ್ಪ್ಯಾಮ್ ಕರೆ ಪತ್ತೆಹಚ್ಚಿದ ಏರ್‌ಟೆಲ್ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ… ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಸಿದ್ದರಾಮಯ್ಯ!: ಬೆಳ್ಳಿತೆರೆಗೆ ಭರ್ಜರಿ ಎಂಟ್ರಿ ಕೊಟ್ಟ ಮಾಜಿ ಸಿಎಂ ಮಡಿಕೇರಿ ಮತ್ತು ಕುಶಾಲನಗರ ತಾಲೂಕು ಬರಪೀಡಿತ ಎಂದು ಘೋಷಣೆ: ಶಾಸಕ ಡಾ.ಮಂತರ್ ಗೌಡ…

ಇತ್ತೀಚಿನ ಸುದ್ದಿ

ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಮಾರ್ಚ್ 27ರಿಂದ: 50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಗ್ಯಾರಂಟಿ ಗಿಫ್ಟ್

26/03/2026, 19:47

ಪುತ್ತೂರು(reporterkarnataka.com): ಪ್ರಸಿದ್ಧ ಆಭರಣ ಸಂಸ್ಥೆಯಾದ ಮುಳಿಯ ಗೋಲ್ಡ್ & ಡೈಮಂಡ್ಸ್‌ ತನ್ನ ಗ್ರಾಹಕರಿಗಾಗಿ “ಡೈಮಂಡ್ ಫೆಸ್ಟ್” ವಿಶೇಷ ಉತ್ಸವವನ್ನು ಮಾರ್ಚ್ 27ರಿಂದ ಆರಂಭಿಸುತ್ತಿದೆ.
‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್ಸ್!’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರಾಭರಣ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ. ಫೆಸ್ಟ್‌ನ ಅಂಗವಾಗಿ ಗ್ರಾಹಕರು ₹50,000 ಹೆಚ್ಚಿನ ಖರೀದಿಗೆ ಖಚಿತ ಉಡುಗೊರೆಯನ್ನು ಪಡೆಯಬಹುದಾಗಿದೆ. ಜೊತೆಗೆ, ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗೆಲ್ಲುವ ಅವಕಾಶವೂ ಇದೆ. ಈ ಉತ್ಸವದ ಸಂದರ್ಭದಲ್ಲಿ ಹೆಚ್ಚಿನ ವೆರೈಟಿಯ ವಜ್ರಾಭರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.
ವಜ್ರದ ಆಭರಣಗಳ ಮೇಲೆ 95% ಎಕ್ಸ್‌ಚೇಂಜ್ ಮತ್ತು 90% ಬೈಬ್ಯಾಕ್ ಸೌಲಭ್ಯವನ್ನು ಸಂಸ್ಥೆ ನೀಡುತ್ತಿದ್ದು, ಹಳೆಯ ಆಭರಣಗಳನ್ನು ಹೊಸದಾಗಿ ಪರಿವರ್ತಿಸಿಕೊಳ್ಳಲು ಇದು ಒಳ್ಳೆಯ ಅವಕಾಶ ಎಂದು ಸಂಸ್ಥೆ ತಿಳಿಸಿದೆ.
ಮದುವೆ ಹಾಗೂ ಹಬ್ಬಗಳ ಸೀಸನ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿನ್ಯಾಸಗಳ ಹಾರಗಳು, ಕಿವಿಯೋಲೆಗಳು, ಉಂಗುರಗಳು ಸೇರಿದಂತೆ ಹಲವಾರು ನವನವೀನ ಆಭರಣಗಳು ಈ ಉತ್ಸವದಲ್ಲಿ ಜನಾಕರ್ಷಣೆಯಾಗಿದೆ.

ಅಮೂಲ್ಯ ಡೈಮಂಡ್ಸ್‌ ಮತ್ತು ಕಿಸ್ನ ಡೈಮಂಡ್ & ಗೋಲ್ಡ್ ಜ್ಯುವೆಲ್ಲರಿ ಬ್ರ್ಯಾಂಡ್‌ಗಳು ಜೊತೆಯಾಗಿ ನಡೆಸುತ್ತಿರುವ ಈ ಉತ್ಸವ ಗುಣಮಟ್ಟ ಮತ್ತು ವೈವಿಧ್ಯತೆಯಲ್ಲಿಯೂ ಗಮನ ಸೆಳೆಯುತ್ತಿದೆ.
ಗ್ರಾಹಕರು ಸಮೀಪದ ಮುಳಿಯ ಶೋರೂಮ್‌ಗಳಿಗೆ ಭೇಟಿ ನೀಡಿ ಈ ವಿಶೇಷ ಆಫರ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು.ಪುತ್ತೂರು, ಬೆಳ್ತಂಗಡಿ, ಮಡಿಕೇರಿ ಹಾಗೂ ಗೋಣಿಕೊಪ್ಪ ಈ ನಾಲ್ಕು ಶಾಖೆಗಳಲ್ಲಿ ಡೈಮಂಡ್ ಫೆಸ್ಟ್ ನಡೆಯುತ್ತಿದೆ.
ಉತ್ಸವದ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಮಾತನಾಡಿ, “ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಆಭರಣಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲೇ ಒದಗಿಸುವುದು ನಮ್ಮ ಉದ್ದೇಶ. ಈ ಡೈಮಂಡ್ ಫೆಸ್ಟ್ ಮೂಲಕ ಹೆಚ್ಚಿನ ಜನರಿಗೆ ವಿಶೇಷ ಅನುಭವ ನೀಡಲು ನಾವು ಸಜ್ಜಾಗಿದ್ದೇವೆ,” ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು