ಇತ್ತೀಚಿನ ಸುದ್ದಿ
Kodagu | ಮಡಿಕೇರಿ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ಆರಂಭ
26/03/2026, 18:59
ಮಡಿಕೇರಿ(reporterkarnataka.com): ಮಡಿಕೇರಿಯ ಇಬ್ಬನಿವಳವಾಡಿ ಗ್ರಾಮದಲ್ಲಿ ಹುಲಿಯ ಓಡಾಟ ಕಂಡು ಬಂದ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ ಆರಂಭಗೊಂಡಿದೆ.

ಸಿಂಕೋನ, ಇಬ್ಬನಿವಳವಾಡಿ, ಕಗ್ಗೋಡ್ಲು ವ್ಯಾಪ್ತಿಯಲ್ಲಿ ಹುಲಿಗಾಗಿ ಹುಡುಕಾಟ ಶುರುವಾಗಿದೆ. ಥರ್ಮಲ್ ಡ್ರೋನ್ ಬಳಸಿ ಶೋಧ ನಡೆಯುತ್ತಿದೆ. ಹುಲಿ ಕಾರ್ಯಾಚರಣೆಗೆ ಮೂರು ಸಾಕಾನೆಗಳಾದ ಕಂಜನ್, ಈಶ್ವರ, ಪ್ರಶಾಂತ್ ಆಗಮನವಾಗಿದೆ. ಕಾರ್ಯಾಚರಣೆಗೆ ಡಿಸಿಎಫ್ ಅಭಿಷೇಕ್ ನೇತೃತ್ವ ವಹಿಸಿದ್ದಾರೆ. ನಿನ್ನೆಯಿಂದ 8-10 ಕಿ.ಮಿ ವ್ಯಾಪ್ತಿಯಲ್ಲಿ ಹುಲಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿದೆ.
ಕಳೆದ ರಾತ್ರಿ 10 ಗಂಟೆಯವರೆಗೆ ಶೋಧ ಕಾರ್ಯ ನಡೆದಿತ್ತು.
ಇಂದು ಬೆಳಗ್ಗಿನ ಜಾವ ಮತ್ತೆ ಶೋಧ ಆರಂಭವಾಗಿದೆ.
ಥರ್ಮಲ್ ಡ್ರೋನ್ನಲ್ಲಿ ಹುಲಿ ಓಡಾಟ ಪತ್ತೆಯಾಗಿಲ್ಲ.
ಡಿ. ಸಿ. ಎಫ್., ಎ. ಸಿ. ಎಫ್, ಸೇರಿದಂತೆ ಅರಣ್ಯ ಇಲಾಖೆ ಯ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ.












