9:10 AM Wednesday26 - August 2026
ಬ್ರೇಕಿಂಗ್ ನ್ಯೂಸ್
ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ ತುಳುನಾಡಿನ ದೈವಗಳಿಗೆ ನಟ ದರ್ಶನ್ ಪತ್ನಿ ಮೊರೆ: ಪತಿಯ ಸಂಕಷ್ಟದಿಂದ ಪಾರು ಮಾಡಲು… ಭಾರತ್ ಸಿನಿಮಾಸ್ ಗೆ ‘ವರ್ಷದ ಪ್ರಾದೇಶಿಕವಾಗಿ ಉದಯೋನ್ಮುಖ ಸಿನಿಮಾ ಸರಣಿ’ ಪ್ರಶಸ್ತಿ ಡಿ.ಕೆ. ಸುರೇಶ್, ಸಚಿವ ಬಾಲಕೃಷ್ಣ ಅವರದ್ದು ಸೂಟ್‌ಕೇಸ್ ಬೃಂದಾವನ: ಕೇಂದ್ರ ಸಚಿವ ಎಚ್.ಡಿ.… *ದುಬಾರಿ ಹಣ ಕೊಟ್ಟು ಜನ ನೀರಿನ ಬಾಟಲಿ ಖರೀದಿಸುತ್ತಾರೆ, 50 ರೂ. ಕೊಟ್ಟು… ವಾಕಿಂಗ್ ಮಾಡುತ್ತಿದ್ದ ಇಬ್ಬರಿಗೆ ಕಾರು ಡಿಕ್ಕಿ: ಓರ್ವ ದುರ್ಮರಣ; ಇನ್ನೋರ್ವ ಗಂಭೀರ ವಿರಾಜಪೇಟೆ: ಪುತ್ರನ ಬಿಟ್ಟು ನಾಪತ್ತೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ…

ಇತ್ತೀಚಿನ ಸುದ್ದಿ

ಕರೆಜ್ಮಾಚಾ ಗಿತಾಂಚಿ ಭಕ್ತಿಕ್ ಸಾಂಜ್- ಪಾಲ್ದನೆ ಚರ್ಚ್ ನಲ್ಲಿ ತಪಸ್ಸು ಕಾಲದ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ

01/03/2026, 15:00

ಮಂಗಳೂರು(reporterkarnataka.com): ತಪಸ್ಸು ಕಾಲವು ಕ್ರೈಸ್ತರಲ್ಲಿ ಪ್ರಾರ್ಥನೆ, ಪಶ್ಚಾತ್ತಾಪ ಮತ್ತು ತ್ಯಾಗದ ಸಮಯವಾಗಿದ್ದು, ಈ ಸಮಯದಲ್ಲಿ ಯೇಸು ಕ್ರಿಸ್ತರ ಶಿಲುಬೆಯ ಮರಣ ಮತ್ತು ಪ್ರೀತಿಯನ್ನು ಸ್ಮರಿಸುವ ಗೀತೆಗಳನ್ನು ಹಾಡಲಾಗುತ್ತದೆ. ಸಾಂಪ್ರದಾಯಿಕ ಮತ್ತು ಸಮಕಾಲೀನ ಕ್ಯಾಥೊಲಿಕ್ ಭಕ್ತಿ ಗೀತೆಗಳು ಪಶ್ಚಾತ್ತಾಪ, ಪ್ರಾಯಶ್ಚಿತ, ತ್ಯಾಗ ಮತ್ತು ಶಿಲುಬೆಯ ಹಾದಿಯ ಮೇಲೆ ಕೇಂದ್ರೀಕರಿಸಿವೆ. 40 ದಿನಗಳ ಅವಧಿಯ ತಪಸ್ಸು ಕಾಲದ ಆಚರಣೆಗೆ ಹಲವಾರು ವರ್ಷಗಳ ಇತಿಹಾಸವಿದೆ. ಕ್ರಿಸ್ತ ಶಕ 4 ನೇ ಶತಮಾನದಿಂದ ಅಂದರೆ ಕ್ರಿ.ಶ. 325 ರಿಂದ ತಪಸ್ಸು ಕಾಲ ಅಧಿಕೃತವಾಗಿ ಆರಂಭವಾಯಿತು ಎಂಬುದಾಗಿ ಇತಿಹಾಸದ ಪುಟಗಳಿದ ತಿಳಿದು ಬರುತ್ತದೆ. ಅಂದಿನಿಂದಲೇ ಇದಕ್ಕೆ ಸಂಬಂಧಿಸಿದ ವಿಶೇಷ ಭಕ್ತಿ ಗೀತೆಗಳ ಗಾಯನ ಪದ್ದತಿ ಜಾರಿಯಲ್ಲಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಗಮನದಲ್ಲಿ ಇರಿಸಿ ಮಾರ್ಚ್ 15ರಂದು ಮಂಗಳೂರಿನ ಪಾಲ್ದನೆ ಸಂತ ತೆರೆಸಾ ಚರ್ಚ್, ವಾಮಂಜೂರಿನ ಸೈಂಟ್ ಜೋಸೆಫ್ ದಿ ವರ್ಕರ್ ಚರ್ಚ್ ಮತ್ತು ಕೆಲರಾಯ್ ಸಂತ ಅನ್ನಾ ಚರ್ಚ್ ನ ಸಹಯೋಗದಲ್ಲಿ ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಸಂಜೆ 6 ಗಂಟೆಗೆ ಕರೆಜ್ಮಾಚಾ ಗಿತಾಂಚಿ ಭಕ್ತಿಕ್ ಸಾಂಜ್ ಎಂಬ ತಪಸ್ಸು ಕಾಲದ ಕೊಂಕಣಿ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ. ಈ ಮೂರು ಚರ್ಚ್ ಗಳ ಗಾಯನ ಮಂಡಳಿಗಳ ಸದಸ್ಯರು ತಲಾ ನಾಲ್ಕು ಗೀತೆಗಳನ್ನು ಅವುಗಳ ವಿವರಣೆಯೊಂದಿಗೆ ಪ್ರಸ್ತುತ ಪಡಿಸಲಿದ್ದಾರೆ ಎಂದು ಚರ್ಚ್ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು