1:57 PM Sunday21 - June 2026
ಬ್ರೇಕಿಂಗ್ ನ್ಯೂಸ್
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ…

ಇತ್ತೀಚಿನ ಸುದ್ದಿ

ಕೊಡಗಿನ ಕುಗ್ರಾಮ ಬೆಟ್ಟತೂರುನಲ್ಲಿ ಕಾಡಾನೆ ದಾಳಿಗೆ ಯುವತಿ ಬಲಿ: ತಾಯಿಯ ಕಣ್ಣೆದುರೇ ನಡೆದ ದುರ್ಘಟನೆ

01/03/2026, 11:07

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಮಡಿಕೇರಿ ತಾಲ್ಲೂಕು ಮದೆನಾಡು ಗ್ರಾಮ ಪಂಚಾಯಿತಿ ತಾಲ್ಲೂಕಿನ ಬೆಟ್ಟತೂರು ಗ್ರಾಮದಲ್ಲಿ ಕಾಡಾನೆಯೊಂದು ದಾಳಿ ನಡೆಸಿದ್ದು ಯುವತಿಯೊಬ್ಬಳು ಬಲಿಯಾದ ಘಟನೆ ನಡೆದಿದೆ.


ಮಡಿಕೇರಿಯ ಸಂತ ಮೈಕಲ್ ಕಾಲೇಜು ನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪೂಜ್ಯ (19) ಮೃತ ದುರ್ದೈವಿ. ಸದಾ ಕಾಡಾನೆ ಓಡಾಟದ ಭೀತಿ ಇರುವ ಬೆಟ್ಟತೂರು ಗ್ರಾಮದಲ್ಲಿ ತನ್ನ ಚೆರಂಬಾಣೆಯಿಂದ ತಂದೆ ತಾಯಿಯೊಂದಿಗೆ ಬೈಕ್ ನಲ್ಲಿ ಗ್ರಾಮಕ್ಕೆ ಬಂದಿದ್ದು, ಕಡಿದಾದ ರಸ್ತೆಯ ಕಾರಣ ಮೂವರು ಬೈಕ್ ನಲ್ಲಿ ತೆರಳಲು ಸಾಧ್ಯವಾಗದ ಕಾರಣ ತಾಯಿ ದೇವಕ್ಕಿಯೊಂದಿಗೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದoತೆ ಕಾಡಾನೆ ಪೂಜ್ಯ ಮೇಲೆ ಏಕಾಏಕಿ ದಾಳಿ ನಡೆಸಿ ತುಳಿದು ಹಾಕಿದೆ,ಆನೆ ದಾಳಿ ಮಾಡುತ್ತಿದ್ದoತೆ ತಾಯಿ ದೇವಕ್ಕಿ ಜೋರಾಗಿ ಬಾಯಿ ಬಡಿದುಕೊಂಡಿದ್ದು, ಇದನ್ನು ಕೇಳಿ ಚಂಗಪ್ಪ ಸ್ಥಳಕ್ಕೆ ಓಡಿ ಬಂದಿದ್ದಾರೆ. ತಕ್ಷಣವೇ ಕಡಿದಾದ ರಸ್ತೆಯಲ್ಲಿ ಆಸ್ಪತ್ರೆಗೆ ತರುವ ಪ್ರಯತ್ನ ನಡೆಸಲಾಯಿತಾದರೂ, ಅಷ್ಟರಲ್ಲೇ ಪೂಜ್ಯ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕಾಡಾನೆಗಳ ಹಾವಳಿ, ಅಸಮಾರ್ಪಕ ರಸ್ತೆ ಸಂಪರ್ಕ, ದಿನಕ್ಕೆ ಬೆಳಗ್ಗೆ ಸಂಜೆ ಬಂದು ಹೋಗುವ ಬಸ್ಸು.ಇಂತಹ ಕುಗ್ರಾಮವಾಗಿರುವ ಬೆಟ್ಟತೂರು ಗ್ರಾಮದ ಸಮಸ್ಯೆಗೆ ಪರಿಹಾರ ಎನ್ನುವುದೇ ಎದ್ದಿರುವ ಪ್ರಶ್ನೆ.

ಇತ್ತೀಚಿನ ಸುದ್ದಿ

ಜಾಹೀರಾತು