6:50 PM Monday22 - June 2026
ಬ್ರೇಕಿಂಗ್ ನ್ಯೂಸ್
ಚುನಾವಣೆಗಷ್ಟೇ ಅಲ್ಲ, ಸಿದ್ಧಾಂತದ ಬಲವರ್ಧನೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಹರಿಪ್ರಸಾದ್ ಆಯ್ಕೆ: ಮಾಜಿ ಸಿಎಂ… ತೀರ್ಥಹಳ್ಳಿ | ಶಿವರಾಜಪುರ ಬಳಿ ಎರಡು ಕಾರುಗಳ ನಡುವೆ ಭೀಕರ ಅಪಘಾತ: ಸಂಪೂರ್ಣ… Bangalore | ಬಿಡದಿ ಟೌನ್‌ಶಿಪ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಗ್ರಾಮಸ್ಥರ ತಡೆ:… ಬೆಂಗಳೂರು ಅರಮನೆ ಮೈದಾನದಲ್ಲಿ ಬೃಹತ್ ಸಮಾರಂಭ: ಕೆಪಿಸಿಸಿ ಅಧ್ಯಕ್ಷ ಗದ್ದುಗೆ ಏರಿದ ಖಡಕ್… Bangalore | ನಾಗಸಂದ್ರ ಮೆಟ್ರೋ ನಿಲ್ದಾಣದ ತುರ್ತು ನಿರ್ಗಮನ ದ್ವಾರದಲ್ಲಿ ಶಾರ್ಟ್ ಸಕ್ಯೂಟ್;… ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ

ಇತ್ತೀಚಿನ ಸುದ್ದಿ

ಹೊನ್ನಾರು ರಂಗೋತ್ಸವ: 26ರ ವರೆಗೆ ಕಲಾಸಕ್ತರಿಗೆ ನಾಟಕ ವೀಕ್ಷಿಸುವ ಸದಾವಕಾಶ

23/02/2026, 20:02

ಬೆಂಗಳೂರು(reporterkarnataka.com): ರಂಗಭೂಮಿ ಶಿಕ್ಷಕರ ನೇಮಕಾತಿಯನ್ನು ಸರ್ಕಾರ ಪರಿಗಣಿಸಲಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಅವರು ನಟರಂಗ, ಬೆನಕ, ಸಮುದಾಯ, ಸ್ಪಂದನ, ಕಲಾಗಂಗೋತ್ರಿ ಹಾಗೂ ರಂಗಸಂಪದ ನಾಟಕ ತಂಡಗಳ ಸುವರ್ಣ ಮಹೋತ್ಸವದ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ *ಹೊನ್ನಾರು ರಂಗೋತ್ಸವ* ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
26ರ ವರೆಗೆ ಕಲಾಸಕ್ತರಿಗೆ ನಾಟಕಗಳನ್ನು ವೀಕ್ಷಿಸುವ ಸದವಕಾಶ ದೊರೆತಿದೆ. ನಾಟಕ ತಂಡಗಳು ಐವತ್ತು ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಹಮ್ಮಿಕೊಂಡಿರುವ ರಂಗೋತ್ಸವ ಅತ್ಯಂತ ಸೂಕ್ತವಾಗಿದೆ ಎಂದರು.


ಉಮಾಶ್ರೀ, ಪ್ರಕಾಶ್ ರಾಜ್ ಸೇರಿದಂತೆ ಬಹುತೇಕ ರಂಗಭೂಮಿಕಲಾವಿದರು ಚಲನಚಿತ್ರ ಕ್ಷೇತ್ರದಲ್ಲಿ ಬೆಳೆದಿದ್ದಾರೆ. ನಟನೆ ಎಲ್ಲರಿಗೂ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

*ಸಂದೇಶಗಳುಳ್ಳ ಸಿನಿಮಾಗಳು ವಿರಳ;*
ಹಿಂದಿನ ಕಾಲದ ಸಿನಿಮಾಗಳಲ್ಲಿ ಸಂದೇಶಗಳಿರುತ್ತಿತ್ತು. ಇಂದಿನ ಸಿನಿಮಾಗಳಲ್ಲಿ ಸಮಾಜಕ್ಕೆ ಸಂದೇಶಗಳುಳ್ಳ ಸಿನಿಮಾಗಳು ವಿರಳ ಅಥವಾ ಇಲ್ಲವೇ ಇಲ್ಲ ಎಂಬಂತಾಗಿದೆ ಎಂದರು.
ರಂಗಭೂಮಿ ಹಿನ್ನೆಲೆಯ ಕಲಾವಿದರು ಹೆಚ್ಚು ಪಳಗಿರುತ್ತಾರಲ್ಲದೆ ಜನಪ್ರಿಯರೂ ಆಗಿರುತ್ತಾರೆ ಎಂದರು.
ವಿಧಾನ ಪರಿಷತ್ ಸದಸ್ಯೆ ಹಾಗೂ ಹಿರಿಯ ಕಲಾವಿದೆ ಉಮಾಶ್ರೀ, ಚಿತ್ರನಟರಾದ ಮುಖ್ಯಮಂತ್ರಿ ಚಂದ್ರು, ಪ್ರಕಾಶ್ ರಾಜ್, ಹಿರಿಯ ಕಲಾವಿದರಾದ ದತ್ತಣ್ಣ, ಗಿರಿಜಾ ಲೋಕೇಶ್, ನಟ, ನಿರ್ದೇಶಕ ಟಿ. ಎಸ್ ನಾಗಾಭರಣ, ಹೊನ್ನಾರು ರಂಗೋತ್ಸವ ಸಂಚಾಲಕರಾದ ಶ್ರೀನಿವಾಸ ಜಿ. ಕಪ್ಪಣ್ಣ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು