ಇತ್ತೀಚಿನ ಸುದ್ದಿ
ವಿರಾಜಪೇಟೆ: ಸ್ಪಿoಕ್ಲೆರ್ ಅಳವಡಿಸುವ ವೇಳೆ ವಿದ್ಯುತ್ ಹರಿದು ಕಾಫಿ ಬೆಳೆಗಾರ ಸಾವು
12/02/2026, 11:39
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಾಫಿ ತೋಟದಲ್ಲಿ ನೀರು ಹಾಯಿಸಲು ಸ್ಪಿoಕ್ಲೆರ್ ಪೈಪ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಗೊಂಡು ಕಾಫಿ ಬೆಳೆಗಾರ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಹಾಲುಗುಂದ ಸಂಭವಿಸಿದೆ.

ಸರ್ವೆ ಇಲಾಖೆಯಲ್ಲಿ ನಿವೃತ್ತ ಉದ್ಯೋಗಿ ಆಗಿರುವ ಜಿಮ್ಮ(68) ಮೃತ ದುರ್ದೈವಿ. ಹಾಲುಗುಂದ ಗ್ರಾಮದಲ್ಲಿ ತಮ್ಮ ತೋಟದ ನಡುವೆ 11 ಕೆ. ವಿ ವಿದ್ಯುತ್ ತಂತಿ ಹಾದು ಹೋಗಿದ್ದು,ಈ ತಂತಿ ಸ್ಪಿoಕ್ಲೆರ್ ಪೈಪಿಗೆ ತಗುಲಿ ಅನಾಹುತ ಸಂಭವಿಸಿದ್ದು, ಯಾರೂ ಇಲ್ಲದ ಕಾರಣ ತಕ್ಷಣಕ್ಕೆ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದೆ ಮೃತಪಟ್ಟಿದ್ದು, ಸ್ಥಳೀಯ ನಿವಾಸಿಗಳು ಹಲವು ಭಾರಿ ವಿದ್ಯುತ್ ತಂತಿ ತೆರವು ಮಾಡುವಂತೆ ವಿದ್ಯುತ್ ಇಲಾಖೆಗೆ ಮನವಿ ಮಾಡಲಾಗಿದ್ದು, ಘಟನೆಯಿಂದ ಆಕ್ರೋಶಗೊಂಡಿದ್ದಾರೆ. ಘಟನೆಯ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












