10:44 AM Thursday20 - August 2026
ಬ್ರೇಕಿಂಗ್ ನ್ಯೂಸ್
ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ…

ಇತ್ತೀಚಿನ ಸುದ್ದಿ

ಸೋಮವಾರಪೇಟೆ: 1 ಕೆಜಿ 628 ಗ್ರಾಂ ಗಾಂಜಾ ವಶ; ಯುವತಿ ಸಹಿತ 5 ಮಂದಿ ಆರೋಪಿಗಳ ಬಂಧನ

05/02/2026, 12:50

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾಪುರದಲ್ಲಿ ದಾಳಿ ನಡೆಸಿ 4 ಮಧ್ಯವೆಸನಿಗಳನ್ನು ಹಾಗೂ ಶನಿವಾರ ಸಂತೆ ಠಾಣಾ ವ್ಯಾಪ್ತಿಯ ಕೊಡ್ಲಿಪೇಟೆಯಲ್ಲಿ ಒಬ್ಬ ಆರೋಪಿಯನ್ನು ನಿಷೇಧಿತ ಮಾದಕ ವಸ್ತುವಿನೊಂದಿಗೆ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳಿಂದ 1ಕೆಜಿ 628 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಸೋಮವಾರಪೇಟೆ ಹಾಗೂ ಶನಿವಾರ ಸಂತೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಪ್ರಕರಣದಲ್ಲಿ ಯುವತಿ ಒಬ್ಬಳು ಈ ಮಾದಕ ವ್ಯಸನಕ್ಕೆ ಬಲಿಯಾಗಿರೋದು ಮಾತ್ರ ದುರಂತವಾಗಿದೆ.

*ಬಂಧಿತ ಆರೋಪಿಗಳು:*

* ಮಾದಾಪುರದ ಆಕಾಶ್ ಎಂ ಸಿ (21)

.ಮಡಿಕೇರಿಯ ಹೊಸ ಬಡಾವಣೆಯ ತ್ರಿಶೂಲ್ ಪಿ. ಎಲ್ (20)

.ಮಡಿಕೇರಿಯ ಮಂಗಳದೇವಿ ನಗರದ ನಿತ್ಯ ಎಂ.ಸಿ (20)

.ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಜಾಲಸೂರು ವಿನ ಧನುಷ್ ಕೆ. ಆರ್ (22).ಕೊಡ್ಲಿಪೇಟೆಯ ಶಾಂತಪುರದ ಭರತ್ ಕೆ ಎಂ (28)

*ತನಿಖಾ ತಂಡ*
ಸೋಮವಾರಪೇಟೆ ಡಿ.ಎಸ್ಪಿ ಚಂದ್ರಶೇಖರ್, ಶನಿವಾರ ಸಂತೆ ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣರಾಜು. ಜಿ, ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ರಾಜು ಪಿ.ಕೆ, ಶನಿವಾರ ಸಂತೆ ಸಬ್ ಇನ್ಸ್ಪೆಕ್ಟರ್ ಚಂದ್ರ ಹೆಚ್. ವೈ, ಪೊಲೀಸ್ ಇನ್ಸ್ಪೆಕ್ಟರ್, ಗೋವಿಂದ್ ರಾಜ್ ಎಚ್ ಸಿ, ಸುಂಟಿಕೊಪ್ಪ ಪಿಎಸ್ಐ ಮೋಹನ್ ರಾಜು. ಪಿ, ಸೋಮವಾರಪೇಟೆ ಪಿಎಸ್ಐ ಗೋಪಾಲ ಎಂ. ಎ, ಡಿ ಸಿ.ಆರ್ ಬಿಯ ಗೋಪಾಲ ಎಚ್. ಸಿ, ನಿರಂಜನ್ ಹೆಚ್ ಸಿ
ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕುಮಾರಿ ಬಿಂದುಮಣಿ ಆರ್.ಎನ್ ರವರು ಶ್ಲಾಘಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು