1:06 PM Thursday29 - October 2026
ಬ್ರೇಕಿಂಗ್ ನ್ಯೂಸ್
ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಗೆದ್ದು ಎನ್‌ಡಿಎ ಅಧಿಕಾರಕ್ಕೆ’: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.… Chikkamagaluru | ಕಡೂರು ಬಳಿ ಬಸ್ಸಿಗೆ ಹಿಂಭಾಗದಿಂದ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ… ಮೈಸೂರು ಅರಮನೆ ವಿಚಾರವಾಗಿ ಸಚಿವ ಯತೀಂದ್ರ ಹೇಳಿಕೆಗೆ ವಿರೋಧ: ಪ್ರಮೋದಾದೇವಿ ಒಡೆಯರ್ ಬೆಂಬಲಕ್ಕೆ… Chikkamagaluru | ಆಟೋ‌- ಬೈಕ್ ನಡುವೆ ಮುಖಾಮುಖಿ ‌ಡಿಕ್ಕಿ: ಬೈಕ್ ಸವಾರರ ಸ್ಥಳದಲ್ಲೇ… ಆಯುಧ ಪೂಜೆ–ವಿಜಯ ದಶಮಿ: ನಾಡಿನ ಒಳಿತಿಗಾಗಿ ರಾಜ್ಯಪಾಲ ಡಾ. ಸುಧಾ ಯಾದವ್ ಪ್ರಾರ್ಥನೆ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ | ವಿಜಯದಶಮಿಯೊಳಗೆ ಆರೋಪಿಗಳ ಬಂಧಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ:… ಗೊತ್ತು ಗುರಿ ಇಲ್ಲದ ಟೂರಿಸಂ ನೀತಿ | ನಿರ್ವಹಣೆ ಇಲ್ಲದೆ ಭೂತ ಬಂಗಲೆಯಂತಾದ… ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026

ಇತ್ತೀಚಿನ ಸುದ್ದಿ

ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್‌ನ 244 ಸದಸ್ಯರ ಪಟ್ಟಿಗೆ  ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು

23/05/2021, 18:53

ಮಂಗಳೂರು(reporterkarnataka news): ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯು ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್‌ನ 244 ಸದಸ್ಯರ ಪಟ್ಟಿಯಲ್ಲಿ ಸೇರಿದ್ದು, ಯೆನೆಪೋಯ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಂ.ವಿಜಯ ಕುಮಾರ್ ಅವರು ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್‌ನ ಮೂಲಕ ಯೆನೆಪೋಯ ಆಸ್ಪತ್ರೆಗೆ 5 ಲೀಟರ್ ಸಾಮರ್ಥ್ಯದ 46 ಅಮ್ಲಜನಕ ಸಾಂದ್ರಕಗಳು, 46 ವೋಲ್ಟೆಜ್ ಅಡಾಪ್ಟರ್‌ಗಳು ಮತ್ತು  11,500 ಎನ್  95 ಮುಖಕವಚಗಳನ್ನು ಉಚಿತವಾಗಿ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್‌ನ ನಿರ್ದೇಶಕ ಡಾ.ಆರ್.ಎ.ಬಾದ್ವ ಮತ್ತು ಮುಂಬೈನ ರಾಷ್ಟ್ರೀಯ ಕ್ಯಾನ್ಸರ್ ಗ್ರಿಡ್‌ನ ಸಂಯೋಜಕ ಡಾ.ಸಿ.ಎಸ್.ಪ್ರಮೇಶ್ ಹಲವಾರು ವೆಬಿನಾರ್ ಆಯೋಜಿಸುವ ಮೂಲಕ ಕೋವಿಡ್-19

ಸಾಂಕ್ರಾಮಿಕ ರೋಗದ ಮೊದಲ ಅಲೆಯ ಸಮಯದಲ್ಲಿ ಸಾಕಷ್ಟು ಉಪ ಕ್ರಮಗಳನ್ನು ಕೈಗೊಂಡಿದ್ದರು. ಹಾಗೂ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅದರ ನಿರ್ವಹಣೆಗಾಗಿ ಶ್ರಮಿಸಿದ್ದರು. ಸದ್ಯ ನಮ್ಮ ದೇಶ ಎದುರಿಸುತ್ತಿರುವ ಎರಡನೇ ಅಲೆಯಲ್ಲಿ ಕೋವಿಡ್ ರೋಗಿಗಳಿಗೆ ಅಮ್ಲಜನಕ ಸಾಂದ್ರಕಗಳನ್ನು ಚಿಕಿತ್ಸೆ ನೀಡುವ ಕೇಂದ್ರಗಳಿಗೆ ವಿತರಿಸುವ ಮೂಲಕ ಅಗತ್ಯ ನೆರವನ್ನು ನೀಡುತ್ತಲಿದ್ದಾರೆ ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳಿಂದ ದೇಣಿಗೆ ಸಂಗ್ರಹಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸುತ್ತಿದ್ದಾರೆ ಎಂದು ಯೆನೆಪೋಯ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು