10:25 AM Saturday17 - October 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನಿಲ್ಲಿಸಿದ್ದ ಜಾಗದಲ್ಲೇ 2 ಎಲೆಕ್ಟ್ರಿಕ್ ಸ್ಕೂಟರ್ ಸುಟ್ಟು ಭಸ್ಮ ಮೈಸೂರು ದಸರಾ ಫಲಪುಷ್ಪ ಪ್ರದರ್ಶನ | ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ಬೆಂಗಳೂರು | ವಿಶ್ವ ದೃಷ್ಟಿ ದಿನದ ಅಂಗವಾಗಿ ವರ್ಲ್ಡ್ ಬ್ಲೈಂಡ್ ವಾಕ್ 2026 ಕೊಡಗು ಜಿಲ್ಲೆಯ 5 ತಾಲೂಕು ಪಂಚಾಯತ್ ವರ್ಗವಾರು ಮೀಸಲು ಪಟ್ಟಿ ಪ್ರಕಟ,: 48… ಮತದಾರರ ಹೆಸರು ತೆಗೆದುಹಾಕುವಾಗ ಅವರು ಅನುಮತಿ ಪಡೆದಿದ್ದರೇ?: ಸಿಜೆಪಿ ನಾಯಕ ಅಭಿಜೀತ್ ದಿಪ್ಕೆ ಟೈಮ್ಸ್ ಹೈಯರ್ ಎಜ್ಯುಕೇಶನ್ (THE) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027: ಗಲ್ಫ್ ಮೆಡಿಕಲ್… ಐತಿಹಾಸಿಕ ಮಂಗಳೂರು ದಸರಾ ಮಹೋತ್ಸವ 11ರಿಂದ ಆರಂಭ: 12ರಂದು ಮುಖ್ಯಮಂತ್ರಿ ಡಿ. ಕೆ.… ಫಾಸ್ಟ್‌ಟ್ಯಾಗ್‌ ಯುಗ ಅಂತ್ಯ?: ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ಸರಕಾರ… ಉಸ್ತುವಾರಿ ಸಚಿವ ಖಾದರ್ ಮಧ್ಯಸ್ಥಿಕೆ: ಎಂಆರ್‌ಪಿಎಲ್ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ 1.20… ಬೆಂಗಳೂರು | ಅಕ್ಟೋಬರ್ 2ರಂದು ಪ್ರಾಜೆಕ್ಟ್ ಶೆಲ್ಟರ್‌ನಿಂದ ‘ಅಸಹಾಯಕರಿಗೆ ಸೂರು’ ಅಭಿಯಾನಕ್ಕೆ 3…

ಇತ್ತೀಚಿನ ಸುದ್ದಿ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಬಿಜೆಪಿ ಕಾರ್ಯಕರ್ತರ ಸ್ನೇಹ ಸಮ್ಮಿಲನ ಮತ್ತು ಶಕ್ತಿಕೇಂದ್ರ, ಬಿ.ಎಲ್.ಎ-2 ಸಮಾವೇಶ

04/01/2026, 23:18

ಯಶವಂತಪುರ(reporterkarnataka.com): ಬೆಂಗಳೂರು ಪೋಟೋ ಸ್ಟೂರೀಸ್ ಆಂಡ್ ಕನ್ವನ್ವೇನ್ ಸಭಾಂಗಣದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಕ್ತಿ ಕೇಂದ್ರ ಮತ್ತು ಬಿ.ಎಲ್.ಎ-2 ಗಳ ಸಮಾವೇಶ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಶಾಸಕರಾದ ಸಿ.ಕೆ.ರಾಮಮೂರ್ತಿರವರು, ವಿಧಾನ ಪರಿಷತ್ ಸದಸ್ಯರುಗಳಾದ ಗೋಪಿನಾಥ್ ರೆಡ್ಡಿ, ಎನ್.ರವಿಕುಮಾರ್, ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು, ಬಿ.ಎಲ್.ಎ.2 ಉಸ್ತುವಾರಿ ಜಗದೀಶ್ ಹಿರೇಮನಿ, ಮಂಡಲದ ಅಧ್ಯಕ್ಷರಾದ ಎನ್.ಬಿ.ಮಂಜುನಾಥ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಾಸಕರಾದ ಸಿ.ಕೆ.ರಾಮಮೂರ್ತಿ ಅವರು ಮಾತನಾಡಿ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ 3 ಲಕ್ಷದ 60 ಸಾವಿರ ಮತದಾರರು ಇದ್ದಾರೆ, 270ಕ್ಕೂ ಹೆಚ್ಚು ಬೂತ್ ಗಳಿಗೆ. ಬಿ.ಎಲ್.ಎ-2ಗಳಿಗೆ ಒಬ್ಬ ವ್ಯಕ್ತಿಯನ್ನು ಗೆಲ್ಲಿಸುವ ಶಕ್ತಿ ಇದೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಉತ್ತಮ ಸಂಘಟನೆಯಿಂದ ಸದೃಢವಾಗಿದೆ.
ಲೋಕಸಭಾ ಚುನಾವಣೆಯಲ್ಲಿ 50 ಸಾವಿರ ಲೀಡ್ ನೀಡಿದ್ದೀರ. ಅತಿ ಹೆಚ್ಚು ಸದಸ್ಯತ್ವ ಹೊಂದಿರುವ ಕ್ಷೇತ್ರವಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಖಚಿತ, ಕೆ.ಉಮೇಶ್ ಶೆಟ್ಟಿರವರು ಶಾಸಕರಾಗುವುದು ನಿಶ್ಚಿತ ಎಂದು ಹೇಳಿದರು.
ಗೋಪಿನಾಥ ರೆಡ್ಡಿರವರು ಮಾತನಾಡಿ ಶಿಸ್ತ್ರು, ಬದ್ದತೆ, ವಿಶ್ವಾಸ, ಸಕ್ರಿಯವಾಗಿ ಪ್ರತಿಯೊಬ್ಬ ಕಾರ್ಯಕರ್ತನಿಗೆ ಇರಬೇಕು.
ರಾಜಕೀಯದಲ್ಲಿ ಪಾರದರ್ಶಕ ,ಶುದ್ದ ಆಡಳಿತ ತರಬೇಕು ಎಂದರೆ ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ. ದೇಶ ಮೊದಲು ಎಂಬ ತತ್ವದ ಮೇಲೆ ಬಿಜೆಪಿ ಪಕ್ಷ ನಡೆಯುತ್ತಿದೆ.
ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುತ್ತಾರೆ, ವಿಧಾನಸಭಾ ಚುನಾವಣೆ ಬಂದಾಗ ಕಡಿಮೆ ಮತ ಬರುತ್ತದೆ. ಅದರೆ ಲೋಕಸಭೆಗೆ ಹೆಚ್ಚು ಮತ , ವಿಧಾನಸಭೆ ಚುನಾವಣೆ ಕಡಿಮೆ ಮತ ಯಾಕೆ ಎಂಬುದು ಕುರಿತು ಚರ್ಚೆ ಮಾಡಬೇಕು.
ರಾಹುಲ್ ಗಾಂಧಿರವರು ಇವಿಎಮ್ ನಲ್ಲಿ ಓಟ್ ಚೋರಿ ಎಂದು ಸುಳ್ಳು ಅರೋಪ ಮಾಡುತ್ತಿದ್ದಾರೆ.
ನಮ್ಮ ಪಕ್ಷಕ್ಕೆ ಇ.ವಿ.ಎಮ್.ನಿಂದ ಗೆಲ್ಲುತ್ತಿಲ್ಲ , ನಮ್ಮ ಕಾರ್ಯಕರ್ತರಿಂದ ನಾವು ಚುನಾವಣೆ ಗೆಲ್ಲುತ್ತಿದ್ದೇವೆ.
ಬೂತ್ ಕೆಲಸ ಸದೃಢವಾಗಿ ಕೆಲಸ ಮಾಡಿ. ನಗರ ಪ್ರದೇಶದಲ್ಲಿ ಒಂದು ಬೂತ್ ನಲ್ಲಿ 300ರಿಂದ 350 ಮನೆಗಳು, 1200 ಮತದಾರರು ಇರುತ್ತಾರೆ.
ಪ್ರತಿ ಬೂತ್ ಬಿಜೆಪಿ ಪಕ್ಷದ ಭದ್ರಕೋಟೆ ಮಾಡಬೇಕು ಎಂದು ಹೇಳಿದರು.
ಕೆ.ಉಮೇಶ್ ಶೆಟ್ಟಿ ಅವರು ಮಾತನಾಡಿ ಪಕ್ಷದ ಸಂಘಟನೆ ಮುಖ್ಯ. ಬಿ.ಎಲ್.ಎ.-2ಬಹಳ ಡೊಡ್ಡ ಜವಾಬ್ದಾರಿ ಸ್ಥಾನವಾಗಿದೆ.
ಬೂತ್ ಮೊದಲ ಗೆದ್ದರೆ, ವಾರ್ಡ್ ಗೆದ್ದಂತೆ ನಂತರ ವಿಧಾನಸಭೆ, ಲೋಕಸಭಾ ಸ್ಥಾನಗಳನ್ನು ಗೆಲ್ಲಬಹುದು.


ಮನ್ ಕಿ ಬಾತ್ ಪ್ರಧಾನಿ ನರೇಂದ್ರಮೋದಿರವರ ಭಾಷಣ ವೀಕ್ಷಣೆ ಮೊದಲ ಸ್ಥಾನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವಾಗಿದೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವಿನ ಜಯಭೇರಿ ಬಾರಿಸಲು ಇಂದು ದೃಢ ಸಂಕಲ್ಪ ಮಾಡೋಣ.
ಪಕ್ಷ ಸಂಘಟನೆ ನಮ್ಮ ಮೂಲಮಂತ್ರ, ಪಕ್ಷದ ಕೆಲಸವನ್ನು ಎಲ್ಲರು ಸಂಘಟಿತರಾಗಿ ಮಾಡೋಣ. ಪಕ್ಷ ಕೊಟ್ಟ ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತಿದೆ.
ಇನ್ನು ಮೂರು ತಿಂಗಳಲ್ಲಿ ಜಿಬಿಎ ಚುನಾವಣೆ ನಡೆಯಲಿದೆ ನಮ್ಮ ಕ್ಷೇತ್ರದಲ್ಲಿ 13ವಾರ್ಡ್ ಗಳು ಬರಲಿದೆ ಎಲ್ಲ ವಾರ್ಡ್ ಗಳಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಬೇಕು ಎಂದು ಹೇಳಿದರು.
ಕ್ರಾಂತಿರಾಜು, ಡೊಡ್ಡವೀರಯ್ಯ, ದೀಪಕ್ ಮಾಯಸಂದ್ರ, ರಾಮಪ್ಪ, ರಾಜೇಶ್ವರಿ ಬೆಳಗೊಡ, ಜಯರತ್ನ ಶಾಮಣ್ಣ, ಕ್ರಾಂತಿರಾಜು, ಉಷಾರಾಣಿ, ವಸಂತ್ ಕುಮಾರ್, ರಾಜು ಎಸ್. ರವರು ಭಾಗವಹಿಸಿದದರು.

ಇತ್ತೀಚಿನ ಸುದ್ದಿ

ಜಾಹೀರಾತು