12:21 PM Sunday21 - June 2026
ಬ್ರೇಕಿಂಗ್ ನ್ಯೂಸ್
ಮಸ್ಕಿ: ರಾಯಚೂರಿಗೆ AIIMS ಮಂಜೂರಾತಿಗಾಗಿ 1500 ದಿನಗಳ ಧರಣಿ ಸತ್ಯಾಗ್ರಹ: ಕಲ್ಯಾಣ ಕರ್ನಾಟಕದಾದ್ಯಂತ… Chitradurga | ಪರಶುರಾಂಪುರ: ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಎಸ್. ಆರ್. ರಾಜೇಶ್… ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ: ಬಿ.ವೈ. ವಿಜಯೇಂದ್ರಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ… Bangalore | ಕಳ್ಳನ ಹಿಡಿಯಬೇಕಿದ್ದ ಖಾಕಿಯಿಂದಲೇ ಲೂಟಿ!: 20 ಲಕ್ಷ ದೋಚಿದ ಸಿಐಡಿ… ಕುಶಾಲನಗರ | ಹೆತ್ತ ತಾಯಿಯಿಂದಲೇ ಮಗನ ಬಲವಂತದ ಮತಾಂತರ: ಇಬ್ಬರ ಬಂಧನ ಗ್ಯಾರಂಟಿ ಸೌಲಭ್ಯಕ್ಕೆ ಹೊಸದಾಗಿ ಅರ್ಜಿ ಬೇಡ, ಮರು ಪರಿಶೀಲನೆ ಮಾತ್ರ: ಸಿಎಂ ಸಭೆಯಲ್ಲಿ… ವಿಧಾನ ಪರಿಷತ್ ಚುನಾವಣೆ ಫಲಿತಾಂಶ: ಫಲಿಸಿದ ಸಿಎಂ ಡಿಕೆಶಿ ರಣತಂತ್ರ; 5ರಲ್ಲಿ ಕೈ… ಬಾರ್ಬರ್ ಶಾಪ್‌ನಿಂದ ಬಿ-ಸ್ಕೂಲ್‌ವರೆಗೆ: ತಂದೆಯ ಕತ್ತರಿ ಹಿಡಿದ ಬಿಬಿಎ ವಿದ್ಯಾರ್ಥಿನಿ ಬಿಂದುಪ್ರಿಯಾ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕರಾವಳಿ ಸಹಿತ ರಾಜ್ಯಾದ್ಯಂತ ಬಿರುಸಿನ ಮಳೆ ನಿರೀಕ್ಷೆ ದುಬಾರೆ ದುರಂತದ ಬಳಿಕ ರಾಜ್ಯದ ಆನೆ ಶಿಬಿರಗಳಲ್ಲಿ ಹೊಸ ನಿಯಮ ಜಾರಿ: ಪ್ರವಾಸಿಗರ…

ಇತ್ತೀಚಿನ ಸುದ್ದಿ

ಒಂದೇ ದಿನ 1,407 ಮೈಸೂರು ಸಿಲ್ಕ್ ಸೀರೆ ಮಾರಾಟ: ದಾಖಲೆಯ 7.13 ಕೋಟಿ ರೂಪಾಯಿ ವಹಿವಾಟು

10/03/2026, 16:50

ಗಿರಿಧರ್ ಕೊಂಪುಳಿರ ಮೈಸೂರು

info.reporterkarnataka@gmail.com

ಕರ್ನಾಟಕ ರಾಜ್ಯ ರೇಷ್ಮೆ ನಿಗಮ (ಕೆಎಸ್‌ಐಸಿ) ಒಂದೇ ದಿನದಲ್ಲಿ 1,407 ಮೈಸೂರು ರೇಷ್ಮೆ ಸೀರೆಗಳನ್ನು ಮಾರಾಟ ಮಾಡಿ 7.13 ಕೋಟಿ ವಹಿವಾಟು ನಡೆಸಿದೆ. ಮಹಿಳಾ ದಿನಾಚರಣೆಯ ಅಂಗವಾಗಿ ಮಾ. 8ರಂದು ಕೆಎಸ್‌ಐಸಿ ನಡೆಸುವ ವಿವಿಧ ಮಳಿಗೆಗಳು ಮತ್ತು ಶೋರೂಂಗಳಲ್ಲಿ ಭರ್ಜರಿ ವಹಿವಾಟು ನಡೆದಿದೆ. ಇದು ಮೈಸೂರು ರೇಷ್ಮೆ ಸೀರೆಯ ಜನಪ್ರಿಯತೆ ಮತ್ತು ಖ್ಯಾತಿಯನ್ನು ಮತ್ತೊಮ್ಮೆ ದೃಢಪಡಿಸಿದೆ.

*ಶುದ್ಧತೆಗೆ ಹೆಸರುವಾಸಿ:*
ಮೈಸೂರು ರೇಷ್ಮೆ ಸೀರೆಗಳು ಶೇ.100 ಶುದ್ಧತೆ ಮತ್ತು ನೈಸರ್ಗಿಕ ರೇಷ್ಮೆ ಬಳಕೆಗೆ ಪ್ರಸಿದ್ಧವಾಗಿವೆ. ಕಾವೇರಿ ನೀರನ್ನು ಬಳಸಿ ತಯಾರಿಸಲಾದ ನೈಸರ್ಗಿಕ ರೇಷ್ಮೆ ನೂಲಿನಿಂದ ಈ ಸೀರೆಗಳನ್ನು ನೇಯಲಾಗುತ್ತದೆ. ಇದರಿಂದ ಇತರ ರೇಷ್ಮೆ ಸೀರೆಗಳಿಗೆ ಹೋಲಿಸಿದರೆ ಕೆಎಸ್‌ಐಸಿ ಸೀರೆಗಳು ಹೆಚ್ಚು ಕೋಮಲ, ನುಣುಪಾಗಿದ್ದು ವಿಶಿಷ್ಟ ಮೃದುವನ್ನು ಹೊಂದಿರುತ್ತವೆ.
ಅಲ್ಲದೆ ಈ ಸೀರೆಗಳಲ್ಲಿ ಶೇ.100 ಶುದ್ಧ ಚಿನ್ನದ ಜರಿ ಬಳಸಲಾಗುತ್ತದೆ. ಇದರಿಂದ ಸೀರೆಗಳಿಗೆ ವಿಶೇಷ ಆಕರ್ಷಣೆ ಸಿಗುವುದರ ಜೊತೆಗೆ ದೀರ್ಘಾವಧಿಯ ಬಾಳಿಕೆ ಕೂಡ ದೊರಕುತ್ತದೆ.
ವಿವಾದದ ನಡುವೆಯೂ ಬೇಡಿಕೆ
ಇತ್ತೀಚೆಗೆ ತಿ.ನರಸೀಪುರ ಪಟ್ಟಣದಲ್ಲಿರುವ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಸರ್ಕಾರ ಮುಂದಾದ ಹಿನ್ನೆಲೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹಲವು ದಿನಗಳ ಕಾಲ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರಿಂದ ಸೀರೆಗಳ ಉತ್ಪಾದನೆ ಕುಂಠಿತವಾಗಿತ್ತು.
ಈ ಎಲ್ಲದರ ನಡುವೆಯೂ ಮಹಿಳಾ ದಿನಾಚರಣೆಯಂದೇ 1,407 ಸೀರೆಗಳು ಮಾರಾಟವಾಗಿರುವುದು ಮೈಸೂರು ರೇಷ್ಮೆಯ ಬೇಡಿಕೆಯನ್ನು ಸ್ಪಷ್ಟಪಡಿಸಿದೆ. ಭೌಗೋಳಿಕ ಸೂಚಿ (ಎಐ) ಮಾನ್ಯತೆ ಹೊಂದಿರುವ ಈ ಪಾರಂಪರಿಕ ಕಾರ್ಖಾನೆ ರಾಜರ ಕಾಲದಿಂದಲೇ ತನ್ನ ಮೌಲ್ಯವನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ.

*ರಂಜಾನ್‌, ಯುಗಾದಿಗೆ ಹೆಚ್ಚುವರಿ ಬೇಡಿಕೆ:*
ಮುಂದಿನ ರಂಜಾನ್‌ ಹಾಗೂ ಯುಗಾದಿ ಹಬ್ಬಗಳ ಸಂದರ್ಭದಲ್ಲಿ ಮೈಸೂರು ರೇಷ್ಮೆ ಸೀರೆಗಳಿಗೆ ಇನ್ನಷ್ಟು ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ. ಇತ್ತೀಚೆಗೆ ಸಿಬ್ಬಂದಿ ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳಿರುವುದರಿಂದ ಸೀರೆಗಳ ಉತ್ಪಾದನೆ ಪುನರಾರಂಭವಾಗಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ.

*ಇನ್ನಷ್ಟು ಮಾರಾಟ ನಿರೀಕ್ಷೆ:*
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಹಿವಾಟು ಸ್ವಲ್ಪ ಕಡಿಮೆಯಾಗಿದೆ. ಬಹುಶಃ ರಂಜಾನ್‌ ಮತ್ತು ಯುಗಾದಿ ಮುಗಿಯುವಷ್ಟರಲ್ಲಿ ಆ ಮಟ್ಟದ ವಹಿವಾಟು ತಲುಪಬಹುದು. ಯುಗಾದಿ ಹಾಗೂ ರಂಜಾನ್‌ ವೇಳೆಗೆ ಇನ್ನೂ 3ರಿಂದ 4 ಸಾವಿರ ಸೀರೆಗಳು ಮಾರಾಟವಾಗುವ ನಿರೀಕ್ಷೆ ಇದೆ. ಸದ್ಯ ಸೀರೆಗಳ ಉತ್ಪಾದನೆಯಲ್ಲಿ ಯಾವುದೇ ತೊಂದರೆ ಇಲ್ಲ. ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
”ಗುಣಮಟ್ಟದಲ್ಲಿ ಮೈಸೂರು ರೇಷ್ಮೆಗೆ ಸರಿಸಾಟಿಯಿಲ್ಲ. ನಮ್ಮ ಅಜ್ಜಿ 70 ವರ್ಷದ ಹಿಂದೆ ಖರೀದಿಸಿದ್ದ ಸೀರೆ ಇಂದಿಗೂ ಚೆನ್ನಾಗಿದೆ. ಶುದ್ಧ, ನೈಸರ್ಗಿಕ ರೇಷ್ಮೆ ಬಳಸಿ, ಚಿನ್ನ, ಬೆಳ್ಳಿ ಲೇಪಿತ ಜರಿಕೆಯಿರುವುದು ಸೀರೆಯ ಅಂದ ಹೆಚ್ಚಿಸುತ್ತದೆ. ಇಂತಹ ಒಂದು ಉತ್ಪನ್ನ ನಮ್ಮ ನಾಡಿನ ಪಾರಂಪರಿಕ ಕಾರ್ಖಾನೆಯಲ್ಲಿ ತಯಾರಾಗುತ್ತದೆ ಎನ್ನುವುದೇ ಹೆಮ್ಮೆ” – ಮಂಜುಳಾ ಎಚ್‌.ಎನ್‌, ಶಿಕ್ಷಕಿ, ನಂಜನಗೂಡು.
ಶೋ ರೂಂ ವಹಿವಾಟು – ಸೀರೆಗಳು

ಜ್ಯುಬಿಲಿ ಶೋ ರೂಂ 1,17,82,527 – 200
ಜಯನಗರ 95,36,877 – 161
ಗಾಂಧಿ ಬಜಾರ್‌ 92,90,944 – 189
ಫ್ಯಾಕ್ಟರಿ ಶೋ ರೂಂ 80,66,258 – 179
ಮಲ್ಲೇಶ್ವರ 76,79,020 – 147
ಕಾಳಿದಾಸ ರಸ್ತೆ 53,29,648 – 112
ಎಫ್‌ಧಿಕೆಸಿಸಿಐ ಕಟ್ಟಡ 42,80,334 – 87
ಬಸವೇಶ್ವರ ನಗರ 38,49,020 – 83
ಯಾತ್ರಿ ನಿವಾಸ್‌ 36,64,158 – 80
ಕೆ.ಆರ್‌.ಸರ್ಕಲ್‌ 33,56,741 – 82
ಮೃಗಾಲಯ ಶೋ ರೂಂ (ಹೊಸದು) 33,27,696 – 68
ಚನ್ನಪಟ್ಟಣ 11,93,928 – 17
ಓಲ್ಡ್ ಜಡ್‌ ಎಸ್‌ಆರ್‌ – 65,229 02
ಒಟ್ಟು 7,13,62,380 ರೂಪಾಯಿ – 1407

ಇತ್ತೀಚಿನ ಸುದ್ದಿ

ಜಾಹೀರಾತು