9:56 PM Sunday9 - August 2026
ಬ್ರೇಕಿಂಗ್ ನ್ಯೂಸ್
ವೀರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಅಟ್ಟಹಾಸ ಮೆರೆದ ಚಿರತೆ ಸೆರೆ ವಿರಾಜಪೇಟೆ | ಮಾಲ್ದಾರೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ; ಗಂಭೀರ ಗಾಯ Kodagu | ವಿರಾಜಪೇಟೆ ಬಿಇಒ ಹೃದಯಾಘಾತದಿಂದ ಬಸ್ನಲ್ಲೇ ನಿಧನ ಚಿಕ್ಕಮಗಳೂರು | ಅಜ್ಜಂಪುರ ಬಳಿ ಸಚಿವ ಕೆ.ಜೆ.ಜಾರ್ಜ್ ಬೆಂಗಾಲು ವಾಹನ ಅಪಘಾತ ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:…

ಇತ್ತೀಚಿನ ಸುದ್ದಿ

ಎತ್ತಿನಭುಜ: ಮೀಸಲು ಅರಣ್ಯದಲ್ಲಿ  ಮ್ಯಾರಥಾನ್ ಗೆ ಪರಿಸರಪ್ರಿಯರ ವಿರೋಧ

27/11/2021, 09:15

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

The Malnad Ultra ಎಂಬ ಸಂಸ್ಥೆಯು ಮೂಡಿಗೆರೆಯ ಎತ್ತಿನಭುಜ ಗುಡ್ಡದ ವ್ಯಾಪ್ತಿಯಲ್ಲಿ ಇಂದಿನಿಂದ ಮ್ಯಾರಥಾನ್ ಅನ್ನು ಆಯೋಜಿಸಿದೆ. 


ಆದರೆ ಈ ಮ್ಯಾರಥಾನ್ ಪಶ್ಚಿಮಘಟ್ಟ ಮೀಸಲು ಅರಣ್ಯದಲ್ಲಿ ಹಾದು ಹೋಗುವುದರಿಂದ ಪರಿಸರ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವ ಉದ್ದೇಶಕ್ಕೆ, ಯಾರ ಉದ್ಧಾರಕ್ಕೆ  ಮಾಹಿತಿಯಂತೆ 500 ಜನರ ಭಾಗವಹಿಸಲಿರುವ  ಮ್ಯಾರಥಾನ್ ಇದು. ಇಷ್ಟೊಂದು ಜನ ಒಟ್ಟಿಗೇ ಚಟುವಟಿಕೆ ಪ್ರಾರಂಭಿಸಿದರೆ ಪರಿಸರ ಸೂಕ್ಷ್ಮ ಪ್ರದೇಶದ ಗತಿಯೇನು !? ಇವರ ಶೌಚ ಕ್ರಿಯೆಯಿಂದಾಗಿ ಅಲ್ಲಿನ ಜಲಮೂಲಗಳು ಕುಲಗೆಟ್ಟು ಹೋಗುವುದಕ್ಕೆ ಯಾರು ಹೊಣೆ ? ಜಿಲ್ಲಾಡಡಳಿತ, ಅರಣ್ಯ ಇಲಾಖೆ ಹೇಗೆ ಇಂತಹ Mega Event ಗೆ ಅನುಮತಿ ನೀಡಿತು.? ನಮ್ಮ ಪ್ರಶ್ನೆಗಳಿಗೆ ಜಿಲ್ಲಾ ಉಪಸಂರಕ್ಷಣಾಧಿಕಾರಿಗಳು ಬರೀ ಹಾರಿಕೆಯ ಉತ್ತರವನ್ನಷ್ಟೇ ನೀಡುತ್ತಿದ್ದಾರೆ. 


ಈ ಮ್ಯಾರಥಾನ್ ನ  ಸಂಚಾಲಕರೇ ಮಾಹಿತಿ ನೀಡಿರುವಂತೆ ಮ್ಯಾರಥಾನ್ ನಲ್ಲಿ ಭಾಗವಹಿಸುವವರಿಗೆ ತಲಾ 3000-3500 ರುಪಾಯಿ  ನಿಗದಿಪಡಿಸಲಾಗಿದೆ. 3000*400 ಜನ ಎಂದುಕೊಂಡರೂ 12 ಲಕ್ಷವಾಯಿತು. ಯಾವುದೋ ಖಾಸಗಿ ಈವೆಂಟ್ ಸಂಸ್ಥೆಗೆ ಲಾಭ ಮಾಡಿಕೊಳ್ಳುವ ಸಲುವಾಗಿ ಜಿಲ್ಲಾಡಳಿತ ಪಶ್ಚಿಮಘಟ್ಟ ವನ್ನು ಧಾರೆಯೆರೆಯಿತಾ ? ಎಂಬ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ

ಇತ್ತೀಚಿನ ಸುದ್ದಿ

ಜಾಹೀರಾತು