5:13 AM Wednesday17 - June 2026
ಬ್ರೇಕಿಂಗ್ ನ್ಯೂಸ್
ವಿದ್ಯಾರ್ಥಿನಿ ಜೊತೆ ಅನೈತಿಕ ಸಂಬಂಧ ಆರೋಪ: ಕರ್ನಾಟಕ ವಿವಿ ಪ್ರೊ. ದೇವರಾಜನ್ ತಂಗದುರೈ… ವಿಧಾನ ಪರಿಷತ್ ಚುನಾವಣೆ: ದೇವನಹಳ್ಳಿ ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್; ಜನಾರ್ದನ ರೆಡ್ಡಿ… ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ

ಇತ್ತೀಚಿನ ಸುದ್ದಿ

ಎದುರಾಳಿಗಳ ಅಪಪ್ರಚಾರದ ಸವಾಲನ್ನು ತಾಳ್ಮೆಯಿಂದ ಎದುರಿಸೋಣ; ಗೆಲುವು ಖಚಿತ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

23/04/2024, 17:41

ಬಂಟ್ವಾಳ(reporterkarnataka.com): ವರದಿಗಳ ಪ್ರಕಾರವೂ ಕಾಂಗ್ರೆಸ್ ಗೆಲುವು ಖಾತ್ರಿಯಾಗಿದೆ. ಹಾಗೆಂದು ನಾವು ಜಾಗೃತರಾಗಿ ಇರಬೇಕಾಗಿದೆ. ಎದುರಾಳಿ ಪಕ್ಷದವರು ಗೆಲುವಿಗಾಗಿ ಅಪಪ್ರಚಾರದ ಹಾದಿ ಹಿಡಿಯುತ್ತಿದ್ದಾರೆ‌. ಮನೆಮನೆಗೆ ತೆರಳಿ ಗ್ರಂಥ, ತಾಳಿ ಹಿಡಿದು ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದ್ದರಿಂದ ತಾಳ್ಮೆಯಿಂದ ಸವಾಲನ್ನು ಎದುರಿಸಲು ಸಿದ್ಧರಾಗೋಣ. ಮುಂದಿನ ಎರಡು – ಮೂರು ದಿನ ಎಚ್ಚರಿಕೆಯಿಂದ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ವ್ಯಾಪ್ತಿಯ ವಿವಿಧೆಡೆ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.


ದ್ವೇಷದ ರಾಜಕಾರಣ ನಾವೆಂದೂ ಮಾಡಿಲ್ಲ. ಅದರ ಅಗತ್ಯವೂ ನಮಗಿಲ್ಲ. ಕಾಂಗ್ರೆಸ್ ಸರಕಾರದ ಸಾಧನೆ ಹಾಗೂ ನಾವು ಅಭಿವೃದ್ಧಿ ದೃಷ್ಟಿಯಿಂದ ಹಾಕಿಕೊಂಡಿರುವ ಯೋಜನೆಗಳನ್ನು ಜನರಿಗೆ ತಿಳಿಸಿ. ಖಂಡಿತವಾಗಿಯೂ ಜಿಲ್ಲೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಸಾಮರಸ್ಯದ ಗತವೈಭವ ಮರಳಿ ಬರಲಿದೆ ಎಂದು ಅವರು ನುಡಿದರು.
ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ, ಮಾಜಿ ಸಚಿವ ಬಿ. ರಮಾನಾಥ ರೈ ಸೇರಿದಂತೆ ಪ್ರಮುಖರು
ಅಲ್ಲಿಪಾದೆ, ನಾವೂರು, ಅಮ್ಟಾಡಿ, ಮೂಲರಪಟ್ಣ, ಕರ್ಪೆ ಶ್ರೀ ರಾಮಾಂಜನೇಯ ಭಜನಾ ಮಂದಿರ, ಸಿದ್ಧಕಟ್ಟೆ, ರಾಯಿ, ಪಂಜಿಕಲ್ಲು, ಕುಕ್ಕಿಪ್ಪಾಡಿ, ಬಸ್ತಿಕೋಡಿ, ಇರ್ವತ್ತೂರುಪದವು, ಕಾವಲ್ ಕಟ್ಟೆ, ವಗ್ಗ ಮೊದಲಾದ ಪ್ರದೇಶಗಳ ಮತದಾರ, ಕಾರ್ಯಕರ್ತರ ಬಳಿಗೆ ತೆರಳಿ ಮಾತನಾಡಿದರು.
ಮಾಜಿ ಸಚಿವ ಬಿ. ರಮಾನಾಥ ರೈ, ಬ್ಲಾಕ್ ಅಧ್ಯಕ್ಷರಾದ ಬೇಬಿ ಕುಂದರ್, ಸುಧೀಪ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಜಿಲ್ಲಾ ಪ್ರಚಾರ ಸಮಿತಿಯ ಪಿಯೂಷ್ ರೋಡ್ರಿಗಸ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಲವೀನಾ ಮೋರಸ್, ಪಾಣೆಮಂಗಳೂರು ವಲಯ ಅಧ್ಯಕ್ಷೆ ಜಯಂತಿ ಪೂಜಾರಿ, ಸುದರ್ಶನ್ ಜೈನ್, ಬಂಟ್ವಾಳ ಬ್ಲಾಕ್ ಪ್ರಚಾರ ಸಮಿತಿಯ ಜಗದೀಶ್ ಕೊಯಿಲ, ಮಾಯಿಲಪ್ಪ ಸಾಲ್ಯಾನ್, ಕೈಲಾರ್ ಇಬ್ರಾಹಿಂ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಜೋರಾ, ಇಬ್ರಾಹಿಂ ನವಾಜ್, ಮಧುಸೂಧನ್ ಶೆಣೈ, ಸಂಜೀವ ಗೌಡ, ಚೆನ್ನಪ್ಪ ಸಾಲ್ಯಾನ್, ಅಬ್ದುಲ್ ರಹಿಮಾನ್, ಪರಮೇಶ್ವರ್ ನಾಯಕ್, ಜಯಂತ್, ಮಲ್ಲಿಕಾ ವಿ. ಪೂಜಾರಿ, ಸಂಜೀವ ಪೂಜಾರಿ, ನಾವೂರು ವಲಯ ಅಧ್ಯಕ್ಷ ವಿಜಯ, ಉಮೇಶ್ ಕುಲಾಲ್, ಸುರೇಶ್ ಕುಲಾಲ್, ಅಶ್ವನಿ ಕುಮಾರ್, ಕರ್ಪೆ ಶ್ರೀ ರಾಮಾಂಜನೇಯ ಭಜನಾ ಮಂದಿರದ ಅಧ್ಯಕ್ಷ ರಮೇಶ್, ಉಸ್ತುವಾರಿ ಶಶಿಧರ್ ಪ್ರಭು, ಉಪಾಧ್ಯಕ್ಷ ರಮೇಶ್, ದಯಾನಂದ ಗೌಡ, ಪ್ರಕಾಶ್ ಜೈನ್, ವಿಕ್ಟರ್, ದಿನೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಕೃಷ್ಣಪ್ಪ ಕುಲಾಲ್, ವಿಶ್ವನಾಥ ಶೆಟ್ಟಿ, ದೇವಪ್ಪ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು