8:54 PM Tuesday30 - June 2026
ಬ್ರೇಕಿಂಗ್ ನ್ಯೂಸ್
Belagavi | ವಿವಾಹಿತೆಯೊಂದಿಗೆ ಪರಾರಿ: ಯುವಕನ ಮನೆ ಧ್ವಂಸ; ಕುರಿಗಳನ್ನೂ ಹೊತ್ತೊಯ್ದು ಭರ್ಜರಿ… ಮತಾಂತರ ಆರೋಪ: ಕುಶಾಲನಗರದಲ್ಲಿ ಸ್ವಯಂಪ್ರೇರಿತ ಬಂದ್; ಎಲ್ಲವೂ ಸ್ತಬ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬಸ್ಥರಿಂದ ಭೂಕಬಳಿಕೆ ಆರೋಪ: ಮುಖ್ಯಮಂತ್ರಿ ಡಿಕೆಶಿ ಮುಂದೆ ಹಾಸನ… ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;…

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’:  ಜುಲೈ ತಿಂಗಳ ಟಾಪರ್ ಆಗಿ ದೀಕ್ಷಾ ಎ.ಜೆ. ಹಾಗೂ ಶ್ರದ್ಧಾ ಎಂ.ಪಿ. ಆಯ್ಕೆ

10/08/2022, 22:19

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದೊಂದಿಗೆ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಜುಲೈ ತಿಂಗಳ ಟಾಪರ್ ಆಗಿ ಬಾಲಪ್ರತಿಭೆಗಳಾದ ದೀಕ್ಷಾ ಎ.ಜೆ. ಹಾಗೂ ಶ್ರದ್ಧಾ ಎಂ.ಪಿ. ಆಯ್ಕೆಗೊಂಡಿದ್ದಾರೆ.

ದೀಕ್ಷಾ, ಕಾಸರಗೋಡು ಜಿಲ್ಲೆಯ ಬೋವಿಕ್ಕಾನದ ಅಶ್ವಥ್ ಕುಮಾರ್ ಹಾಗೂ ಆಶಾ ದಂಪತಿ ಪ್ರಥಮ ಪುತ್ರಿ. ಈಕೆ ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ಸರಸ್ವತಿ ವಿದ್ಯಾಲಯ ಬೋವಿಕ್ಕಾನದಲ್ಲಿ ಕಲಿತು ಐದನೇ ತರಗತಿಯಿಂದ ಕಾಸರಗೋಡಿನ  ಬಿಇಎಂಎಚ್ ಎಸ್ ಎಸ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ.


ಈಕೆ ಭರತನಾಟ್ಯ, ಜಾನಪದ ನೃತ್ಯವನ್ನು ಗುರುಗಳಾದ ಗಿರೀಜ ಪಂಡಿತ್ 
ಕಾಸರಗೋಡು ಅವರೊಂದು ನಾಟ್ಯತರಂಗಿಣಿ ಯಲ್ಲಿ 8 ವರ್ಷಗಳಿಂದ ಕಲಿಯುತ್ತಿದ್ದಾಳೆ.

ಕೊರೋನಾ ಮಹಾಮಾರಿಯಿಂದ  ನೃತ್ಯ ತರಬೇತಿಯನ್ನು ನಿಲಿಸಬೇಕ್ಕಾಗಿ ಬಂತು. ಇವಳ ರಂಗಪ್ರವೇಶವು ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಶಾಲಾ ಕಲೋತ್ಸವ ಜಿಲ್ಲಾ ಕಲೋತ್ಸವ, ಸಬ್ ಜಿಲ್ಲಾ ಕಲೋತ್ಸವದಲ್ಲಿ ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ A ಗ್ರೇಡ್ ಹಾಗೂ ಗ್ರೂಪ್ ಡ್ಯಾನ್ಸ್ ನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. 50ಕ್ಕಿಂತ ಹೆಚ್ಚಿನ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾಳೆ.

ಸ್ಪಂದನ ಟಿವಿಯಲ್ಲಿ ಮೂರು ಬಾರಿ ನೃತ್ಯ ಪ್ರದರ್ಶನ ನೀಡಿದ್ದಾಳೆ. ವಾಯ್ಸ್ ಆಫ್ ಆರಾಧನ ದಲ್ಲಿ ಎರಡು ಬಾರಿ ವಿಜೇತಳಾಗಿದ್ದಾಳೆ.

ಶ್ರದ್ಧಾ ಎಂ.ಪಿ.  8ನೇ ತರಗತಿ ವಿದ್ಯಾರ್ಥಿನಿ. ಈಕೆಗೆ ಡ್ಯಾನ್ಸ್, ಯಕ್ಷಗಾನ. ಅಭಿನಯ ಅಂದರೆ ತುಂಬಾನೇ ಇಷ್ಟ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇದ್ದರೆ ನಾನು ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಿಸುತ್ತೇನೆ. ನನ್ನ ಮೊದಲನೆಯ ಡ್ಯಾನ್ಸ್ ಜರ್ನಿ ನನ್ನ ಅಮ್ಮನಿಂದಲೇ ಶುರುವಾಯಿತು. ನನ್ನ ಟ್ಯಾಲೆಂಟ್ ಅನ್ನು ಹೊರ ತರಲು ಒಂದು ಒಳ್ಳೆ ವೇದಿಕೆ ನನಗೆ ಸಿಗಲು ತೊಡಗಿತು. ಅದರಲ್ಲಿ ಮುಖ್ಯವಾಗಿ ನನಗೆ ಥ್ಯಾಂಕ್ಸ್ ಹೇಳಬೇಕಂದ್ರೆ ವಾಯ್ಸ್ ಆಫ್ ಆರಾಧನಾ 

ತಂಡಕ್ಕೆ. ಯಾಕೆಂದರೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದೇನೆ.

ಸ್ಪಂದನ ಟಿವಿಯಲ್ಲಿ ಕೂಡ ನನಗೆ ಒಳ್ಳೆಯ ವೇದಿಕೆಯನ್ನು ಒದಗಿಸಿ ಕೊಟ್ಟಿದ್ದಾರೆ. ನೃತ್ಯದಿಂದಲೇ ನನ್ನ ಜರ್ನಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡು ಹೋಗಬೇಕೆಂದು ನನ್ನಾಸೆ.

ಇತ್ತೀಚಿನ ಸುದ್ದಿ

ಜಾಹೀರಾತು