11:56 PM Wednesday5 - August 2026
ಬ್ರೇಕಿಂಗ್ ನ್ಯೂಸ್
2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ… ಮೈಸೂರಿಗೆ ಪ್ರಧಾನಿ ಮೋದಿ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ವಿವೇಕ ಸ್ಮಾರಕ… ಭಾರತದ ಭವ್ಯ ಪರಂಪರೆ ಮೈಸೂರಿನ ಕಣಕಣದಲ್ಲಿದೆ: ವಿವೇಕ ಸ್ಮಾರಕ ಉದ್ಘಾಟಿಸಿ ಪ್ರಧಾನಿ ಮೋದಿ… ಸಿದ್ದಾಪುರ: ದೇವಾಲಯ ಆವರಣದಲ್ಲಿ ಗೋರಿ ನಿರ್ಮಾಣ ಪ್ರಕರಣ; 8 ಮಂದಿ ಬಂಧನ

ಇತ್ತೀಚಿನ ಸುದ್ದಿ

ಅನ್ ಲಾಕ್ ಆಗುತ್ತಿದ್ದಂತೆ ರಥಬೀದಿಯಲ್ಲಿ ಫುಟ್ ಪಾತ್ ಏರುವ ವಾಹನಗಳು !: ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ !!

05/07/2021, 14:52

ಮಂಗಳೂರು(reporterkarnataka news): 

ಇಡೀ ರಾಜ್ಯವೇ ಅನ್ ಲಾಕ್ ಆಗುತ್ತಿದ್ದಂತೆ ಕಡಲನಗರಿ ಮಂಗಳೂರು ಕೂಡ ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡಿದೆ. ಎರಡು ತಿಂಗಳ ಲಾಕ್ ಡೌನ್ ಬಳಿಕ ನಗರದಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರುತ್ತಿದ್ದಂತೆ, ಇತ್ತ ನಗರದ ರಥಬೀದಿಯಲ್ಲಿ ಮಾನವ ನಿರ್ಮಿತ ಸಮಸ್ಯೆಗಳು ತಲೆ ಎತ್ತಲಾರಂಭಿದೆ. ‘ಹಿರಿಯಕ್ಕನ ಚಾಳಿ ಮನೆ ಮಂದಿಗೆ’ ಎನ್ನುವಂತೆ ರಥಬೀದಿಯಲ್ಲಿ ಫುಟ್ ಪಾತ್ ಮೇಲೆ ವಾಹನ ಪಾರ್ಕ್ ಮಾಡುವ ಕೆಟ್ಟ ಪರಂಪರೆ ಮತ್ತೆ ಮುಂದುವರಿದಿದೆ.

ಕಡಲನಗರಿಯ ಒಡಲಿನಲ್ಲಿರುವ ರಥಬೀದಿಯ ನಿವಾಸಿಗಳ ದಶಕಗಳ ಹೋರಾಟದ ಫಲವಾಗಿ ಇಲ್ಲಿನ ರಸ್ತೆ ಅಗಲೀಕರಣ ನಡೆದಿದೆ. ಕಿತ್ತು ಹೋದ ಫುಟ್ ಪಾತ್ ಗಳಿಗೆ ಬಣ್ಣದ ಹಾಸುಗಲ್ಲುಗಳನ್ನು ಹಾಸಲಾಗಿದೆ. ಆದರೆ ಇವೆಲ್ಲವೂ ‘ಎಲ್ಲ ಬಣ್ಣವನ್ನು ಮಸಿ ನುಂಗಿತು’ ಎನ್ನುವ ಹಾಗೆ ಆಗಿದೆ. ಜನರು ಓಡಾಡಲು ಮಾಡಿರುವ ಸುಸಜ್ಜಿತ ಫುಟ್ ಪಾತ್ ಕೆಲವರಿಗೆ ಕಾರು ಪಾರ್ಕಿಂಗ್ ಮಾಡುವ ಸ್ಥಳವಾಗಿ ಪರಿವರ್ತನೆಗೊಂಡಿದೆ. ಇದರಿಂದ ಪಾದಚಾರಿಗಳು ತೊಂದರೆ ಅನುಭವಿಸಬೇಕಾಗಿದೆ.

ಈ ಕುರಿತು ರಿಪೋರ್ಟರ್ ಕರ್ನಾಟಕ ಮಾರ್ಚ್ 13 ಮತ್ತು ಮಾರ್ಚ್ 21ರ ಸಂಚಿಕೆಯಲ್ಲಿ ಸಚಿತ್ರ ವರದಿ ಮಾಡಿತ್ತು. ಇದರ ಪರಿಣಾಮ ಕೆಲವು ದಿನ ಇಲ್ಲಿನ ಫುಟ್ ಪಾತ್ ಗಳು ವಾಹನ ಮುಕ್ತವಾಗಿದ್ದರೂ ಇದೀಗ ಮತ್ತೆ ಅದೇ ದೃಶ್ಯ ಕೆಲವು ಕಡೆ ಕಂಡು ಬರಲಾರಂಭಿಸಿದೆ. ಮಂಗಳೂರು ಅನ್ ಲಾಕ್ ಆಗುತ್ತಿದ್ದಂತೆ ಫುಟ್ ಪಾತ್ ಗೆ ಅಡ್ಡವಾಗಿ ಕಾರು, ದ್ವಿಚಕ್ರ ವಾಹನಗಳನ್ನು ನಿಲ್ಲಿಸುವುದು ಶುರುವಾಗಿದೆ.

ಫುಟ್ ಪಾತ್ ನಲ್ಲಿ ಒಂದಿಬ್ಬರು ವಾಹನಗಳನ್ನು ನಿಲ್ಲಿಸಿದರೆ ಸಾಕು. ನಂತರ ವಾಹನಗಳ ಮಾಲೀಕರು ಸ್ಪರ್ಧೆಗೆ ಇಳಿದಂತೆ ತಮ್ಮ ವಾಹನಗಳನ್ನು ಫುಟ್ ಪಾತ್ ಏರಿಸುತ್ತಾರೆ. ಇವರಿಗಂತು ತಾನು ನಿಯಮ ಮುರಿಯುತ್ತಿದ್ದೇನೆ, ಕಾನೂನು ಉಲ್ಲಘಿಸುತ್ತಿದ್ದೇನೆ ಎಂಬ ಪಾಪ ಪ್ರಜ್ಞೆಯೇ ಇರುವುದಿಲ್ಲ. ಆದರೆ ಜನರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಮಾಡುವ ಪೊಲೀಸ್ ಇಲಾಖೆಯಾದರೂ ಏನು ಮಾಡುತ್ತಿದೆ? ಟ್ರಾಫಿಕ್ ಪೊಲೀಸರು ಇಲ್ಲಿಗೆ ಡ್ಯೂಟಿಗೆ ಬರುವುದಿಲ್ವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು